ವೀಡಿಯೋ: 'ಹಾಸ್ಯ ಸಾಮ್ರಾಟ್' ಕಪಿಲ್ ಮೊಬಿಲಿಯೊ ಮೋಡಿ
ಆಧುನಿಕ ಜಗತ್ತಿನ 'ಹಾಸ್ಯ ಸಾಮ್ರಾಟ್' ಕಪಿಲ್ ಶರ್ಮಾ ಅವರ ಜನಪ್ರಿಯ ಕಾರ್ಯಕ್ರಮ 'ಕಾಮೆಡಿ ನೈಟ್ಸ್ ವಿಥ್ ಕಪಿಲ್' ಕಲರ್ಸ್ ಟಿ.ವಿಯಲ್ಲಿ ಪ್ರಚಾರವಾಗುತ್ತಿದೆ. ಪ್ರಸ್ತುತ ಈ ಕಲಾವಿದ ಹೋಂಡಾ ಮೊಬಿಲಿಯೊ ಪ್ರಚಾರ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವುದು ವಿಶೇಷವೆನಿಸಿದೆ.
ಒಂದು ಸಾಧಾರಣ ಜಾಹೀರಾತಿಗಿಂತ ವಿಭಿನ್ನವಾಗಿ ಇದನ್ನು ಚಿತ್ರಿಕರಿಸಲಾಗಿದೆ. ಇಲ್ಲಿ ಹುಡುಗಿಯ ಸೌಂದರ್ಯದ ಜೊತೆಗೆ ಮೊಬಿಲಿಯೊ ವಿನ್ಯಾಸವನ್ನು ಹೋಲಿಸಲಾಗಿದೆ. ಇದಕ್ಕೂ ಮಿಗಿಲಾಗಿ ಮೊಬಿಲಿಯೊ ಒಂದು ಪರಿಪೂರ್ಣ ಕುಟುಂಬ ವಾಹನ ಎಂಬುದನ್ನು ಬಿಂಬಿಸಲಾಗುತ್ತಿದೆ.
ಸಂಪೂರ್ಣವಾಗಿಯೂ ಕಬಿಲ್ ಅವರ ಹಾಸ್ಯ ಚಟಾಕಿಯೊಂದಿಗೆ ಮುಂದುವರಿಯುವ ಈ ಜಾಹೀರಾತಿನಲ್ಲಿ ಹೋಂಡಾ ಮೊಬಿಲಿಯೊ ಎಂಪಿವಿ ಚಿತ್ರಣವನ್ನು ಬಯಲು ಮಾಡುತ್ತಿದೆ.
ನಿಮ್ಮ ಮಾಹಿತಿಗಾಗಿ 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿದ್ದ ಹೋಂಡಾ ಮೊಬಿಲಿಯೊ ಜುಲೈ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಇದು ಪ್ರಮುಖವಾಗಿಯೂ ಮಾರುತಿ ಎರ್ಟಿಗಾ ಮಾದರಿಗೆ ಪ್ರತಿಸ್ಪರ್ಧಿಯಾಗಿರಲಿದೆ.


Click it and Unblock the Notifications