ಭಾರತ ನಿರ್ಮಿತ ದಟ್ಸನ್ ಗೊ ದ. ಆಫ್ರಿಕಾದಲ್ಲಿ ಅನಾವರಣ
ಭಾರತ ನಿರ್ಮಿತ ದಟ್ಸನ್ ಗೊ ಸಣ್ಣ ಕಾರು ದಕ್ಷಿಣ ಆಫ್ರಿಕಾದಲ್ಲಿ ಅನಾವರಣಗೊಂಡಿದೆ. ಇದು ಮುಂದಿನ ದಿನಗಳಲ್ಲಿ ಈ ಆಫ್ರಿಕಾ ರಾಷ್ಟ್ರದಲ್ಲಿ ಮಾರಾಟವಾಗಲಿದೆ.
ಭಾರತದ ಮಾದರಿಗೆ ಹೋಲಿಸಿದರೆ ದಟ್ಸನ್ ಗೊ ಸ್ವಲ್ಪ ದುಬಾರಿಯಾಗಲಿದ್ದು, 5.5 ಲಕ್ಷ ರು. ತಗುಲಲಿದೆ. ಹಾಗಿದ್ದರೂ ಇದು ಕಡಿಮೆ ದರದ ಕಾರುಗಳ ವಿಭಾಗದಲ್ಲಿ ಗುರುತಿಸಿಕೊಳ್ಳಲಿದೆ.

ಭಾರತದಿಂದ ರಫ್ತು ಮಾಡುತ್ತಿರುವುದೇ ದಟ್ಸನ್ ಗೊ ಬೆಲೆಯೇರಿಕೆಗೆ ಕಾರಣವಾಗಿದೆ. ಈ ಮೂಲಕ ಇದೇ ಮೊದಲ ಬಾರಿಗೆ ದೇಶದಲ್ಲಿ ಸ್ಥಳೀಯವಾಗಿ ಉತ್ಪಾದನೆಯಾಗುತ್ತಿರುವ ದಟ್ಸನ್ ಗೊ ರಫ್ತಾಗುತ್ತಿದೆ.
ಹಾಗಿದ್ದರೂ ಆಫ್ರಿಕಾ ಮಾದರಿಯು ಹೆಚ್ಚು ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ. ಇದರಲ್ಲೂ 1.2 ಲೀಟರ್ ಪೆಟ್ರೋಲ್ ಎಂಜಿನ್ ಬಳಕೆಯಾಗಲಿದೆ. ಸದ್ಯಕ್ಕೆ ದಕ್ಷಿಣ ಆಫ್ರಿಕಾದಲ್ಲಿ ದಟ್ಸನ್ ಘಟಕ ತೆರೆಯುವ ಯಾವುದೇ ಯೋಜನೆಯನ್ನು ನಿಸ್ಸಾನ್ ಹೊಂದಿಲ್ಲ. ಅಲ್ಲದೆ ದಟ್ಸನ್ ವಿತರಣೆಗಾಗಿ 30ರಷ್ಟು ಡೀಲರ್‌ಗಳನ್ನು ತೆರೆಯಲಾಗಿದೆ.


Click it and Unblock the Notifications








