ಸಿಟಿ ವೈಭವ; ಮುಂದುವರಿದ ಹೋಂಡಾ ಕಾರುಗಳ ಬೇಟೆ
ಸಮಕಾಲೀನ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮನ್ನಣೆಗೆ ಪಾತ್ರವಾಗಿರುವ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (ಎಚ್‌ಸಿಐಎಲ್) ಸಂಸ್ಥೆಯು, 2014 ಸೆಪ್ಟೆಂಬರ್ ತಿಂಗಳ ಮಾರಾಟದಲ್ಲಿ ಶೇಕಡಾ 45ರಷ್ಟು ವರ್ಧನೆ ದಾಖಲಿಸಿದೆ.
ಈ ಪೈಕಿ ಸೆಪ್ಟೆಂಬರ್ ತಿಂಗಳಲ್ಲಿ 15,015 ಯುನಿಟ್‌ಗಳ ಮಾರಾಟ ದಾಖಲಿಸುವಲ್ಲಿ ಸಂಸ್ಥೆ ಯಶಸ್ವಿಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 10,354 ಯುನಿಟ್ ಮಾರಾಟ ದಾಖಲಿಸಿದೆ. ಇದರೊಂದಿಗೆ ಶೇಕಡಾ 45ರಷ್ಟು ಮಾರಾಟ ಏರಿಕೆ ಕಂಡುಬಂದಿದೆ.

ಹೋಂಡಾ ಮಾರಾಟ ಏರಿಕೆಯಲ್ಲಿ ಎಲ್ಲ ಮಾದರಿಗಳ ಪಾತ್ರವಿದೆ ಎಂಬುದನ್ನು ಸಂಸ್ಥೆಯ ಮಾರ್ಕೆಟಿಂಗ್ ಆಂಡ್ ಸೇಲ್ಸ್ ಹಿರಿಯ ಉಪಾಧ್ಯಕ್ಷರಾಗಿರುವ ಜ್ಞಾನೇಶ್ವರ ಸೆನ್ ತಿಳಿಸಿದ್ದಾರೆ. ಈ ಪೈಕಿ ಹೋಂಡಾ ಸಿಟಿ ಅತಿ ಹೆಚ್ಚು ಯಶ ದಾಖಲಿಸಿದೆ ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.
ಪ್ರಸಕ್ತ ತಿಂಗಳಿನಲ್ಲೇ ಹೋಂಡಾ ಅಮೇಜ್ ಯಶಸ್ಸನ್ನು ಆಚರಿಸಲು 'ಲಾಂಗೆಸ್ಟ್ ಡ್ರೈವ್ ಥ್ರೂ ಅಮೇಜಿಂಗ್ ಇಂಡಿಯಾ' ಪಯಣವನ್ನು ಸಂಸ್ಥೆ ಹಮ್ಮಿಕೊಂಡಿತ್ತು. ಇದೇ ಸಂದರ್ಭದಲ್ಲಿ 380 ಯುನಿಟ್ ರಫ್ತು ಮಾಡುವಲ್ಲಿ ಹೋಂಡಾ ಯಶಸ್ವಿಯಾಗಿದೆ.
ಹೋಂಡಾ ಮಾರಾಟ ವಿವರ ಇಂತಿದೆ (ಸೆ. 2014, ಯುನಿಟ್‌ಗಳಲ್ಲಿ)
ಬ್ರಿಯೊ - 1,152
ಅಮೇಜ್ - 3,848
ಮೊಬಿಲಿಯೊ - 5,329
ಸಿಟಿ - 4,600
ಸಿಆರ್-ವಿ - 86
ದೇಶಿಯ ಮಾರಾಟ - 15,015
ರಫ್ತು - 380
ಒಟ್ಟು ಮಾರಾಟ - 15,395


Click it and Unblock the Notifications