ದೇಶದ ಡೀಸೆಲ್ ಗಾಡಿಗಳ ಗುಣಮಟ್ಟದಲ್ಲಿ ವೃದ್ಧಿ
ಕಳೆದ ನಾಲ್ಕೈದು ವರ್ಷಗಳಿಂದ ದೇಶದಲ್ಲಿ ಡೀಸೆಲ್ ಕಾರುಗಳ ಬೇಡಿಕೆಯಲ್ಲಿ ಹೆಚ್ಚಳವುಂಟಾಗಿದೆ. ಇದರಂತೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಡೀಸೆಲ್ ಕಾರುಗಳ ಗುಣಮಟ್ಟತೆಯಲ್ಲಿ ಗಮನಾರ್ಹ ಸುಧಾರಣೆ ಕಂಡುಬರುವುದಾಗಿ ಮಾರುಕಟ್ಟೆ ಸಂಶೋಧನಾ ಸಂಸ್ಥೆಯಾಗಿರುವ ಜೆ.ಪವರ್ ತಿಳಿಸಿದೆ.
ಕೆಲವು ವರ್ಷಗಳ ಹಿಂದೆ ಡೀಸೆಲ್ ಕಾರುಗಳು ಬಲು ದುಬಾರಿ, ಅದೆಲ್ಲಿಯಾದರೂ ಕೆಟ್ಟು ಹೋದರೆ ದುರಸ್ತಿ ಮಾಡುವುದೇ ದೊಡ್ಡ ಸಂಕಷ್ಟ ಎಂಬ ಮಾತಿತ್ತು. ಆದರೆ ಜೆ.ಡಿ ಪವರ್ ಬಿಡುಗಡೆ ಮಾಡಿರುವ 2014 ಭಾರತ ಪ್ರಾರಂಭಿಕ ಗುಣಮಟ್ಟದ ಅಧ್ಯಯನ (ಐಕ್ಯೂಎಸ್) ವರದಿಯಲ್ಲಿ, ಹೊಸ ಮಾಲಿಕರಿಗೆ ಎದುರಾಗುತ್ತಿರುವ ತೊಂದರೆಯಲ್ಲಿ ಗಣನೀಯ ಕುಸಿತವುಂಟಾಗಿದೆ ಎಂಬ ಮಾಹಿತಿಯನ್ನು ಹೊರಗೆಡವಿದೆ.
2010ನೇ ಸಾಲಿಗೆ ಹೋಲಿಸಿದರೆ 2014 ದೇಶದಲ್ಲಿ ಡೀಸೆಲ್ ಕಾರುಗಳ ಮಾರಾಟದಲ್ಲಿ ಶೇಕಡಾ 16ರಷ್ಟು ಏರಿಕೆಯುಂಟಾಗಿದೆ. ಅಂತೆಯೇ ಆರಂಭಿಕ ಗುಣಮಟ್ಟತೆಯ ತೊಂದರೆಯು 96 ಪಿಪಿ100 ಪ್ರಮಾಣಕ್ಕೆ ಇಳಿಕೆಯುಂಟಾಗಿರುವುದಾಗಿ ವರದಿ ತಿಳಿಸಿದೆ. 2010ನೇ ಸಾಲಿನಲ್ಲಿ ಈ ಪ್ರಮಾಣ 148 ಪಿಪಿ100ರಷ್ಟಿತ್ತು.
ಹೊಸ ಡೀಸೆಲ್ ಕಾರು ಮಾಲಿಕರಿಗೆ ಮೊದಲ ಆರು ತಿಂಗಳಲ್ಲಿ ಎಂಜಿನ್, ಟ್ರಾನ್ಸ್‌ಮಿಷನ್, ಹೊರಮೈ, ಚಾಲನಾ ಅನುಭವ, ವೈಶಿಷ್ಟ್ಯ, ನಿಯಂತ್ರಣ, ಪರದೆ, ಒಳಮೈ, ಸೀಟು, ಆಡಿಯೋ, ಮಾಹಿತಿ ಮರರಂಜನಾ ವ್ಯವಸ್ಥೆ ಮತ್ತು ನೇವಿಗೇಷನ್ ವ್ಯವಸ್ಥೆಯಲ್ಲಿ ಎದುರಾಗುವ ತೊಂದರೆಗಳನ್ನು ಆಧಾರವಾಗಿಟ್ಟುಕೊಂಡು ಪ್ರತಿ ನೂರು ವಾಹನಗಳಿಗೆ (ಪಿಪಿ100) ಅಂಕ ನೀಡಲಾಗುತ್ತದೆ.
ಒಟ್ಟಾರೆಯಾಗಿ ವಾಹನ ಕೈಗೋರಿಕೋದ್ಯಮದಲ್ಲಿ ಡೀಸೆಲ್ ಕಾರುಗಳಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ ಎಂದು ತಿಳಿಸಿದೆ.

ಪ್ರಮುಖಾಂಶಗಳು
2013ಕ್ಕೆ ಹೋಲಿಸಿದಾಗ ಎಂಟ್ರಿ ಕಾಂಪಾಕ್ಟ್, ಎಯುವಿ/ಎಂಪಿವಿ ಮತ್ತು ಎಸ್‌ಯುವಿ ಸೆಗ್ಮೆಂಟ್‌ಗಳು ಅನುಕ್ರಮವಾಗಿ 48 ಪಿಪಿ100, 25 ಪಿಪಿ100 ಹಾಗೂ 20 ಪಿಪಿ100ಕ್ಕೆ ಸುಧಾರಣೆ.
ಹೊಸ ವಾಹನಗಳಲ್ಲಿ ಸಮಸ್ಯೆ - ಸಂಬಂಧಪಟ್ಟವರಿಂದ ವಿವರಣೆ ಪಡೆದ ಮಾಲಿಕರ ಸಂಖ್ಯೆಯು 183 ಪಿಪಿ100ರಿಂದ 94ಪಿಪಿ100ಕ್ಕೆ ಏರಿಕೆ.
2014 ಭಾರತ ಪ್ರಾರಂಭಿಕ ಗುಣಮಟ್ಟ ಅಧ್ಯಯನ ರಾಕಿಂಗ್:
- ಮಾರುತಿ ಹಾಗೂ ಹ್ಯುಂಡೈ ಸಂಸ್ಥೆಗಳು ಮುಂಚೂಣಿಯಲ್ಲಿ,
- ಎಂಟ್ರಿ ಕಾಂಪಾಕ್ಟ್ ವಿಭಾಗದಲ್ಲಿ ಮಾರುತಿ ಆಲ್ಟೊ 800,
- ಪ್ರೀಮಿಯಂ ಕಾಂಪಾಕ್ಟ್ ವಿಭಾಗದಲ್ಲಿ ಮಾರುತಿ ಸ್ವಿಫ್ಟ್,
- ಕಾಂಪಾಕ್ಟ್ ವಿಭಾಗದಲ್ಲಿ ಹ್ಯುಂಡೈ ಐ10,
- ಮಿಡ್ ಸೈಜ್ ವಿಭಾಗದಲ್ಲಿ ಹ್ಯುಂಡೈ ಎಕ್ಸ್‌ಸೆಂಟ್,
- ಅಪ್ಪರ್ ಕಾಂಪಾಕ್ಟ್ ಸೆಗ್ಮೆಂಟ್‌ನಲ್ಲಿ ಹೋಂಡಾ ಬ್ರಿಯೊ,
- ಎಸ್‌ಯುವಿ ವಿಭಾಗದಲ್ಲಿ ಇಕೊಸ್ಪೋರ್ಟ್,
- ಮಿಡ್ ಸೈಜ್ ವಿಭಾಗದಲ್ಲಿ ಸ್ಕೋಡಾ ರಾಪಿಡ್,
- ಎಯುವಿ/ಎಂಪಿವಿ ವಿಭಾಗದಲ್ಲಿ ಟೊಯೊಟಾ ಇನ್ನೋವಾ.
2013 ನವೆಂಬರ್‌ನಿಂದ 2014 ಜುಲೈ ತಿಂಗಳ ವರೆಗಿನ ಅವಧಿಯಲ್ಲಿ ಹೊಸ ವಾಹನಗಳನ್ನು ಖರೀದಿಸಿದ 8,429 ವಾಹನ ಮಾಲಿಕರ ಮೌಲ್ಯಮಾಪನದ ಆಧಾರದಲ್ಲಿ 2014 ಭಾರತ ಪ್ರಾರಂಭಿಕ ಗುಟಮಟ್ಟ ಅಧ್ಯಯನ (ಐಕ್ಯೂಎಸ್) ವರದಿಯನ್ನು ತಯಾರಿಸಲಾಗಿದೆ. ಪ್ರಸ್ತುತ ಅಧ್ಯಯನದಲ್ಲಿ 17 ವಾಹನ ತಯಾರಕರ 73 ವಾಹನಗಳು ಸೇರಿಕೊಂಡಿದ್ದವು. ಅಂತೆಯೇ 2014 ಮೇ ತಿಂಗಳಿಂದ ಸೆಪ್ಟೆಂಬರ್ ವರೆಗಿನ ಅವಧಿಯಲ್ಲಿ ದೇಶದ 30ರಷ್ಟು ನಗರಗಳಲ್ಲಿ ಅಧ್ಯಯನ ಕಲೆ ಹಾಕಲಾಗಿತ್ತು.
ಬೈಕನ್‌ವೀರ್ ಬೈಕರ್ ಬೈಕಿಂಗ್ ಗ್ಲೋವ್ಸ್ ರು. 340ರಿಂದ - ತ್ವರೆ ಮಾಡಿ


Click it and Unblock the Notifications