ರಫ್ತು ವಹಿವಾಟಿನ ನೆರವಿನಿಂದ ಎಚ್ಚೆತ್ತ ಫೋರ್ಡ್

By Nagaraja

ಅಮೆರಿಕ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿರುವ ಫೋರ್ಡ್, 2014 ಆಗಸ್ಟ್ ತಿಂಗಳ ಮಾರಾಟದಲ್ಲಿ ಶೇಕಡಾ 27ರಷ್ಟು ಏರಿಕೆ ಸಾಧಿಸಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಪ್ರಗತಿ ಸಾಧಿಸುವಲ್ಲಿ ಯಶಸ್ವಿಯಾಗಿದೆ.

2014 ಆಗಸ್ಟ್ ತಿಂಗಳ ಮಾರಾಟದಲ್ಲಿ ಫೋರ್ಡ್ ಒಟ್ಟು 14,092 ಯುನಿಟ್‌ಗಳ ಮಾರಾಟ ದಾಖಲಿಸಿದೆ. ಕಳೆದ ವರ್ಷವಿದು 11,065 ಯುನಿಟ್‌ಗಳಾಗಿತ್ತು.

Ford India

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಫೋರ್ಡ್ ಇಂಡಿಯಾ ಮಾರ್ಕೆಟಿಂಗ್, ಸೇಲ್ಸ್ ಮತ್ತು ಸರ್ವಿಸ್ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ವಿನಯ್ ಪಿಪರ್‌ಸಾನಿಯಾ ಮುಂಬರುವ ಹಬ್ಬದ ಆವೃತ್ತಿಯಲ್ಲು ಪುನಶ್ಚೇತನವನ್ನು ನಿರೀಕ್ಷಿಸುತ್ತಿದ್ದೇವೆ ಎಂದಿದ್ದಾರೆ. ಮಾತು ಮುಂದುವರಿಸಿದ ಅವರು ತನ್ನ ಚೆನ್ನೈ ಘಟಕದಲ್ಲಿ ಮೂರನೇ ಶಿಫ್ಟ್ ಏರ್ಪಡಿಸುವ ಮೂಲಕ ನಿರ್ಮಾಣ ಸಾಮರ್ಥ್ಯವನ್ನು ಹೆಚ್ಚಿಸಲಿದ್ದೇವೆ ಎಂದಿದ್ದಾರೆ.

ಅಂಕಿಅಂಶ ಗಮನಿಸಿದಾಗ ಭಾರತದಲ್ಲಿ ಫೋರ್ಡ್ ಸಾಧನೆ ನಿರೀಕ್ಷಿತ ಮಟ್ಟ ತಲುಪಿಲ್ಲ. ಕಳೆದ ಆಗಸ್ಟ್ ತಿಂಗಳಲ್ಲಿ 6801 ಯುನಿಟ್ ಮಾತ್ರ ಮಾರಾಟ ಮಾಡುವಲ್ಲಿ ಯಶಸ್ವಿಯಾಗಿತ್ತು. ಕಳೆದ ವರ್ಷವಿದು 8,008 ಯುನಿಟ್‌ಗಳಾಗಿದ್ದವು. ಹಾಗಿದ್ದರೂ ಪ್ರಸಕ್ತ ಸಾಲಿನಲ್ಲಿ 7291 ಯುನಿಟ್ ರಫ್ತು ಮಾಡುವ ಮೂಲಕ ಏರುಗತಿ ಸಾಧಿಸಿತ್ತು. ಕಳೆದ ವರ್ಷ ಈ ಸಂಖ್ಯೆ 3,057 ಯುನಿಟ್ ಮಾತ್ರವಾಗಿತ್ತು.

ಇನ್ನು ಕಳೆದ ಆಗಸ್ಟ್ ತಿಂಗಳಲ್ಲಿ ಫೋರ್ಡ್ ಸಂಸ್ಥೆಯು ಒಂದು ಲಕ್ಷ ಇಕೊಸ್ಪೋರ್ಟ್ ವಾಹನಗಳ ರಫ್ತು ಹಾಗೂ ಆಮದು ಸಾಧಿಸಿತ್ತು. ಈ ಪೈಕಿ ಭಾರತದಲ್ಲಿ ಮಾತ್ರವಾಗಿ 60,000 ಯುನಿಟ್ ಇಕೊಸ್ಪೋರ್ಟ್ ಮಾರಾಟ ಮಾಡುವಲ್ಲಿ ಸಾಧ್ಯವಾಗಿತ್ತು.

More from DriveSpark

Article Published On: Tuesday, September 2, 2014, 15:08 [IST]
English summary
American based four wheeler manufacturer Ford has been in India for a while now. They have seen ups and downs on regular occasions with their brand. They have recently announced their sales figures of August, 2014.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+