ಡೈಮ್ಲರ್ ಮೇಡ್ ಇನ್ ಇಂಡಿಯಾ ಟ್ರಕ್ಸ್ ವಿದೇಶಕ್ಕೆ ರಫ್ತು
ಡೈಮ್ಲರ್ ಇಂಡಿಯಾ ಕಾಮರ್ಷಿಕಲ್ ವೆಹಿಕಲ್ ಲಿಮಿಟೆಡ್ ಸಂಸ್ಥೆಯು, ಚೆನ್ನೈನ ತನ್ನ ಘಟಕದಲ್ಲಿ ನಿರ್ಮಾಣವಾಗುತ್ತಿರುವ ಫ್ಯೂಸೊ (FUSO) ಟ್ರುಕ್ಕುಗಳನ್ನು ಆಫ್ರಿಕಾ ರಾಷ್ಟ್ರವಾದ ತನ್ಜಾನಿಯಾಗೆ ರಫ್ತು ಮಾಡಲಾರಂಭಿಸಿದೆ.
ನಿಮ್ಮ ಮಾಹಿತಿಗಾಗಿ ಮಿಟ್ಸುಬಿಸಿ ಫ್ಯೂಸೊ ಟ್ರಕ್ಸ್ ಮತ್ತು ಬಸ್ ಕಾರ್ಪೋರೇಷನ್ (ಎಂಎಫ್‌ಟಿಬಿಸಿ), ಡೈಮ್ಲರ್ ಅಧೀನತೆಯಲ್ಲಿರುವ ಸಂಸ್ಥೆಯಾಗಿದೆ. ಅಲ್ಲದೆ ತನ್ಜಾನಿಯಾ ಸೇರಿದಂತೆ 35 ಆಫ್ರಿಕಾ ದೇಶಗಳಲ್ಲಿ ತನ್ನ ಸಾನಿಧ್ಯ ಹೊಂದಿದೆ.

ಈ ಹಿಂದೆ 2013 ಮೇ ತಿಂಗಳಲ್ಲಿ ಏಷ್ಯಾ ವಾಣಿಜ್ಯದ ಭಾಗವಾಗಿ ಫ್ಯೂಸೊ ಟ್ರಕ್ಕುಗಳನ್ನು ದೇಶದಲ್ಲಿ ನಿರ್ಮಾಣ ಆರಂಭಿಸಲಾಗಿತ್ತು. ಅಲ್ಲದೆ ಶ್ರೀಲಂಕಾ, ಕೀನ್ಯಾ ಹಾಗೂ ಜಾಂಬಿಯಾ ದೇಶಗಳಿಗೆ ರಫ್ತುಗೈಯುತ್ತಿದ್ದವು. ಇದಕ್ಕೀಗ ಹೊಸತೊಂದು ರಾಷ್ಟ್ರ ಸೇರ್ಪಡೆಯಾಗಿದೆ.
ಪ್ರಸ್ತುತ ತನ್ನ ಯೋಜನೆಯನ್ನು ವಿಸ್ತರಿಸುವ ಯೋಜನೆ ಹೊಂದಿರುವ ಡೈಮ್ಲರ್, ಇನ್ನು ಹೆಚ್ಚಿನ 11 ರಾಷ್ಟ್ರಗಳಿಗೆ ರಫ್ತು ಪ್ರಕ್ರಿಯೆ ಕೈಗೊಳ್ಳುವ ಇರಾದೆಯಲ್ಲಿದೆ. ಪ್ರಸ್ತುತ ತನ್ಜಾನಿಯಾದಲ್ಲಿರುವ ಡೈಮ್ಲಾರ್ ಎಕ್ಸ್‌ಕ್ಲೂಸಿವ್ ಡೀಲರ್‌ಶಿಪ್‌ಗಳಲ್ಲಿ ಫ್ಯೂಸೊ ಟ್ರಕ್ ಮಾರಾಟವಾಗಲಿದೆ.
ಒಟ್ಟು ಐದು ಮಾದರಿಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. ಇವುಗಳ ಪೈಕಿ 25-49 ಟನ್ ಭಾರ ಹೊರಲು ಸಾಮರ್ಥ್ಯವುಳ್ಳ ಎಫ್‌ಜೆ, ಎಫ್‌ಒ ಹಾಗೂ ಎಫ್‌ಝಡ್ ಮಿಡಿಯಂ/ಹೆವಿ ಡ್ಯೂಟಿ ಟ್ರಕ್ ಮತ್ತು 9ರಿಂದ 16 ಟನ್ ಭಾರವುಳ್ಳ ಎಫ್‌ಎ ಹಾಗೂ ಎಫ್‌ಐ ಲೈಟ್/ಮೀಡಿಯಂ ಡ್ಯೂಟಿ ಟ್ರಕ್‌ಗಳು ಸೇರಿವೆ. ಅಂದ ಹಾಗೆ ಫ್ಯೂಸೊ ಟ್ರಕ್‌ಗಳಿಗೆ ಆಫ್ರಿಕಾದಲ್ಲಿ ಅತಿ ಹೆಚ್ಚಿನ ಬೇಡಿಕೆಯಿಂದ್ದು, ಪ್ರಸಕ್ತ ಸಾಲಿನ ಮೊದೆಲೆರಡು ತಿಂಗಳಲ್ಲೇ ಮಾರಾಟ ಸಂಖ್ಯೆ 580 ಯುನಿಟ್‌ಗಳಿಂದ 1,060 ಯುನಿಟ್‌ಗಳಿಗೆ ಏರಿಕೆಯಾಗಿದೆ.


Click it and Unblock the Notifications








