ಆಗಸ್ಟ್ ತಿಂಗಳಲ್ಲಿ ಹೋಂಡಾ ಕಾರುಗಳ ಬೇಟೆ

By Nagaraja

ಜಪಾನ್‌ನ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಆಗಸ್ಟ್ ತಿಂಗಳ ಮಾರಾಟದಲ್ಲಿ ಭರ್ಜರಿ ನೆಗೆತ ಕಂಡಿದೆ. ಅಲ್ಲದೆ ದೇಶಿಯ ಮಾರಾಟದಲ್ಲಿ ಶೇಕಡಾ 88ರಷ್ಟು ವೃದ್ಧಿ ದಾಖಲಿಸಿದೆ.

2014 ಆಗಸ್ಟ್ ತಿಂಗಳಲ್ಲಿ 16,758 ಯುನಿಟ್ ಮಾರಾಟ ಸಾಧಿಸಿರುವ ಹೋಂಡಾ, ಪ್ರೀಮಿಯಂ ಕಾರುಗಳ ವಿಭಾಗದಲ್ಲಿ ತನ್ನ ಅಧಿಪತ್ಯ ಸ್ಥಾಪಿಸಿದೆ. ಕಳೆದ ವರ್ಷ ಅಂದರೆ 2013 ಆಗಸ್ಟ್ ವೇಳೆಗೆ ಈ ಸಂಖ್ಯೆ 8,913 ಯುನಿಟ್‌ಗಳಿಷ್ಟಿತ್ತು.

Honda Cars

ಹೊಸತಾಗಿ ಬಿಡುಗಡೆಯಾದ ಮೊಬಿಲಿಯೊ ಹಾಗೂ ಅಮೇಜ್ ಮಾರಾಟ ವೃದ್ಧಿಯಲ್ಲಿ ಹೋಂಡಾಗೆ ಸಹಕಾರಿಯಾಗಿದೆ. ಅದೇ ರೀತಿ ಬ್ರಿಯೊ, ಸಿಆರ್‌-ವಿ ಮತ್ತು ಸಿಟಿ ಸಹ ಗಮನಾರ್ಹ ಮಾರಾಟ ದಾಖಲಿಸಿದೆ.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ಮಾರ್ಕೆಟಿಂಗ್ ಮತ್ತು ಸೇಲ್ಸ್ ಹಿರಿಯಾ ಉಪಧ್ಯಾಕ್ಷರಾಗಿರುವ ಜ್ಞಾನೇಶ್ವರ್ ಸೆನ್ ಮುಂಬರುವ ಹಬ್ಬದ ಆವೃತ್ತಿಯಲ್ಲೂ ಸ್ಥಿರ ಮಾರಾಟ ಕಾಯ್ದುಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು 2014 ಎಪ್ರಿಲ್‌ನಿಂದ ಆಗಸ್ಟ್ ತಿಂಗಳ ವರೆಗಿನ ಅವಧಿಯಲ್ಲಿ ಹೋಂಡಾ 73,185 ಯುನಿಟ್ ಮಾರಾಟ ಕಂಡುಕೊಂಡಿದೆ. ಕಳೆದ ವರ್ಷವಿದು 49,263 ಯುನಿಟ್ ಮಾತ್ರವಾಗಿತ್ತು. ಈ ಮೂಲಕ ಶೇಕಡಾ 49ರಷ್ಟು ವರ್ಧನೆ ದಾಖಲಿಸಿದೆ.

Most Read Articles

Kannada
English summary
Japanese automobile manufacture Honda Cars India Ltd. has registered a domestic sale growth of 88%. The premium car manufacturer has managed to sell 16,758 vehicles in August, 2014. They have recorded a phenomenal growth and have sold 8,913 more vehicles compared to August, 2013.
Story first published: Tuesday, September 2, 2014, 11:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X