'ಷೆವರ್ಲೆ ಬ್ಲಾಕ್‌ಬಸ್ಟರ್' ಆಫರ್ ಮಿಸ್ ಮಾಡದಿರಿ
ಸಾಮಾನ್ಯವಾಗಿ ಡಿಸೆಂಬರ್ ವೇಳೆಯಾಗುವ ವಾಹನ ಮಾರಾಟ ಕಳೆಗುಂದುತ್ತದೆ. ಈ ಹಿನ್ನಲೆಯಲ್ಲಿ ತಮ್ಮ ನಿರ್ದಿಷ್ಟ ಗುರಿ ತಲುಪುವುದು ವಾಹನ ಸಂಸ್ಥೆಗಳಿಗೆ ಕಠಿಣವೆನಿಸುತ್ತದೆ. ಈ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಆಫರ್ ನೀಡಿ ಗರಿಷ್ಠ ಸಂಖ್ಯೆಯ ಗ್ರಾಹಕರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡಲಾಗುತ್ತದೆ.
ಈಗ ಅಮೆರಿಕ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಜನರಲ್ ಮೋಟಾರ್ಸ್ ಇಂಡಿಯಾ ಸಂಸ್ಥೆಯು ಈ ಡಿಸೆಂಬರ್ ಅವಧಿಯಲ್ಲಿ ಅತಿ ವಿಶಿಷ್ಟ 'ಷೆವರ್ಲೆ ಬ್ಲಾಕ್‌ಬಸ್ಟರ್' ಆಕರ್ಷಕ ಆಫರ್ ಅನ್ನು ಮುಂದಿಟ್ಟಿದೆ.

ನಗದು ರಿಯಾಯಿತಿ, ಎಕ್ಸ್‌ಚೇಂಜ್ ಬೋನಸ್, ರಾಯಲ್ಟಿ ಬೋನಸ್ ಮತ್ತು ಕಾರ್ಪೋರೇಟ್ ಡಿಸ್ಕೌಂಟ್ ಸೇರಿದಂತೆ 55,000 ರು.ಗಳಿಂದ 85,500 ರು.ಗಳ ವರೆಗೆ ರಿಯಾಯಿತಿ ಘೋಷಿಸಿದೆ. ಇದು ಸೀಮಿತ ಅವಧಿಯ ವರೆಗೆ ಜಾರಿಯಲ್ಲಿರಲಿದ್ದು, ಅದೇ ರೀತಿ ಕಾಪ್ಟಿವಾ ಎಸ್‌ಯುವಿಗೆ ಅನ್ವಯವಾಗುವುದಿಲ್ಲ.
ಈ ಡಿಸೆಂಬರ್ ಅವಧಿಯಲ್ಲಿ ಷೆವರ್ಲೆ ಕಾರನ್ನು ಖರೀದಿಸಲು ಬಯಸುವ ಗ್ರಾಹಕರಿಗೆ ಆನಂದದಾಯಕ ಆಫರ್ ನೀಡುವುದು ನಮ್ಮ ಬದ್ಧತೆಯಾಗಿದೆ ಎಂದು ಜನರಲ್ ಮೋಟಾರ್ಸ್ ಇಂಡಿಯಾ ಮಾರ್ಕೆಟಿಂಗ್ ಆಂಡ್ ಸರ್ವಿಸ್ ಹಾಗೂ ಸೇಲ್ಸ್ ಉಪಾಧ್ಯಕ್ಷರಾಗಿರುವ ರಾಜೇಶ್ ಸಿಂಗ್ ತಿಳಿಸಿದ್ದಾರೆ.
ಇತ್ತೀಚೆಗಿನ ಸಮಯದಲ್ಲಿ ಹೆಚ್ಚು ಮನ್ನಣೆಗೆ ಪಾತ್ರವಾಗಿರುವ ಏಳು ಹಾಗೂ ಎಂಟು ಸೀಟುಗಳ ಷೆವರ್ಲೆ ಎಂಜಾಯ್ ಖರೀದಿ ವೇಳೆ ರು.83,000 ವರೆಗೆ ಪ್ರಯೋಜನ ಪಡಯಬಹುದಾಗಿದ್ದು, ಹಿಂದುಗಡೆ ಎಸಿ ವ್ಯವಸ್ಥೆ ಕೂಡಾ ಸ್ಟಾಂಡರ್ಡ್ ಆಗಿ ಲಭ್ಯವಾಗಲಿದೆ. ಅದೇ ರೀತಿ ಸೈಲ್ ಖರೀದಿ ವೇಳೆ ರು. 55000 ವರೆಗೆ ಆಫರ್ ಲಭ್ಯವಾಗಲಿದೆ ಎಂದಿದ್ದಾರೆ.
ಇನ್ನುಳಿದಂತೆ ಷೆವರ್ಲೆ ತವರೆ ಖರೀದಿ ವೇಳೆ ರು. 55000, ಷೆವರ್ಲೆ ಕ್ರೂಜ್ ಖರೀದಿ ವೇಳೆ ರು. 60000 ಹಾಗೂ ಸ್ಪಾರ್ಕ್ ಖರೀದಿಯಲ್ಲಿ ರು. 68,000 ವರೆಗೆ ಪ್ರಯೋಜನ ಪಡೆಯಬಹುದಾಗಿದೆ.
ಹಾಗೆಯೇ ಕನಿಷ್ಠ ವೆಚ್ಚದಲ್ಲಿ ಉತ್ತಮ ನಿರ್ವಹಣೆ ಕಾಪಾಡಲು ಸಂಸ್ಥೆ ಬದ್ಧವಾಗಿರುತ್ತದೆ. ಅಂತೆಯೇ 24*7 ರೋಡ್ ಸೈಡ್ ವ್ಯವಸ್ಥೆಯು ಸಿಗಲಿದೆ. ಅಲ್ಲದೆ ಮೈ ಷೆವರ್ಲೆ ಇಂಡಿಯಾ ಎಂಬ ಮೊಬಲೈ ಅಪ್ಲಿಕೇಷನ್ ಸಹ ಅಭಿವೃದ್ಧಿಪಡಿಸಲಾಗಿದೆ. ಇವೆಲ್ಲವನ್ನು ನಿಭಾಯಿಸಲು ಸಂಸ್ಥೆಯು ದೇಶದೆಲ್ಲೆಡೆ 255 ಸೇಲ್ಸ್ ಔಟ್ಲೆಟ್ ಹಾಗೂ 272 ಸರ್ವಿಸ್ ಔಟ್ಲೆಟ್‌ಗಳನ್ನು ಹೊಂದಿದೆ.


Click it and Unblock the Notifications








