ಕೊನೆಗೂ ಪುನಶ್ಚೇತನ ಕಂಡ ಕಾರು, ಬೈಕ್ ಮಾರಾಟ ವೃದ್ಧಿ
ಸತತವಾಗಿ ಕುಸಿತವನ್ನು ಅನುಭವಿಸುತ್ತಿದ್ದ ಭಾರತ ವಾಹನ ಮಾರುಕಟ್ಟೆಯು ಕೊನೆಗೂ ಚೇತರಿಕೆಯನ್ನು ಕಂಡಿದೆ. ವರದಿಗಳ ಪ್ರಕಾರ ಮೇ ತಿಂಗಳ ಮಾರಾಟದಲ್ಲಿ ದೇಶಿಯ ವಾಹನ ಮಾರಾಟವು ಶೇಕಡಾ 13.22ರಷ್ಟು ಏರಿಕೆ ಕಂಡಿದೆ.
ವಾಹನ ವಾಹನೋದ್ಯಮ ಒಕ್ಕೂಟ (ಸಿಯಾಮ್) ಬಿಡುಗಡೆ ಮಾಡಿರುವ ವರದಿಯಲ್ಲಿ 2014 ಮೇ ಅವಧಿಯಲ್ಲಿ 16,98,138 ಯುನಿಟ್ ಮಾರಾಟವಾಗಿದೆ. ಕಳೆದ ಬಾರಿಯಿದು 14,99,893 ಯುನಿಟ್ ಮಾತ್ರವಾಗಿದ್ದವು.

ಈ ಪಾಕಿ ಎಪ್ರಿಲ್ ಹಾಗೂ ಮೇ ಅವಧಿಯಗಳಲ್ಲಿ ಅನುಕ್ರಮವಾಗಿ ಶೇಕಡಾ 5.08 ಹಾಗೂ 10.15ರಷ್ಟು ಕುಸಿತ ಕಂಡಿದ್ದ ಕಾರು ಮಾರಾಟವು ಮೇ ತಿಂಗಳಲ್ಲಿ 3.08ರಷ್ಟು ಏರಿಕೆ ಕಾಣುವ ಮೂಲಕ ಪುನಶ್ಚೇತನ ಕಂಡಿದೆ. ಇದು ದೇಶದ ವಾಹನೋದ್ಯಮ ಪಾಲಿಗೆ ಶುಭ ಸಂದೇಶವಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಕಾಕತಾಳೀಯವೆಂಬಂತೆ ದೇಶದ ಸಾರ್ವತ್ರಿಕ ಚುನಾವಣೆಯು ಇದೇ ಮೇ ತಿಂಗಳಲ್ಲಿ ನಡೆದಿದ್ದು, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಭರ್ಜರಿ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ಅದೇ ಹೊತ್ತಿಗೆ ಹಿಂದಿನ ಕೇಂದ್ರ ಸರಕಾರ ಮಂಡಿಸಿರುವ ತಾತ್ಕಲಿಕ ಬಜೆಟ್‌ನಲ್ಲಿ ಅಬಕಾರಿ ಸುಂಕವನ್ನು ಇಳಿಕೆಗೊಳಿಸಿರುವುದು ಮಾರಾಟ ಏರುಗತಿ ಸಾಧಿಸಲು ನೆರವಾಗಿದೆ ಎಂಬುದು ಗಮನಾರ್ಹವಾಗಿದೆ.
ಸಿಯಾಮ್ ಪ್ರಕಾರ, ದೇಶಿಯ ಕಾರು ಮಾರಾಟವು ಮೇ ತಿಂಗಳಲ್ಲಿ 1,48,577 ಯುನಿಟ್‌ಗಳಾಗಿವೆ. ಕಳೆದ ಬಾರಿಯಿದು 1,44,132 ಯುನಿಟ್ ಮಾತ್ರವಾಗಿತ್ತು.
ವಾಹನ ತಯಾರಕ ಸಂಸ್ಥೆಗಳ ವಿವರ
ಮಾರುತಿ ಸುಜುಕಿ - 12.35 % ಏರಿಕೆ
2014 ಮೇ - 74,536
2013 ಮೇ - 66,342
ಹ್ಯುಂಡೈ - 12.18 % ಏರಿಕೆ
2014 ಮೇ - 35,955
2013 ಮೇ - 32,052
ಹೋಂಡಾ - 18 % ಏರಿಕೆ
2014 ಮೇ - 13,303
2013 ಮೇ - 11,274
ಅದೇ ಹೊತ್ತಿಗೆ ದ್ವಿಚಕ್ರ ವಿಭಾಗವು 2014 ಮೇ ತಿಂಗಳಲ್ಲಿ ಶೇಕಡಾ 16.3ರಷ್ಟು ಏರಿಕೆ ಕಂಡಿದೆ. ಈ ಅವಧಿಯಲ್ಲಿ ಒಟ್ಟು 14,02,830 ಯುನಿಟ್ ಮಾರಾಟ ಕಂಡಿದ್ದರೆ ಕಳೆದ ವರ್ಷ ಈ ಸಂಖ್ಯೆ 12,06,173 ಯುನಿಟ್‌ಗಳಾಗಿತ್ತು. ಈ ಪೈಕಿ ಬೈಕ್ ವಿಭಾಗವು ಶೇಕಡಾ 11.71 ಹಾಗೂ ಸ್ಕೂಟರ್ ವಿಭಾಗವು ಶೇಕಡಾ 34.48ರಷ್ಟು ಏರಿಕೆ ಸಾಧಿಸಿದೆ.
ಬೈಕ್ ಮಾರಾಟ
2014 ಮೇ - 9,84,469
2013 ಮೇ - 8,81,288
ಸ್ಕೂಟರ್ ಮಾರಾಟ
2014 ಮೇ - 3,57,564
2013 ಮೇ - 2,65,892


Click it and Unblock the Notifications








