ಸಿಟಿ ಸವಾಲು ಎದುರಿಸಲು ಹ್ಯುಂಡೈ ವರ್ನಾ ಸಜ್ಜು
ಮಿಡ್ ಸೈಜ್ ಸೆಡಾನ್ ವಿಭಾಗದಲ್ಲಿ ಈಗಾಗಲೇ ಹೋರಾಟ ತೀವ್ರಗೊಂಡಿದೆ. ಇತ್ತೀಚೆಗಷ್ಟೇ ನಾಲ್ಕನೇ ತಲೆಮಾರಿನ ಸಿಟಿ ಕಾರು ಲಾಂಚ್ ಮಾಡಿದ ಹೋಂಡಾ, ದೇಶದ ಎರಡನೇ ವಾಹನ ತಯಾರಕ ಸಂಸ್ಥೆಯಾಗಿರುವ ಹ್ಯುಂಡೈ ವರ್ನಾಗೆ ನೇರ ಪ್ರತಿಸ್ಪರ್ಧಿ ಕಣಕ್ಕಿಳಿಸಿತ್ತು.
ಆದರೆ ಈ ಎಲ್ಲ ಬೆಳವಣಿಗೆಯಿಂದ ಹ್ಯುಂಡೈ ಕೈ ಕಟ್ಟಿ ಕುಳಿತಿಲ್ಲ. ಪ್ರಸ್ತುತ ದಕ್ಷಿಣ ಕೊರಿಯಾ ಮೂಲದ ಸಂಸ್ಥೆಯು ನೂತನ ಎಸ್‌ಎಕ್ಸ್ (ಒ) ಟಾಪ್ ಎಂಡ್ ವೆರಿಯಂಟ್ ಲಾಂಚ್ ಮಾಡಿದೆ. ಇದು ನೂತನ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, 16 ಇಂಚು ಡೈಮಾಂಡ್ ಕಟ್ ಅಲಾಯ್ ವೀಲ್, ಪವರ್ ವಿಂಡೋ ಸ್ವಿಚ್ ಮತ್ತು ಸೇಫ್ಟಿ ಎಸ್ಕಾರ್ಟ್ ಹೆಡ್ ಲ್ಯಾಂಪ್ ಸೌಲಭ್ಯಗಳನ್ನು ಪಡೆಯಲಿದೆ.

ಈ ನಡುವೆ 2014 ಹೋಂಡಾ ಸಿಟಿ ಅಪಾಯವನ್ನು ಅರಿತಿರುವ ಹ್ಯುಂಡೈ, ಮುಂದಿನ ಕೆಲವೇ ದಿನಗಳಲ್ಲಿ ವರ್ನಾ ಸಿಎಕ್ಸ್ 1.4 ಲೀಟರ್ ಡೀಸೆಲ್ ಎಂಜಿನ್ ಲಾಂಚ್ ಮಾಡಲಿದೆ. ಇದು ಇಎಕ್ಸ್ ಮತ್ತು ಎಸ್‌ಎಕ್ಸ್ ವೆರಿಯಂಟ್ ಕೆಳಗಡೆ ಗುರುತಿಸಿಕೊಳ್ಳಲಿದೆ.
ವರ್ನಾ ನೂತನ ಡೀಸೆಲ್ ಎಂಜಿನ್ ಎಲೆಕ್ಟ್ರೊ ಕ್ರೋಮ್ಯಾಟಿಕ್ ಮಿರರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಜತೆಗೆ ಪಾರ್ಕಿಂಗ್ ಸೆನ್ಸಾರ್, 2 ಡಿನ್ ಆಡಿಯೋ ಜತೆಗೆ ಬ್ಲೂಟೂತ್, ಸ್ಟೀರಿಂಗ್ ಕಂಟ್ರೋಲ್, ಸಂಪೂರ್ಣವಾಗಿಯೂ ಆಟೋಮ್ಯಾಟಿಕ್ ತಾಪಮಾನ ಕಂಟ್ರೋಲ್, ವಿದ್ಯುನ್ಮಾನವಾಗಿ ಹೊಂದಣಿಸಬಲ್ಲ ಮತ್ತು ಮಡಚಬಹುದಾದ ಹೊರಗಿನ ಮಿರರ್ ಮತ್ತು ಟರ್ನ್ ಇಂಡಿಕೇಟರ್, ಆಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಮತ್ತು ಡ್ರೈವರ್ ಸೈಡ್ ಏರ್ ಬ್ಯಾಗ್ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ.


Click it and Unblock the Notifications








