ಭಾರತದಲ್ಲಿ ಪ್ರತಿ 5 ನಿಮಿಷಕ್ಕೊಂದು ಸಾವು ಗ್ಯಾರಂಟಿ!

By Nagaraja

ನೀವು ಭಾರತದಲ್ಲಿ ಜೀವಿಸುತ್ತೀರಾ? ಅಂದರೆ ಇದಕ್ಕಿಂತ ಕೆಟ್ಟ ರಸ್ತೆ ಬೇರೆ ಎಲ್ಲಿಯೂ ನಿಮಗೆ ಸಿಗಲಾರದು. ಅಷ್ಟೇ ಯಾಕೆ ಪ್ರತಿ ಐದು ನಿಮಿಷಕ್ಕೊಂದು ಸಾವು ಗ್ಯಾರಂಟಿ ಅಂತೆ! ಹೌದು, ಇಂತಹದೊಂದು ಭಯಾನಕ ವರದಿಯನ್ನು ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ.

ಅಷ್ಟೇ ಯಾಕೆ ಇನ್ನಷ್ಟು ಆಂತಕಕಾರಿ ವಿಷಯ ಏನೆಂದರೆ ಈ ಪ್ರಮಾಣವು 2010ರ ವೇಳೆಗೆ ಇನ್ನು ಹೆಚ್ಚಾಗಲಿದ್ದು, ಅಂದರೆ ಪ್ರತಿ ಮೂರು ನಿಮಿಷದಲ್ಲಿ ಐದು ಸಾವು ಸಂಭವಿಸುವ ಸಾಧ್ಯತೆಯಿದೆ ಎಂದಿದೆ. ಸಾರಿಗೆ ಸಂಚಾರ ಮತ್ತು ಹೆದ್ದಾರಿ ಸಚಿವಾಲಯದ ವರದಿಯ ಪ್ರಕಾರ 2012ರಲ್ಲಿ ಭಾರತದಲ್ಲಿ ರಸ್ತೆ ಅಪಘಾತದಿಂದಾಗಿ 138,258 ಮಂದಿ ಸಾವಿಗೀಡಾಗಿದ್ದರು.

accident

ಭಾರತದಲ್ಲಿ ವಾಹನಗಳ ಸಂಖ್ಯೆ ಗಣನೀಯವಾಗಿ ವರ್ಧನೆಯಾಗುತ್ತಿದ್ದಂತೆಯೇ ಅಪಘಾತಗಳ ಸಂಖ್ಯೆಯಲ್ಲೂ ಅಷ್ಟೇ ಪ್ರಮಾಣದ ಏರಿಕೆಯಾಗುತ್ತಿದೆ. ಇದು ಇತರ ಅಭಿವೃದ್ಧಿ ಹೊಂದಿದ ದೇಶಗಳನ್ನು ಹೋಲಿಸಿದಾಗ ತುಂಬಾನೇ ಜಾಸ್ತಿಯಾಗಿದೆ.

ಭಾರತದ ರಸ್ತೆ ಎಷ್ಟು ಭಯಾನಕ ಎಂಬುದಕ್ಕೆ ಉತ್ತಮ ಉದಾಹರಣೆಯೆಂಬಂತೆ ಇತ್ತೀಚೆಗಷ್ಟೇ ಕೇಂದ್ರ ಸರಕಾರದ ಸಚಿವ ಗೋಪಿನಾಥ್ ಮುಂಡೆ ರಸ್ತೆ ಅಪಘಾತಕ್ಕೆ ಬಲಿಯಾಗಿರುವ ಘಟನೆ ನೆನಪಿಸಬಹುದಾಗಿದೆ.

ಯುರೋಪ್ ರಾಷ್ಟ್ರಗಳಲ್ಲಿ ಕ್ರಾಶ್ ಟೆಸ್ಟಿಂಗ್ ಸಾಮಾನ್ಯವಾಗಿದೆ. ಭಾರತದಲ್ಲೂ ಕೆಲವೊಂದು ಮಾರ್ಪಾಡುಗಳೊಂದಿಗೆ ಕ್ರಾಶ್ ಟೆಸ್ಟಿಂಗ್ ಕಡ್ಡಾಯಗೊಳಿಸುವ ಕುರಿತಾಗಿ ವಾಹನ ತಯಾರಿಕ ಸಂಸ್ಥೆಗಳ ಜೊತೆ ಸರಕಾರ ಸಮಾಲೋಚನೆ ನಡೆಸುತ್ತಿದೆ.

More from DriveSpark

Article Published On: Tuesday, July 15, 2014, 15:07 [IST]
English summary
One person dies on India’s roads every five minutes, according to the World Health Organisation, a figure that’s projected to rise to one every three minutes by 2020.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+