ದೇಶದ್ಯಾಂತ ಸುತ್ತಾಡಿ ಗಿನ್ನೆಸ್ ಪುಟ ಸೇರಿದ ಅಮೇಜ್
ಭಾರತ ದೇಶದ್ಯಾಂತ ಸುತ್ತಾಡಿರುವ ಹೋಂಡಾ ಅಮೇಜ್ ಇದೀಗ ಗಿನ್ನೆಸ್ ಪುಟ ಸೇರಿಕೊಂಡಿದೆ. ಹೌದು, ಜಪಾನ್ ಮೂಲದ ಹೋಂಡಾ ಸಂಸ್ಥೆಯ ಅತ್ಯಂತ ಜನಪ್ರಿಯ ಮಾದರಿಗಳಲ್ಲಿ ಒಂದಾಗಿರುವ ಅಮೇಜ್ ಇತ್ತೀಚೆಗಷ್ಟೇ ದೇಶದ್ಯಾಂತ ಪಯಣವನ್ನು ಹಮ್ಮಿಕೊಂಡಿತ್ತು.
'ಹೋಂಡಾ ಅಮೇಜ್ ಲಾಂಗೆಸ್ಟ್ ಡ್ರೈವ್ ಥ್ರೂ ಅಮೇಜಿಂಗ್ ಇಂಡಿಯಾ' ಎಂಬ ಘೋಷ ವಾಕ್ಯದೊಂದಿಗೆ ಪಯಣ ಆರಂಭಿಸಿದ್ದ ಹೋಂಡಾ ಅಮೇಜ್, ಭಾರತದ ಪ್ರಮುಖ ನಗರಗಳನ್ನು ತಲುಪಿತ್ತಲ್ಲದೆ ಒಟ್ಟು 23,800 ಕೀ.ಮೀ. ದೂರವನ್ನು ಕ್ರಮಿಸಿತ್ತು.

ಈ ಮೂಲಕ ಒಂದೇ ಪಯಣದಲ್ಲಿ ಇಷ್ಟೊಂದು ದೂರ ಕ್ರಮಿಸಿರುವ ಅಮೇಜ್ ಗಿನ್ನೆಸ್ ಪುಟ ಸೇರುವಲ್ಲಿ ಯಶಸ್ವಿಯಾಗಿದೆ. ಪ್ರಸ್ತುತ ಕಾರು ದೇಶದ 400 ನಗರಗಳನ್ನು ಹಾದು ಹೋಗಿತ್ತು.
ತ್ವರೆ ಮಾಡಿ; ಬೈಕ್‌ಎನ್‌ವೀರ್ ಬೈಕಿಂಗ್ ಗ್ಲೋವ್ ರು. 340ರಿಂದ
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷ ಹಾಗೂ ಸಿಇಒ ಆಗಿರುವ ಹೀರೊನೊರಿ ಕನಯಮ, "ಒಂದೇ ದೇಶದಲ್ಲಿ ಇಷ್ಟೊಂದು ದೂರ ಪಯಣಿಸುವ ಮೂಲಕ ಹೋಂಡಾ ಅಮೇಜ್ ಗಿನ್ನೆಸ್ ಪುಟ ಸೇರಿಕೊಂಡಿರುವ ವಿಷಯವನ್ನು ಬಹಿರಂಗಪಡಿಸಲು ಅತ್ಯಂತ ಆನಂದವಾಗುತ್ತಿದೆ" ಎಂದಿದ್ದಾರೆ.

ಹೋಂಡಾ ಅಮೇಜ್ ಕಾರಿನ ಬಾಳ್ವಿಕೆ, ಗುಣಮಟ್ಟತೆ ಹಾಗೂ ವಿಶ್ವಾಸಾರ್ಹತೆಯನ್ನು ಪರೀಕ್ಷಿಸುವ ನಿಟ್ಟಿನಲ್ಲಿ ದೇಶದ ವಿವಿಧ ಭೂಪ್ರದೇಶಗಳಲ್ಲಿ ರಸ್ತೆ ಪಯಣವನ್ನು ಹಮ್ಮಿಕೊಳ್ಳಲಾಗಿತ್ತು. ಅಂತೆಯೆ 2014 ಸೆಪ್ಟೆಂಬರ್ 15ರಂದು ಆರಂಭಿಸಿದ ಪಯಣವು 55 ದಿನಗಳ ಪರ್ಯಂತ ಸಾಗಿತ್ತು.
ಹೋಂಡಾ ಅಮೇಜ್ ಲಾಂಗೆಸ್ಟ್ ಡ್ರೈವ್ ಥ್ರೂ ಅಮೇಜಿಂಗ್ ಇಂಡಿಯಾ ಸಂಪೂರ್ಣ ಮಾಹಿತಿಗಾಗಿ ಸಂಸ್ಥೆಯು ವಿಶೇಷವಾದ ವೆಬ್‌ಸೈಟ್ ತೆರೆದುಕೊಂಡಿದೆ. ಇದರಲ್ಲಿ ಎಕ್ಸ್‌ಕ್ಲೂಸಿವ್ ಚಿತ್ರಗಳು ಮತ್ತು ಪಯಣಕ್ಕೆ ಸಂಬಂಧಿಸಿದ ಅಗತ್ಯ ಮಾಹಿತಿಗಳನ್ನು ಕಲೆಹಾಕಬಹುದಾಗಿದೆ. ಇದಕ್ಕಾಗಿ ಇಲ್ಲಿ ಕ್ಕಿಕ್ಲಿಸಿರಿ.


Click it and Unblock the Notifications