ಭಾರತದಲ್ಲಿ ಜಾಗ್ವಾರ್ ಲ್ಯಾಂಡ್ ರೋವರ್‌ಗೆ 5ರ ಸಂಭ್ರಮ
ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಬ್ರಿಟನ್ ಮೂಲದ ಪ್ರಖ್ಯಾತ ಆಟೋಮೊಬೈಲ್ ಬ್ರಾಂಡ್ ಜಾಗ್ವಾರ್ ಲ್ಯಾಂಡ್ ರೋವರ್ ಭಾರತಕ್ಕೆ ಕಾಲಿಟ್ಟು ಐದು ವರ್ಷಗಳೇ ಸಂದಿವೆ.
ದೇಶದ ಲಗ್ಷುರಿ ಮಾರುಕಟ್ಟೆಯಲ್ಲಿ ಕಳೆದೈದು ವರ್ಷಗಳಲ್ಲಿ ಗಮನಾರ್ಹ ಬೆಳವಣಿಗೆ ಸಾಧಿಸಿರುವ ಜಾಗ್ವಾರ್ ಲ್ಯಾಂಡ್ ರೋವರ್, ಶ್ರೀಮಂತ ವಾಹನ ಪ್ರೇಮಿಗಳಿಗೆ ಹೊಸ ಆಯ್ಕೆಯನ್ನು ಮುಂದಿಟ್ಟಿತ್ತು.

ಸದ್ಯ ಐದನೇ ವರ್ಷದ ಸಂಭ್ರಮದಲ್ಲಿರುವ ಈ ಬ್ರಿಟನ್ ವಾಹನ ತಯಾರಕ ಸಂಸ್ಥೆಯು ಭಾರತದಲ್ಲಿರುವ ನಿರ್ದಿಷ್ಟ ಮಾದರಿಗಳಿಗೆ ಮೂರು ವರ್ಷಗಳ ಸರ್ವೀಸ್ ಯೋಜನೆ ಒದಗಿಸುತ್ತಿದೆ.
ಜಾಗ್ವಾರ್ ಲ್ಯಾಂಡ್ ರೋವರ್ ಇತ್ತೀಚೆಗಷ್ಟೇ 'ಅಲೈವ್ ಡ್ರೈವ್ ಎಕ್ಸ್‌ಪೀರಿಯನ್ಸ್' ಲಾಂಚ್ ಮಾಡಿತ್ತು. ಈ ಕಾರ್ಯಕ್ರಮವು ಹೊಸ ಗ್ರಾಹಕರನ್ನು ಹೆಚ್ಚೆಚ್ಚು ತನ್ನತ್ತ ಸೆಳೆಯುವ ಇರಾದೆ ಹೊಂದಿದೆ.
ಇದರಂತೆ ಆಸಕ್ತರು ತಮ್ಮ ನಗರಗಳಲ್ಲೇ ಎಫ್-ಟೈಪ್ ಮತ್ತು ಎಕ್ಸ್‌ಕೆಆರ್-ಎಸ್ ಮಾದರಿಗಳನ್ನು ಟೆಸ್ಟ್ ಡ್ರೈವ್ ಮಾಡಬಹುದಾಗಿದೆ. ದೇಶದ ಹಲವಾರು ನಗರಗಳಲ್ಲಿ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದಲ್ಲದೆ ತನ್ನ ಎಸ್‌ಯುವಿ ಸಾಮರ್ಥ್ಯವನ್ನು ಪರಿಚಯಿಸಲು ಲ್ಯಾಂಡ್ ರೋವರ್ ಎಕ್ಸ್‌ಪೀರಿಯನ್ಸ್ ಕಾರ್ಯಕ್ರಮಗಳನ್ನು ಕೈಗೊಂಡಿತ್ತು.
ಭಾರತದಲ್ಲಿ 15ಕ್ಕೂ ಹೆಚ್ಚು ಗರಿಷ್ಠ ಆಟೋಮೋಟಿವ್ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಜಾಗ್ವಾರ್, 2013ನೇ ಸಾಲಿಗೆ ಹೋಲಿಸಿದಾದ ಶೇಕಡಾ 22ರಷ್ಟು ವೃದ್ಧಿ ದಾಖಲಿಸಿತ್ತು. ಸದ್ಯ ದೇಶದ್ಯಾಂತ 21 ಡೀಲರ್‌ಶಿಪ್ ಜಾಲವನ್ನು ಹೊಂದಿರುವ ಜಾಗ್ವಾರ್, ಪ್ರಸಕ್ತ ಆರ್ಥಿಕ ಸಾಲಿನಲ್ಲೇ ಇನ್ನೆರಡು ಹೊಸ ಡೀಲರ್‌ಶಿಪ್ ತೆರೆಯುವ ಯೋಜನೆ ಹೊಂದಿದೆ.
ಭಾರತದಲ್ಲಿ ಜಾಗ್ವಾರ್ ಎಕ್ಸ್‌ಜೆ, ಎಕ್ಸ್‌ಎಫ್, ಎಕ್ಸ್‌ಕೆ ಮತ್ತು ಎಫ್ ಟೈಪ್ ಮಾದರಿಗಳನ್ನು ಒದಗಿಸುತ್ತಿದೆ. ಹಾಗೆಯೇ ಲ್ಯಾಂಡ್ ರೋವರ್ ರೇಂಜ್‌ಗಳಲ್ಲಿ ರೇಂಜ್ ರೋವರ್, ರೇಂಜ್ ರೋವರ್ ಸ್ಪೋರ್ಟ್, ರೇಂಜ್ ರೋವರ್ ಇವೋಕ್, ಡಿಸ್ಕವರಿ 4 ಮತ್ತು ಫ್ರಿಲ್ಯಾಂಡರ್ 2 ಮಾದರಿಗಳು ಮಾರಾಟದಲ್ಲಿದೆ. ಅಂತೆಯೇ ಸದ್ಯ ಜಾಗ್ವಾ ರ್ ಎಕ್ಸ್‌ಎಫ್, ಎಕ್ಸ್‌ಜೆ ಮತ್ತು ಲ್ಯಾಂಡ್ ರೋವರ್ ಫ್ರೀಲ್ಯಾಂಡರ್ ಪುಣೆ ಘಟಕದಲ್ಲಿ ಸ್ಥಳೀಯವಾಗಿ ಜೋಡಣೆಯಾಗುತ್ತಿದೆ.


Click it and Unblock the Notifications








