ಹೋಂಡಾದಿಂದ ಡ್ರೈವರ್ ಅಸಿಸ್ಟ್ ಸಿಸ್ಟಂ ಪರಿಚಯ
ಗ್ರಾಹಕರಿಗೆ ಸದಾ ಅದ್ಭುತ ಚಾಲನಾ ಅನುಭವ ನೀಡುವುದರಲ್ಲಿ ಬದ್ಧವಾಗಿರುವ ಜಪಾನ್ ಮೂಲದ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ, ವಾಹನೋದ್ಯಮಕ್ಕೆ ಹೊಸತಾದ ಡ್ರೈವ್ ಅಸಿಸ್ಟ್ ಸಿಸ್ಟಂ ಪರಿಚಯಿಸಿದೆ.
ಸಂಸ್ಥೆ ಹೇಳುವ ಪ್ರಕಾರ ಎಲರಿಗೂ ಜಾಗತಿಕ ಸುರಕ್ಷತೆ ಖಾತ್ರಿಪಡಿಸುವ ನಿಟ್ಟಿನಲ್ಲಿ ಇಂತಹದೊಂದು ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ.

ಸೆನ್ಸಾರ್ ಮುಖಾಂತರ ಹೊಸತಾದ ಡ್ರೈವರ್ ಅಸಿಸ್ಟ್ ಸಿಸ್ಟಂ ಕೆಲಸ ಮಾಡಲಿದೆ. ಇದರ ಮುಂಭಾಗದ ಗ್ರಿಲ್‌ನೊಳಗೆ ಮತ್ತು ವಿಂಡ್‌ಶೀಲ್ಡ್ ಒಳಗಡೆ ಸೆನ್ಸಾರ್ ಕಾಣಿಸಿಕೊಳ್ಳಲಿದೆ.
ಐದು ಪ್ರಮುಖ ಕ್ರಿಯಾತ್ಮಕತೆಗಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಸಂಭವನೀಯ ಅಪಘಾತಕ್ಕೂ ಮುಂಚೆ ಆಡಿಯೋ ಜೊತೆಗೆ ದೃಶ್ಯ ಎಚ್ಚರಿಕೆಗಳನ್ನು ನೀಡಲಿದೆ.
ಇದು ಅಪಘಾತ ಕಡಿಮೆ ಮಾಡುವ ಬ್ರೇಕಿಂಗ್ ಸಿಸ್ಟಂ, ರೋಡ್ ಡಿಪಾರ್ಚರ್ ಮಿಟಿಗೇಷನ್ ಸಿಸ್ಟಂ, ಪಾದಚಾರಿ ಢಿಕ್ಕಿ ತಗ್ಗಿಸುವಿಗೆ ಸ್ಟೀರಿಂಗ್ ಸಿಸ್ಟಂ, ಫಾಲ್ಸ್ ಸ್ಟಾರ್ಟ್ ಪ್ರಿವೆಂಟೇಷನ್ ಫಂಕ್ಷನ್ ಮತ್ತು ಕಾರ್ ಡಿಪಾರ್ಚರ್ ನೋಟಿಫಿಕೇಷನ್ ಸಿಸ್ಟಂಗಳನ್ನು ಹೊಂದಿದೆ.


Click it and Unblock the Notifications