ತಿಂಗಳಲ್ಲೇ ಹ್ಯುಂಡೈ ಎಕ್ಸ್‌ಸೆಂಟ್ 11,000 ಬುಕ್ಕಿಂಗ್ಸ್
ಬಹುನಿರೀಕ್ಷಿತ ಹ್ಯುಂಡೈ ಎಕ್ಸ್‌ಸೆಂಟ್ ಕಾಂಪಾಕ್ಟ್ ಸೆಡಾನ್ ಕಾರು ಬಿಡುಗಡೆಯಾದ ಒಂದು ತಿಂಗಳಲ್ಲೇ 11,000ಕ್ಕೂ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ನಿರೀಕ್ಷೆಯಂತೆಯೇ ಸರಿ ಸುಮಾರು ಒಂದು ತಿಂಗಳ ಹಿಂದೆ ಲಾಂಚ್ ಕಂಡಿರುವ ಹ್ಯುಂಡೈ ಎಕ್ಸ್‌ಸೆಂಟ್ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಆರಂಭಿಸಿದೆ. ಇದು ಪ್ರಮುಖವಾಗಿಯೂ ಹೋಂಡಾ ಅಮೇಜ್ ಹಾಗೂ ಮಾರುತಿ ಸ್ವಿಫ್ಟ್ ಡಿಜೈರ್‌ಗೆ ಪ್ರತಿಸ್ಪರ್ಧಿಯಾಗಿರಲಿದೆ.

ಈ ಪೈಕಿ ಮೆಟ್ರೋ ನಗರಗಳಲ್ಲಿ ಹೆಚ್ಚಿನ ಬೇಡಿಕೆ ಕಂಡುಬಂದಿರುವುದಾಗಿ ದಕ್ಷಿಣ ಕೊರಿಯಾ ಮೂಲದ ಈ ವಾಹನ ತಯಾರಕ ಸಂಸ್ಥೆಯು ಸ್ಪಷ್ಟಪಡಿಸಿದೆ. ಹೋಂಡಾ ಅಮೇಜ್ ಹೋಲಿಸಿದರೆ ಎಕ್ಸ್‌ಸೆಂಟ್ ಸಹ ಸರಿಯಾದ ಪಥದಲ್ಲೇ ಸಾಗುತ್ತಿದೆ. ಯಾಕೆಂದರೆ ಬಿಡುಗಡೆಯಾದ ಮೊದಲೆರಡು ತಿಂಗಳಲ್ಲಿ ಅಮೇಜ್ 20,000 ಬುಕ್ಕಿಂಗ್ ಗಿಟ್ಟಿಸಿಕೊಂಡಿತ್ತು.
ಇದು ಗ್ರಾಹಕರಿಗೆ ಹ್ಯುಂಡೈ ಮೇಲಿನ ನಂಬಿಕೆಯನ್ನು ತೋರಿಸುತ್ತಿದೆ. ಗ್ರಾಂಡ್ ಐ10 ತಲಹದಿಯಲ್ಲಿ ರೂಪುಗೊಂಡಿರುವ ಐ10, ಸೆಗ್ಮೆಂಟ್ ಲೀಡಿಂಗ್ 407 ಲೀಟರ್ ಬೂಟ್ ಸ್ಪೇಸ್ ಕೂಡಾ ಹೊಂದಿದೆ. ಇದು ಎರಡನೇ ಜನಾಂಗದ ಯು2 ಸಿಆರ್‌ಡಿಐ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, ಪ್ರತಿ ಲೀಟರ್‌ಗೆ 24.4 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 1.2 ಲೀಟರ್ ಕಪ್ಪ ಪೆಟ್ರೋಲ್ ಎಂಜಿನ್ ಲೀಟರ್‌ಗೆ 19.1 ಕೀ.ಮೀ. ಮೈಲೇಜ್ ನೀಡಲಿದೆ.


Click it and Unblock the Notifications








