ಜಾಗ್ವಾರ್ ಎಕ್ಸ್‌ಜೆ ಜಾಹೀರಾತಿನಲ್ಲಿ ಕರೀನಾ ಕಮಾಲ್
ಸದ್ಯ ಸೆಲೆಬ್ರಿಟಿಗಳ ಕಾರು ಜಾಹೀರಾತು ಪ್ರಕರಣ ಜಾಸ್ತಿಯಾಗುತ್ತಲೇ ಇದೆ. ಇದೀಗಷ್ಟೇ ಕಾಮಿಡಿ ಸ್ಟಾರ್ ಕಪಿಲ್ ಶರ್ಮಾ, ಇನ್ನಷ್ಟೇ ಬಿಡುಗಡೆಯಾಗಲಿರುವ ಹೋಂಡಾ ಮೊಬಿಲಿಯೊ ಎಂಪಿವಿ ಪ್ರಚಾರ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಬಗ್ಗೆ ನಾವು ವರದಿ ಮಾಡಿರುತ್ತೇವೆ.
ಇದಕ್ಕೊಂದು ಸೇರ್ಪಡೆಯೆಂಬಂತೆ ಬಾಲಿವುಡ್ ಬ್ಯೂಟಿ ಕರೀನಾ ಕಪೂರ್, ದೇಶದ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿರುವ ಜಾಗ್ವಾರ್ ಎಕ್ಸ್‌ಜೆ ಟಿ.ವಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.
ಜಾಗ್ವಾರ್ ಎಕ್ಸ್‌ಜೆ ಐಷಾರಾಮಿ ಕಾರಿನಲ್ಲಿ ಪಯಣಿಸುವ ಕರೀನಾ, ಕಾರಿನ ಸೌಂದರ್ಯವನ್ನು ಬಿಚ್ಚಿಡುತ್ತಾರೆ. ಆಕರ್ಷಕ ವಿನ್ಯಾಸ, ಅತ್ಯುತ್ತಮ ನೋಟ ಹಾಗೂ ಗರಿಷ್ಠ ನಿರ್ವಹಣೆಯು ಜಾಗ್ವಾರ್ ವಿಷೇಶವಾಗಿದೆ. ಈ ವೀಡಿಯೋ ನೀವು ಮಿಸ್ ಮಾಡಿಕೊಂಡಿರುವೀರಾ? ಇಲ್ಲಿದೆ ನೋಡಿ


Click it and Unblock the Notifications








