ಜಾಗ್ವಾರ್ ಎಫ್-ಟೈಪ್ ಕೂಪೆ ಲಾಂಚ್; ದರ ಜಸ್ಟ್ 1.21 ಕೋಟಿ ರು.
ಐಷಾರಾಮಿ ಕಾರು ಸಂಸ್ಥೆಯಾಗಿರುವ ಜಾಗ್ವಾರ್, ನೂತನ ಎಫ್ ಟೈಪ್ ಕೂಪೆ ಕಾರನ್ನು ಬಿಡುಗಡೆಗೊಳಿಸಿದೆ. ಇದರ ದರ 1.21 ಕೋಟಿ ರು.ಗಳಾಗಿವೆ.
ಅತ್ಯಂತ ಸುಂದರ ವಿನ್ಯಾಸ ಪಡೆದುಕೊಂಡಿರುವ ಜಾಗ್ವಾರ್ ಎಫ್ ಟೈಪ್ ಕಾರನ್ನು 2014 ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶಿಸಲಾಗಿತ್ತು. ಇದರಂತೆ ಇದೀಗ ಭಾರತ ಮಾರುಕಟ್ಟೆಯನ್ನು ಪ್ರವೇಶಿಸಿದೆ.

ಒಟ್ಟು ಮೂರು ವೆರಿಯಂಟ್‌ಗಳಲ್ಲಿ ಜಾಗ್ವಾರ್ ಎಫ್-ಟೈಪ್ ಕೂಪೆ ಲಭ್ಯವಾಗಲಿದೆ. ಇದು 3.0 ಲೀಟರ್ ವಿ6 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 340 ಪಿಎಸ್ ಪವರ್ (450 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದರಲಿದೆ. ಹಾಗೆಯೇ 8 ಸ್ಪೀಡ್ ಟ್ರಾನ್ಸ್‌ಮಿಷನ್ ಇರಲಿದೆ.
ಇದು ಕೇವಲ 5.3 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ. ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರಲಿದೆ.

ದರ ಮಾಹಿತಿ
ಬೇಸ್ ವೆರಿಯಂಟ್ ಎಫ್ ಟೈಪ್ ಕೂಪೆ - 1.21 ಕೋಟಿ ರು. (ದೆಹಲಿ ಎಕ್ಸ್ ಶೋ ರೂಂ)
ಎಫ್ - ಟೈಪ್ ಎಸ್ ಕೂಪೆ
ಇದು 3.0 ಲೀಟರ್ ಎಂಜಿನ್ ಹೊಂದಿದ್ದು, 380 ಪಿಎಸ್ ಪವರ್ (460 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ 4.9 ಸೆಕೆಂಡುಗಳಲ್ಲಿ ಗಂಟೆಗೆ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.
ಎಫ್ ಟೈಪ್ ಎಸ್ ಕೂಪೆ ದರ ಮಾಹಿತಿ:
1.34 ಕೋಟಿ ರು. (ಎಕ್ಸ್ ಶೋ ರೂಂ ದೆಹಲಿ)

ಎಫ್ ಟೈಪ್ ಆರ್ ಕೂಪೆ
ಪ್ರಸ್ತುತ ಆವೃತ್ತಿಯು 5.0 ಲೀಟರ್ ಸೂಪರ್ ಚಾರ್ಜ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 550 ಪಿಎಸ್ ಪವರ್ (680 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಇದು ಕೇವಲ 4.3 ಸೆಕೆಂಡುಗಳಲ್ಲಿ 100 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ.


Click it and Unblock the Notifications








