ಹೈಬ್ರಿಡ್, ಎಲೆಕ್ಟ್ರಿಕ್ ಕಾರುಗಳಿಗೆ 14,000 ಕೋಟಿ ಸಬ್ಸಿಡಿ

By Nagaraja

ಇಂಧನ ಬೆಲೆಗಳ ಏರಿಕೆ ಹಾಗೂ ತೈಲ ನಿಕ್ಷೇಪದಲ್ಲಿ ಉಂಟಾಗುತ್ತಿರುವ ಕುಸಿತದಿಂದಾಗಿ ಬದಲಿ ಸಂಚಾರಿ ವ್ಯವಸ್ಥೆಯನ್ನು ಕಲ್ಪಿಸುವುದು ಅನಿವಾರ್ಯವೆನಿಸಿದೆ. ಇದರಂತೆ ಬಹುತೇಕ ರಾಷ್ಟ್ರಗಳಲ್ಲಿ ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ವಾಹನಗಳನ್ನು ಹುರಿದುಂಬಿಸುವ ನಿಟ್ಟಿನಲ್ಲಿ ಸರಕಾರವು ಸಬ್ಸಿಡಿಯನ್ನು ನೀಡುತ್ತಿದೆ.

ಭಾರತದಲ್ಲೂ ಹೊಸದಾಗಿ ಆಯ್ಕೆಗೊಂಡಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಸಬ್ಸಿಡಿ ಮುಂದುವರಿಸಲು ನಿರ್ಧರಿಸಿದೆ. ವರದಿಗಳ ಪ್ರಕಾರ ಪರಿಸರ ಸ್ನೇಹಿ ಹಸಿರು ವಾಹನಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬರೋಬ್ಬರಿ 14,000 ಕೋಟಿ ರು.ಗಳ ಸಬ್ಸಿಡಿ ನೀಡುವ ಸಾಧ್ಯತೆಯಿದೆ.

 Electric Cars

ಸದ್ಯ ಸರಕಾರವು ವಾಹನ ತಯಾರಕ ಸಂಸ್ಥಗಳ ಜೊತೆ ಸಮಾಲೋಚನೆ ನಡೆಸುತ್ತಿದೆ. ಸಾಂಪ್ರಾದಾಯಿಕ ವಾಹನಗಳನ್ನು ಪರಿಗಣಿಸಿದರೆ ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ವಾಹನಗಳ ಮೇಲಿನ ಸಬ್ಸಿಡಿಯ ಪ್ರಮಾಣ ಕಡಿಮೆಯಾಗಿದೆ.

ಸದ್ಯ ಭಾರತದಲ್ಲಿ ಮಹೀಂದ್ರ ಇ2ಒ ವಿದ್ಯುತ್ ಚಾಲಿತ ವಾಹನಗಳಿಗೆ ಸಬ್ಸಿಡಿ ಸಿಗುತ್ತಿದೆ. ಅಲ್ಲದೆ ಸ್ಕಾರ್ಪಿಯೊ ಹೈಬ್ರಿಡ್ ವರ್ಷನ್‌ ಇದರ ಪ್ರಯೋಜನ ಪಡೆಯಲಿದೆ. ಜಪಾನ್‌ ವಾಹನ ತಯಾರಕ ಸಂಸ್ಥೆಯಾಗಿರುವ ಟೊಯೊಟಾ ಸಹ ಎರಡು ಹೈಬ್ರಿಡ್ ಮಾದರಿಗಳನ್ನು (ಪ್ರಯಾಸ್ ಮತ್ತು ಕ್ಯಾಮ್ರಿ) ಪರಿಚಯಿಸಿದೆ.

ಸರಕಾರವು ಸಂಪೂರ್ಣವಾಗಿ ವಿದ್ಯುತ್‌ನಿಂದ ಚಲಿಸುವ ವಾಹನಗಳಿಗೆ ಶೇಕಡಾ 35ರಷ್ಟು ಅಂತೆಯೇ ಒಂದು ಎಲೆಕ್ಟ್ರಿಕ್ ಚಾರ್ಜಿಂಗ್‌ನಲ್ಲಿ 15 ಕೀ.ಮೀ. ವರೆಗೆ ಚಲಿಸುವ ವಾಹನಗಳಿಗೆ ಶೇಕಡಾ 25ರಷ್ಟು ಸಬ್ಸಿಡಿ ನೀಡಲಿದೆ. ಈ ಎಲ್ಲದರ ಮೂಲಕ ಮುಂದಿನ ಆರು ವರ್ಷಗಳಲ್ಲಿ 60,000 ಕೋಟಿ ರು.ಗಳ ಇಂಧನ ಉಳಿಸುವ ಯೋಜನೆ ಹೊಂದಿದೆ.

More from DriveSpark

Article Published On: Wednesday, July 16, 2014, 17:03 [IST]
English summary
The increase in fuel prices and the shortage of natural oil has demanded that manufacturers look at other options to power vehicles. Currently in most countries the government provides subsidy to manufacturers, who produce electric or hybrid vehicles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+