ಜಾಗ್ವಾರ್ ಎಂಟ್ರಿ ವೆವೆಲ್ ಪೆಟ್ರೋಲ್ ವೆರಿಯಂಟ್ ಲಾಂಚ್
ದೇಶದಲ್ಲಿ ಜಾಗ್ವಾರ್ ಕಾರುಗಳಿಗೆ ವಿಶೇಷ ಸ್ಥಾನವಿದೆ. ಪ್ರಸ್ತುತ ಜಾಗ್ವಾರ್ ಎಕ್ಸ್‌ಎಫ್ ಎಂಟ್ರಿ ಲೆವೆಲ್ ಪೆಟ್ರೋಲ್ ಸೆಡಾನ್ ಕಾರು ಹೊಸ ವೆರಿಯಂಟ್‌ನಲ್ಲಿ ಪ್ರತ್ಯಕ್ಷವಾಗಿದೆ. ಇದು ಫೋರ್ಡ್‌ನ 2.0 ಲೀಟರ್ ಇಕೊಬೂಸ್ಟ್ ಎಂಜಿನ್‌ನಿಂದ ಆಗಮನವಾಗಲಿದೆ. ಇದಕ್ಕೆ ಸಮಾನವಾದ ಎಂಜಿನ್ ಎಕ್ಸ್‌ಜೆ ಬೇಸ್ ವೆರಿಯಂಟ್‌ನಲ್ಲೂ ಇದೆ.
ಇದರೊಂದಿಗೆ ಜಾಗ್ವಾರ್ ಎಕ್ಸ್‌ಎಫ್ ಮೂರು ವೆರಿಯಂಟ್‌ನಲ್ಲಿ ಲಭ್ಯವಿರಲಿದೆ. ಅವುಗಳೆಂದರೆ 2.0 ಲೀಟರ್ ಪೆಟ್ರೋಲ್, 2.2 ಲೀಟರ್ ಡೀಸೆಲ್ ಮತ್ತು 3.0 ಲೀಟರ್ ಡೀಸೆಲ್. ಹಾಗಿದ್ದರೂ ಜಾಗ್ವಾರ್ ಎಕ್ಸ್‌ಎಫ್ ನಿರ್ವಹಣಾ ಕಾರಾಗಿರುವ ಎಕ್ಸ್‌ಎಫ್‌ಆರ್ 5.0 ಲೀಟರ್ ಎಂಜಿನ್‌ನಿಂದ ಓಡಾಡಲಿದೆ.

ಜಾಗ್ವಾರ್‌ನ ನೂತನ 2.0 ಲೀಟರ್ ಇಕೊಬೂಸ್ಟ್ ಎಂಜಿನ್ 8 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನಿಂದ ನಿಯಂತ್ರಿಸಲ್ಪಡಲಿದ್ದು, 240ಕ್ಕೂ ಹೆಚ್ಚು ಅಶ್ವಶಕ್ತಿ (340 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇದು ಪ್ರತಿ ಲೀಟರ್‌ಗೆ 10.8 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದ್ದು, ಕೇವಲ 7.9 ಸೆಕೆಂಡುಗಳಲ್ಲೇ ಗಂಟೆಗೆ 100 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಹಾಗೆಯೇ ಗಂಟೆಗೆ ಗರಿಷ್ಠ 250 ಕೀ.ಮೀ. ವೇಗದಲ್ಲಿ ಚಲಿಸಲಿದೆ.
ಅಂತೆಯೇ ಜಾಗ್ವಾರ್ ಎಕ್ಸ್‌ಎಫ್ ಐಷಾರಾಮಿ ಕಾರಿನಲ್ಲಿ ರಿಯರ್ ವ್ಯೂ ಕ್ಯಾಮೆರಾ, ಮೂನ್‌ರೂಫ್, ನೇವಿಗೇಷನ್ ಸಿಸ್ಟಂ, ಟಿವಿ ಟ್ಯೂನರ್ ಸ್ಟಾಂಡರ್ಡ್ ವೈಶಿಷ್ಟ್ಯಗಳಾಗಿ ಲಭ್ಯವಿರಲಿದೆ. ಹಾಗೆಯೇ ಪಾದಚಾರಿ ಸಂಪರ್ಕ ಸಂವೇದಿ ಫೀಚರ್ ಹಾಗೂ ಮುಂಭಾಗ ಹಾಗೂ ಬದಿಗಳಲ್ಲಿ ಏರ್ ಬ್ಯಾಗ್ ಸ್ಟಾಂಡರ್ಡ್ ಆಗಿರಲಿದೆ.
ಮಹಾರಾಷ್ಟ್ರದ ಘಟಕದಲ್ಲಿ ಸ್ಥಳೀಯವಾಗಿ ಉತ್ಪಾದನೆಯಾಗಲಿರುವ ಜಾಗ್ವಾರ್ ಎಕ್ಸ್‌ಎಫ್ 2.0 ಲೀಟರ್ ಮಾದರಿಯ ಮುಂಬೈ ಎಕ್ಸ್ ಶೋ ರೂಂ ದರ 48.3 ಲಕ್ಷ ರು.ಗಳಾಗಿವೆ. ಅಂತೆಯೇ ದೇಶದ 17 ನಗರಗಳಲ್ಲಾಗಿ ಸ್ಥಿತಗೊಂಡಿರುವ 19 ಜಾಗ್ವಾರ್ ಔಟ್ಲೆಟ್‌ಗಳಲ್ಲಿ ಈ ಕಾರು ಲಭ್ಯವಿರಲಿದೆ.


Click it and Unblock the Notifications








