ಭಾರತ ಆಗಲಿದೆ ವಿಶ್ವದ ಅತಿ ದೊಡ್ಡ ಕಾರು ತಯಾರಕ ದೇಶ

By Nagaraja

ಭಾರತ ಸರಕಾರದ ನೂತನ 'ಮೇಕ್ ಇನ್ ಇಂಡಿಯಾ' ಹೂಡಿಕಾ ಅಭಿಯಾನವನ್ನು ಸ್ವಾಗತಿಸಿರುವ ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಭಾರತವು ವಿಶ್ವದ ಅತಿ ದೊಡ್ಡ ಕಾರು ತಯಾರಕ ದೇಶ ಎನಿಸಿಕೊಳ್ಳಲಿದೆ ಎಂದಿದೆ.

ಭಾರತವನ್ನು ವಿಶ್ವದ ವಾಹನ ತಯಾರಕದ ಕೇಂದ್ರವಾಗಿಸುವುದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರಿಯಾಗಿತ್ತು. ಇದರಂತೆ ಬಹುನಿರೀಕ್ಷಿತ 'ಮೇಕ್ ಇನ್ ಇಂಡಿಯಾ' ಅಭಿಯಾನಕ್ಕೆ ಚಾಲನೆ ನೀಡಿದ್ದರು.

swift

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿರುವ ಕಿನೆಚಿ ಅಯುಕವಾ, ವಿವಿಧ ಸರಕಾರಗಳ ನೀತಿ, ನಿಯಮ ಹಾಗೂ ವಿಧಾನಗಳಿಂದಾಗಿ ಭಾರತದಲ್ಲಿ ನಿರ್ಮಾಣ ವೆಚ್ಚ ಹೆಚ್ಚಾಗುತ್ತಿದೆ. ಆದರೆ ಹೊಸತಾಗಿ ಪ್ರಾರಂಭವಾಗಿರುವ ಮೇಕ್ ಇನ್ ಇಂಡಿಯಾ ಅಭಿಯಾನದ ಮೂಲಕ ಹೂಡಿಕೆಗೆ ಸುಲಭ ನಿಯಮ ಹಾಗೂ ರೂಢಿ ಜಾರಿಯಾಗುವ ನಿರೀಕ್ಷೆಯಿದೆ ಎಂದಿದ್ದಾರೆ.

ಮಾತು ಮುಂದುವರಿಸಿದ ಅವರು, ಭಾರತದಲ್ಲಿ ವ್ಯಾಪಾರ ಮಾಡುವುದು ಅಷ್ಟು ಸುಲಭದ ವಿಷಯವಲ್ಲ. ಆದರೆ ಪ್ರಧಾನಿ ಮೋದಿ ಅವರ ಹೊಸತಾ ಮೇಕ್ ಇನ್ ಇಂಡಿಯಾ ಅಭಿಯಾನವು ಈ ನಿಟ್ಟಿನಲ್ಲಿ ನೆರವಾಗುವ ಭರವಸೆಯಿದೆ ಎಂದಿದ್ದಾರೆ.

ದೇಶದ ಅತಿ ಪುರಾತನ ಕಾರು ಸಂಸ್ಥೆಗಳಲ್ಲಿ ಒಂದಾಗಿರುವ ಮಾರುತಿ ಈಗಲೂ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಕೈಗೆಟುವ ದರಗಳಲ್ಲಿ ಹೊಸ ಮಾದರಿಗಳನ್ನು ಪರಿಚಯಿಸುವ ಇರಾದೆ ಹೊಂದಿದೆ.

More from DriveSpark

Article Published On: Saturday, September 27, 2014, 12:30 [IST]
English summary
According to Maruti Suzuki India Pvt Ltd Company India have the potentionl to become world's biggest car maker.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+