92 ಲಕ್ಷಕ್ಕೆ ಮೇಡ್ ಇನ್ ಇಂಡಿಯಾ ಜಾಗ್ವಾರ್ ಎಕ್ಸ್‌ಜೆ ಬಿಡುಗಡೆ

By Nagaraja

ಜಾಗ್ವಾರ್ ಲ್ಯಾಂಡ್ ರೋವರ್, ಟಾಟಾ ಮೋಟಾರ್ಸ್ ಗ್ರೂಪ್ ಅಧೀನತೆಯಲ್ಲಿರುವ ವಿಚಾರ ನಿಮಗೆಲ್ಲಿರಗೂ ತಿಳಿದಿದೆ. ಬ್ರಿಟನ್‌ನ ಈ ಐಕಾನಿಕ್ ಸಂಸ್ಥೆಯು 2014 ಆಟೋ ಎಕ್ಸ್‌ಪೋದಲ್ಲಿ ಬಹುನಿರೀಕ್ಷಿತ ಎಕ್ಸ್‌ಜೆ ಆವೃತ್ತಿಯನ್ನು ಪರಿಚಯಿಸಿತ್ತು.

ಸಿಕೆಡಿ
ತದಾ ಸಮಯದಲ್ಲೇ ಭಾರತದಲ್ಲೇ ಸ್ಥಳೀಯವಾಗಿ ಜೋಡಣೆ ಮಾಡುವ ಬಗ್ಗೆ ಮಾಹಿತಿಯನ್ನು ಒದಗಿಸಿತ್ತು. ಅದರೆ ಕಂಪ್ಲೀಟ್ ನೌಕ್ಡ್ ಡೌನ್ (ಸಿಕೆಡಿ) ಮೂಲಕ ದೇಶದಲ್ಲಿ ಹೆಚ್ಚು ವಿಸ್ವಾಸಾರ್ಹ ಮಾದರಿಯೆಂಬ ಮನ್ನಣೆ ಗಿಟ್ಟಿಸಿಕೊಳ್ಳುವುದು ಜಾಗ್ವಾರ್ ಪ್ರಯತ್ನವಾಗಿತ್ತು. ಅದರಲ್ಲೀಗ ಸಂಸ್ಥೆಯು ಯಶ ಕಂಡಿದೆ.


ಬೆಲೆ
ಇದೀಗ ದೇಶದಲ್ಲೇ ಜೋಡಣೆಯಾಗಿರುವ ಜಾಗ್ವಾರ್ ಎಕ್ಸ್‌ಜೆ ಕಾರನ್ನು ಲಾಂಚ್ ಮಾಡಲಾಗಿದೆ. ಇದಕ್ಕಾಗಿ ಟಾಟಾ ಮೋಟಾರ್ಸ್ ಪುಣೆ ಘಟಕವನ್ನು ಹಂಚಿಕೊಳ್ಳಲಾಗಿದೆ. ಇದರ ಮುಂಬೈ ಎಕ್ಸ್ ಶೋ ರೂಂ ದರ 92.10 ಲಕ್ಷ ರು.ಗಳಾಗಿವೆ. ಇದಕ್ಕೂ ಮೊದಲು ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ಭಾರತದಲ್ಲಿ ಎಕ್ಸ್‌ಜೆ ಆವೃತ್ತಿಯನ್ನು ಮಾರಾಟ ಮಾಡಲಾಗುತ್ತಿತ್ತು. ಇದರಿಂದಾಗಿ ಎಕ್ಸ್‌ಜೆ ಆವೃತ್ತಿಯು 1.16 ಕೋಟಿ ರು.ಗಳಷ್ಟು ದುಬಾರಿಯೆನಿಸಿತ್ತು.

ಎಂಜಿನ್
ಜಾಗ್ವಾರ್ ಎಕ್ಸ್‌ಜೆ ಆವೃತ್ತಿಯಲ್ಲಿ 2993 ಸಿಸಿ ಡೀಸೆಲ್ 6 ಸಿಲಿಂಡರ್ ಎಂಜಿನ್ ಆಳವಡಿಸಲಾಗಿದ್ದು, 275 ಪಿಎಸ್ (600 ಎನ್‌ಎಂ ಟಾರ್ಕ್) ಉತ್ಪಾದಿಸುತ್ತದೆ. ಇದು ಕೇವಲ 6.4 ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಅಂತೆಯೇ 8 ಸ್ಪೀಡ್ ಝಡ್‌ಎಫ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪಡೆದುಕೊಂಡಿದೆ.

Jaguar XJ

ವೈಶಿಷ್ಟ್ಯ
ಸಾಫ್ಟ್ ಗ್ರೈನ್ ಲೆಥರ್, ಮೆರಿಡಿಯನ್ ಆಡಿಯೋ ಸಿಸ್ಟಂ, ನೇವಿಗೇಷನ್ ಸಿಸ್ಟ್, ಎಲ್‌ಸಿಡಿ ಪರದೆ, ಫ್ರಂಟ್ ಆಂಡ್ ರಿಯರ್ ಪಾರ್ಕಿಂಗ್ ಕ್ಯಾಮೆರಾ ಹಾಗೂ ಇನ್ನಿತರ ಹಲವಾರು ವೈಶಿಷ್ಟ್ಯಗಳು ಪಡೆದುಕೊಳ್ಳಲಿದೆ.

ಪ್ರತಿಸ್ಪರ್ಧಿ
ನೂತನ ಜಾಗ್ವಾರ್ ಎಕ್ಸ್‌ಜೆ ಇದೀಗ, ಮರ್ಸಿಡಿಸ್ ಬೆಂಝ್ ಹಾಗೂ ಬಿಎಂಡಬ್ಲ್ಯು ದುಬಾರಿ ಸಿಕೆಡಿ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ. ಅಂದರೆ ಎಸ್ ಕ್ಲಾಸ್ ಹಾಗೂ 7 ಸಿರೀಸ್ ಆವೃತ್ತಿಗಳಿಗೆ ಜಾಗ್ವಾರ್ ಕಠಿಣ ಪೈಪೋಟಿ ನೀಡುವ ಸಾಧ್ಯತೆಯಿದೆ.

More from DriveSpark

Article Published On: Friday, May 23, 2014, 14:51 [IST]
English summary
Jaguar has launched their XJ sedan which is assembled in India. Tata Motors will provide a part of the plant to Jaguar to assemble the flagship XJ at their Pune facility.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+