ಏರ್‌ಬ್ಯಾಗ್ ಸಮಸ್ಯೆ; ಹೋಂಡಾ ಅಕಾರ್ಡ್, ಸಿಆರ್-ವಿ ಹಿಂಪಡೆತ

By Nagaraja

ಕೆಲವು ದಿನಗಳ ಹಿಂದಯಷ್ಟೇ ಕೆಲವೊಂದು ತೊಂದರೆಗಳು ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ನಿರ್ದಿಷ್ಟ ವೆರಿಯಂಟ್‌ಗಳನ್ನು ಹೋಂಡಾ ಸಂಸ್ಥೆಯು ಜಾಗತಿಕವಾಗಿ ಹಿಂಪಡೆದಿತ್ತು. ಇದರಲ್ಲಿ ಭಾರತದ ಮಾದರಿಗಳು ಸಹ ಸೇರಿದ್ದವು.

ಇದೀಗ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (ಎಚ್‌ಸಿಐಎಲ್‌ ) ಮತ್ತೆ ಕೆಲವು ನಿರ್ದಿಷ್ಟ ವೆರಿಯಂಟ್‌ಗಳನ್ನು ಹಿಂಪಡೆಯಲು ನಿರ್ಧರಿಸಿದೆ. ಪ್ರಯಾಣಿಕ ಬದಿಯ ಏರ್‌ಬ್ಯಾಗ್‌ನಲ್ಲಿ ತೊಂದರೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ರಿಕಾಲ್ ಬಿಸಿ ತಟ್ಟಿದೆ.


2003ನೇ ಇಸವಿಯಲ್ಲಿ ತಯಾರದ 1,085ರಷ್ಟು ಹೋಂಡಾ ಅಕಾರ್ಡ್ ಮತ್ತು 252 ಹೋಂಡಾ ಸಿಆರ್‌ವಿ ಮಾದರಿಗಳನ್ನು ವಾಪಾಸ್ ಕರೆಯಿಸಿಕೊಂಡಿದೆ. ಈ ಪೈಕಿ 2002ನೇ ಸಾಲಿನ ಹೋಂಡಾ ಸಿಆರ್-ವಿ ಮಾದರಿಗಳು ಸಹ ಸೇರಿಕೊಂಡಿವೆ.

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯ ಪ್ರಕಾರ, ಇದುವರೆಗೆ ಯಾವುದೇ ಅಪಾಯ ಎದುರಾಗಿಲ್ಲ. ಆದರೆ ಮುಂಜಾಗ್ರತಾ ಕ್ರಮವಾಗಿ ಪ್ರಯಾಣಿಕ ಬದಿಯ ಏರ್‌ಬ್ಯಾಗ್ ಸಮಸ್ಯೆಯನ್ನು ಬಗೆಹರಿಸಿ ಕೊಡಲಾಗುವುದು ಎಂದಿದೆ. ಹೋಂಡಾ ತನ್ನ ಮಾದರಿಗಳ ವಾಹನಗಳ ಗುಣಮಟ್ಟತೆಯನ್ನು ಹಾಗೂ ಸುರಕ್ಷತೆಗೆ ಅತಿ ಹೆಚ್ಚಿನ ಮಹತ್ವ ಕೊಡುತ್ತಿದೆ. ಈ ಮೂಲಕ ಗ್ರಾಹಕರಿಗೆ ಬದ್ಧತೆಯನ್ನು ಪ್ರದರ್ಶಿಸುತ್ತಿದೆ.

honda accord

ನಿಮ್ಮ ವಾಹನವೂ ಸೇರಿದೆಯೇ?
ಅಂದ ಹಾಗೆ ನಿಮ್ಮ ವಾಹನವೂ ಈ ಪಟ್ಟಿಯಲ್ಲಿ ಸೇರಿದೆಯೇ ಎಂಬುದನ್ನು ಹೋಂಡಾ ಅಧಿಕೃತ ವೆಬ್‌ಸೈಟ್‌ಗೆ ಇಲ್ಲಿ ಭೇಟಿ ಕೊಡುವ ಮೂಲಕ ತಿಳಿದುಕೊಳ್ಳಬಹುದಾಗಿದೆ. ಇದಕ್ಕಾಗಿ VIN ಎಂಬ 17 ಅಂಕೆಗಳ ಗುರುತು ಸಂಖ್ಯೆಯನ್ನು ನಮೂದಿಸಬೇಕಾಗಿದೆ.

ಈ ಎಲ್ಲ ಪ್ರಕ್ರಿಯೆಗೆ ಗ್ರಾಹಕರು ಯಾವುದೇ ಹೆಚ್ಚುವರಿ ಹಣ ಪಾವತಿ ಮಾಡಬೇಕಾದ ಅಗತ್ಯವಿಲ್ಲ. ಇಲ್ಲವಾದ್ದಲ್ಲಿ ನಿಮ್ಮ ಹೋಂಡಾ ಡೀಲರ್‌ಶಿಪ್ ಸಂಪರ್ಕಿಸಬಹುದು.

More from DriveSpark

Article Published On: Thursday, July 17, 2014, 10:13 [IST]
English summary
Honda had earlier announced a global recall for certain products due to a faulty airbag. In that recall they had included a few vehicles that were launched in India too. Now Honda Cars India Ltd(HCIL) has confirmed they will have to recall another batch of vehicles to replace its passenger side airbag.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+