ಇದೀಗ ಅಧಿಕೃತ; ಜು. 24ರಂದು ಹೋಂಡಾ ಮೊಬಿಲಿಯೊ ಬಿಡುಗಡೆ

By Nagaraja

ಇದೀಗ ಎಲ್ಲವೂ ಅಧಿಕೃತಗೊಂಡಿದ್ದು, ದೇಶದ ಮುಂಚೂಣಿಯ ವಾಹನ ತಯಾರಿಕಾ ಸಂಸ್ಥೆಯಾಗಿರುವ ಹೋಂಡಾ ಇಂಡಿಯಾ ಸಂಸ್ಥೆಯು ಬಹುನಿರೀಕ್ಷಿತ ಮೊಬಿಲಿಯೊ ಬಹು ಬಳಕೆಯ ವಾಹನವನ್ನು (ಎಂಪಿವಿ) ಇದೇ ಬರುವ ಜುಲೈ 24ರಂದು ಬಿಡುಗಡೆ ಮಾಡಲಿದೆ.

ಮೊದಲ ಬಾರಿಗೆ ದೆಹಲಿಯಲ್ಲಿ ಫೆಬ್ರವರಿ ತಿಂಗಳಲ್ಲಿ ಸಾಗಿದ 2014 ವಾಹನ ಪ್ರದರ್ಶನ ಮೇಳದಲ್ಲಿ ಅನಾವರಣಗೊಂಡಿದ್ದ ಮೊಬಿಲಿಯೊ, ಈಗಾಗಲೇ ಪ್ರಮುಖ ಶಾಪಿಂಗ್ ಮಾಲ್‌ಗಳಲ್ಲಿ ಪ್ರದರ್ಶನ ಕಾಣುವ ಮೂಲಕ ಗ್ರಾಹಕರಿಗೆ ಹೆಚ್ಚು ಪರಿಚಯವಾಗಿದೆ.


ಮೊಬಿಲಿಯೊ ಪ್ರಚಾರಾರ್ಥವಾಗಿ ಆನ್‌ಲೈನ್ ಅಭಿಯಾನವನ್ನು ಸಹ ಜಪಾನ್ ಮೂಲದ ಹೋಂಡಾ ವಾಹನ ತಯಾರಕ ಸಂಸ್ಥೆಯು ಹಮ್ಮಿಕೊಂಡಿತ್ತು. ಇದೀಗ ಬಿಡುಗಡೆ ಬೆನ್ನಲ್ಲೇ ವಿತರಣೆ ಪ್ರಕ್ರಿಯೆ ಸಹ ಆರಂಭವಾಗಲಿದೆ.

ಹಾಗಿದ್ದರೂ ಬೆಲೆಯ ಬಗ್ಗೆ ಹೆಚ್ಚಿನ ಮಾಹಿತಿಗಳು ಸಂಸ್ಥೆಯಿಂದ ಲಭ್ಯವಾಗಿಲ್ಲ. ಇದು ಟೊಯೊಟಾದ ಜನಪ್ರಿಯ ಇನ್ನೋವಾ ಹಾಗೂ ಮಾರುತಿಯ ಎರ್ಟಿಗಾ ಎಂಪಿವಿ ವಾಹನಗಳ ನಡುವೆ ಗುರುತಿಸಿಕೊಳ್ಳಲಿದೆ ಎಂಬುದು ಖಚಿತವಾಗಿದೆ.

Honda Mobilio

ಎಂಜಿನ್
ಅಂದ ಹಾಗೆ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಲ್ಲಿ ಮೊಬಿಲಿಯೊ ಆಗಮನವಾಗಲಿದೆ. ಇದರ 1.5 ಲೀಟರ್ ಐ-ವಿಟೆಕ್ ಪೆಟ್ರೋಲ್ ಎಂಜಿನ್ ಗರಿಷ್ಠ 117 ಅಶ್ವಶಕ್ತಿ ಉತ್ಪಾದಿಸಲಿದೆ. ಇದು 5 ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಗೇರ್ ಬಾಕ್ಸ್‌ನಿಂದ ನಿಯಂತ್ರಿಸಲ್ಪಡಲಿದೆ.

ಅದೇ ರೀತಿ ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡಿರುವ ಅಮೇಜ್ ಹಾಗೂ ಸಿಟಿ ಆವೃತ್ತಿಯಲ್ಲಿರುವುದಕ್ಕೆ ಸಮಾನವಾಗಿರುವ 1.5 ಲೀಟರ್ ಐ-ಡಿಟೆಕ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 98 ಅಶ್ವಶಕ್ತಿ ಉತ್ಪಾದಿಸಲಿದೆ.

ಮೈಲೇಜ್
ನೂತನ ಮೊಬಿಲಿಯೊ ಎಂಪಿವಿ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳು ಪ್ರತಿ ಲೀಟರ್‌ಗೆ ಅನುಕ್ರಮವಾಗಿ 18 ಹಾಗೂ 26 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಪ್ರತಿಸ್ಪರ್ಧಿ
ಸಹಜವಾಗಿಯೇ ಮಾರುತಿ ಎರ್ಟಿಗಾ ಜೊತೆ ಜೊತೆಗೆ ಷೆವರ್ಲೆ ಎಂಜಾ, ನಿಸ್ಸಾನ್ ಇವಾಲಿಯಾ ಮತ್ತು ಇನ್ನಷ್ಟೇ ಆಗಮನವಾಗಲಿರುವ ದಟ್ಸನ್ ಗೊ ಮತ್ತು ರೆನೊ ಲೊಡ್ಜಿ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.

ಮೊಬಿಲಿಯೊ ಪ್ರಚಾರಕ್ಕೆ ಚುಕ್ಕಾಣಿ ಹಿಡಿದ ಕಾಮಿಡಿ ಸ್ಟಾರ್ ಕಪಿಲ್ - ವೀಡಿಯೋ ವೀಕ್ಷಿಸಿ

<iframe width="600" height="450" src="//www.youtube.com/embed/EfnvbotSATM?rel=0&showinfo=0&autoplay=0" frameborder="0" allowfullscreen></iframe>

More from DriveSpark

Article Published On: Tuesday, July 15, 2014, 9:48 [IST]
English summary
Honda India has confirmed with us that its MPV, the Mobilio will be launching on 24th July, 2014. The Japanese car maker had showcased its vehicle in India for the very first time at the 2014 Auto Expo in Delhi. Since then they have been displaying their vehicle to Indians in malls and shopping complexes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+