ದಿಲೀಪ್ ಕನಸಿನ ಕೂಸು ದೇಶದ ಚೊಚ್ಚಲ ಸೂಪರ್ ಕಾರು 'ಅವಂತಿ'
ನಿಮ್ಮಗೆಲ್ಲರಿಗೂ ತಿಳಿದಿರುವಂತೆಯೇ ಡಿಸಿ ಡಿಸೈನ್ ಸೂತ್ರಧಾರಿ ದಿಲೀಪ್ ಛಾಬ್ರಿಯಾ ನೇತೃತ್ವದಲ್ಲಿ ದೇಶದ ಚೊಚ್ಚಲ ಸೂಪರ್ ಕಾರು ಡಿಸಿ ಅವಂತಿ ರಸ್ತೆಗಿಳಿಯಲು ಕ್ಷಣಗಣನೆ ಆರಂಭವಾಗಿದೆ.
ನಾಲ್ಕು ವರ್ಷಗಳ ಸತತ ಪ್ರಯತ್ನ ಹಾಗೂ ಯೋಜನೆಯನ್ನು ಸರಿಯಾಗಿ ಕಾರ್ಯರೂಪಕ್ಕೆ ತಂದಿರುವ ದಿಲೀಪ್, ಕನಸಿನ ಕೂಸು ಎಂದೇ ಈ ಅವಂತಿ ಕ್ರೀಡಾ ಕಾರನ್ನು ವಿಶ್ಲೇಷಿಸಲಾಗುತ್ತಿದೆ.
ಮುಖ್ಯಾಂಶಗಳು
- ಬೆಲೆ: 40 ಲಕ್ಷ ರು. (ಅಂದಾಜು)
- ಎಂಜಿನ್: 2.0 ಲೀಟರ್ ಪೆಟ್ರೋಲ್ ಟರ್ಬೊ ಇರೊ 5 ಕಂಪ್ಲೈಟ್
- ಪವರ್/ಟಾರ್ಕ್: 260 ಬಿಎಚ್‌ಪಿ/360ಎನ್‌ಎಂ
- ಟ್ರಾನ್ಸ್‌ಮಿಷನ್: 6 ಸ್ಪೀಡ್ ಮ್ಯಾನುವಲ್
- ಗ್ರೌಂಡ್ ಕ್ಲಿಯರನ್ಸ್: 170ಎಂಎಂ
- ವೇಗ: 15.16 ಸಕೆಂಡುಗಳಲ್ಲಿ ಗಂಟೆಗೆ 0-140 ಕೀ.ಮೀ.

ಅವಂತಿ ಎಂಬ ಸೂಪರ್ ಕಾರು ನನಸಾಗಿಸಲು ಎಲ್ಲ ಸವಾಲುಗಳನ್ನು ಸ್ವೀಕರಿಸಿರುವ ದಿಲೀಪ್ ಛಾಬ್ರಿಯಾ, "ಸಂಪೂರ್ಣವಾಗಿಯೂ ದೇಶದ ರಸ್ತೆಗಾಗಿ ವಿನ್ಯಾಸಗೊಳಿಸಲಾಗಿದೆ" ಎಂದಿದ್ದಾರೆ. ನಿಮ್ಮ ಮಾಹಿತಿಗಾಗಿ ಡಿಸಿ ಅವಂತಿ 170 ಎಂಎಂ ಗ್ರೌಂಡ್ ಕ್ಲಿಯರನ್ಸ್ ಹೊಂದಿದೆ.
ಮೊದಲ ನೋಟದಲ್ಲಿ ಡಿಸಿ ಅವಂತಿ ಐಕಾನಿಕ್ ಲಂಬೋರ್ಗಿನಿ ಅಥವಾ ಫೆರಾರಿ ತದ್ರೂಪವೇ ಎಂಬ ಶಂಕೆ ಮೂಡುತ್ತದೆ. ಆದರೆ ಛಾಬ್ರಿಯಾ ಅಭಿಮತದಲ್ಲಿ ಈ ಅಗ್ಗದ 260 ಬಿಎಚ್‌ಪಿ ಸೂಪರ್ ಕಾರು ಇತರೆಲ್ಲ ಮಾದರಿಗಿಂತಲೂ ವಿಭಿನ್ನವಾಗಿರಲಿದೆ ಎಂದಿದ್ದಾರೆ.
ಮುಂದಿನ ವರ್ಷ ತನ್ನ ಪುಣೆ ಘಟಕದಲ್ಲಿ 500ರಷ್ಟು ಯುನಿಟ್‌ಗಳ ನಿರ್ಮಾಣ ಗುರಿ ಇಟ್ಟುಕೊಂಡಿರುವ ದಿಲೀಪ್, ಮುಂದಿನ ನಾಲ್ಕು ವರ್ಷಗಳಲ್ಲಿ 2,000 ಯುನಿಟ್‌ಗಳ ಮಾರಾಟ ಗುರಿಯಿರಿಸಿಕೊಂಡಿದ್ದಾರೆ.
ಡಿಸಿ ಅವಂತಿ ಯೋಜನೆಗಾಗಿ ಬರೋಬ್ಬರಿ 125 ಕೋಟಿ ರು.ಗಳನ್ನು ಹೂಡಿಕೆ ಮಾಡಿರುವ ದಿಲೀಪ್, "ಈ ಮಹತ್ತರ ಯೋಜನೆಗಾಗಿ ಎಲ್ಲ ರೀತಿಯ ಅಪಾಯವನ್ನು ಆಹ್ವಾನಿಸಿಕೊಂಡಿದ್ದೇನೆ" ಎಂದಿದ್ದಾರೆ.


Click it and Unblock the Notifications








