ದೆಹಲಿ ಆಟೋ ಎಕ್ಸ್ ಪೋದಲ್ಲಿ ಫೋರ್ಡ್ ಸಾಲು ಗಟ್ಟಿ ನಿಂತ ಕಾರುಗಳು
ಸಮಕಾಲೀನ ಮಾರುಕಟ್ಟೆಯಲ್ಲಿ ಫೋರ್ಡ್ ಕಾರುಗಳಿಗೆ ಭಾರಿ ಬೇಡಿಕೆಯಿದೆ. ಇದರಿಂದ ಸಹಜವಾಗಿಯೇ ಮುಂಬರುವ ಆಟೋ ಎಕ್ಸ್ ಪೋದಲ್ಲಿ ಫೋರ್ಡ್ ಇಂಡಿಯಾ ಯಾವೆಲ್ಲ ಮಾದರಿಗಳನ್ನು ಪ್ರದರ್ಶಿಸಲಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಮ್ಮ ನಿಮ್ಮಲ್ಲಿದೆ. ಇದಕ್ಕುತ್ತರ ಇಲ್ಲಿದೆ ನೋಡಿ.
ಪೋರ್ಡ್‌ನಿಂದ ಸಾಲು ಗಟ್ಟಿ ನಿಂತಿರುವ ಕಾರುಗಳು:
- 2014 ಫೋರ್ಡ್ ಫಿಗೊ,
- 2014 ಫೋರ್ಡ್ ಕ್ಲಾಸಿಕ್,
- 2014 ಫೋರ್ಡ್ ಫಿಯೆಸ್ಟಾ,
- 2014 ಫೋರ್ಡ್ ಇಕೊಸ್ಪೋರ್ಟ್ ಮತ್ತು
- ಫೋರ್ಡ್ ಎಂಡೋವರ್

ಹಾಗಿದ್ದರೂ ಈ ಪಟ್ಟಿಯಿಂದ 2014 ಫೋರ್ಡ್ ಮಸ್ಟಾಂಗ್ ಕಣ್ಮರೆಯಾಗಿರುವುದು ಬೇಸರಕ್ಕೆ ಕಾರಣವಾಗಿದೆ. ಈ ಎಲ್ಲ ಫೇಸ್‌ಲಿಫ್ಟ್ ಆವೃತ್ತಿಗಳ ಜತೆಗೆ ಫೋರ್ಡ್ ಕಾ ಕಾನ್ಸೆಪ್ಟ್ ಕಾರು ಸಹ ಮುಂಬರುವ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳ್ಳಲಿದೆ.


Click it and Unblock the Notifications








