ಅಬಕಾರಿ ಸುಂಕ ವಿನಾಯಿತಿ ಅವಧಿ ವಿಸ್ತರಣೆ ಕೇಂದ್ರದ ಪರಿಗಣನೆಯಲ್ಲಿ
ಪೂರಕವಾದ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರಕಾರವು ನೀಡಿಕೊಂಡು ಬಂದಿರುವ ಅಬಕಾರಿ ಸುಂಕ ವಿನಾಯಿತಿಯನ್ನು ಇನ್ನಷ್ಟು ಕಾಲ ಮುಂದುವರಿಸುವ ಪರಿಗಣನೆಯಲ್ಲಿದೆ. ಇದು ಹಿನ್ನಡೆಯಲ್ಲಿರುವ ವಾಹನ ಜಗತ್ತಿಗೆ ಸಾಕಷ್ಟು ನಿರಾಳತೆ ತರುವಂತಾಗಿದೆ.
ಕಳೆದ ಕೇಂದ್ರ ಮಧ್ಯಂತರ ಬಜೆಟ್‌ನಲ್ಲಿ ನೀಡಲಾಗಿದ್ದ ಅಬಕಾರಿ ಸುಂಕ ವಿನಾಯಿತಿಯನ್ನು ಕಳೆದ ಜೂನ್ ತಿಂಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಇನ್ನಷ್ಟು ಆರು ತಿಂಗಳ ಕಾಲ ಮುಂದುವರಿಸಿತ್ತು.

ಇದೀಗ ಹೇಳಿಕೆ ಕೊಟ್ಟಿರುವ ಕೇಂದ್ರ ಹಣಕಾಸು ರಾಜ್ಯ ಸಚಿವ ಜಯಂತ್ ಸಿನ್ಹಾ, "ಅಬಕಾರಿ ಸುಂಕ ವಿನಾಯಿತಿ ಅವಧಿ ವಿಸ್ತಾರಣೆ ಪರಿಗಣನೆಯಲ್ಲಿದೆ" ಎಂದಿದ್ದಾರೆ.
ಇದಕ್ಕೂ ಮೊದಲು ಹೇಳಿಕೆ ನೀಡಿದ್ದ ಹಣಕಾಸು ಸಚಿವ "ಡಿಸೆಂಬರ್ 31ರ ವರೆಗೆ ತಾಳ್ಮೆಯಿಂದ ಇರುವಂತೆ" ಸೂಚನೆ ನೀಡಿದ್ದರು.


Click it and Unblock the Notifications