ಹೊಸ ಜೀಪ್ ಚೆರೊಕ್ ಬರಮಾಡಿಕೊಳ್ಳಲು ಸಜ್ಜಾಗಿರಿ
ನೂತನ ಜೀಪ್ ಚೆರೊಕ್ ಆವೃತ್ತಿಯು ಮುಂಬರು ಜಿನೆವಾ ಮೋಟಾರು ಶೋದಲ್ಲಿ ಭರ್ಜರಿ ಅನಾವರಣ ಕಾಣಲಿದೆ. 'ಎಲ್ಲಿಯಾದರೂ ಹೋಗಿ, ಏನೇ ಮಾಡಿ' ಎಂಬ ಟ್ಯಾಗ್ ಅಡಿಯಲ್ಲಿ ಜೀಪ್ ಎಸ್‌ಯುವಿ ವರ್ಷನ್ ರಂಗ ಪ್ರವೇಶ ಪಡೆಯಲಿದೆ. ಇದು ಚೆರೊಕ್ಯ ನಾಲ್ಕನೇ ಎಸ್‌ಯುವಿ ವರ್ಷನ್ ಎನಿಸಿಕೊಳ್ಳಲಿದೆ. ಇದು ಆಕ್ರಮಣಕಾರಿ ಹಾಗೂ ದಿಟ್ಟ ಲುಕ್ ಹೊಂದಿದ್ದು, ರಸ್ತೆಯಲ್ಲಿ ತನ್ನ ಸಾನಿಧ್ಯ ವ್ಯಕ್ತಪಡಿಸಲಿದೆ.
ವಿಶೇಷವೆಂದರೆ ಜಲಪಾತದಂತಹ ಇಳಿಜಾರಿನ ವಿನ್ಯಾಸವನ್ನು ಇದಕ್ಕೆ ಕಲ್ಪಿಸಿ ಕೊಡಲಾಗಿದೆ. ಅಲ್ಲದೆ ಮುಂದುಗಡೆ ಸಮಾನವಾಗಿರುವ ಏಳು ಗ್ರಿಲ್‌ಗಳನ್ನು ಪ್ರದಾನ ಮಾಡಲಾಗಿದೆ. ಹಾಗೆಯೇ ಡೇ ಟೈಮ್ ರನ್ನಿಂಗ್ಸ್ ಲೈಟ್ಸ್ ವಿಶೇಷವಾಗಿರಲಿದೆ.

ಪ್ರಸ್ತುತ ಎಸ್‌ಯುವಿ 17 ಇಂಚಿನ ಅಲಾಯ್ ವೀಲ್ ಹೊಂದಿರಲಿದೆ. ಹಾಗಿದ್ದರೂ ಟೈಲ್ ಲ್ಯಾಂಪ್‌ನಲ್ಲಿ ಎಲ್‌ಇಡಿ ಸೌಲಭ್ಯವಿರುವುದಿಲ್ಲ. ಹಾಗೆಯೇ ಗರಿಷ್ಠ ಸುರಕ್ಷಾ ಮಾನದಂಡಗಳನ್ನು ಅನುಸರಿಸಲಾಗಿದೆ.
ಇದು ಎರಡು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದು 2.0 ಲೀಟರ್ ಇನ್ ಲೈನ್ ಫೋರ್ ಟರ್ಬೊ ಚಾರ್ಜ್ಡ್ ಎಂಜಿನ್ ಪಡೆದುಕೊಳ್ಳಲಿದೆ. ಈ ಪೈಕಿ ಮೊದಲನೆಯದ್ದು 172 (350 ಎನ್‌ಎಂ ಟಾರ್ಕ್) ಹಾಗೂ ಎರಡನೇಯದ್ದು 142 ಪಿಎಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಇವೆರಡು ಅನುಕ್ರಮವಾಗಿ ಒಂಬತ್ತು ಸ್ಪೀಡ್ ಆಟೋ ಹಾಗೂ ಸಿಕ್ಸ್ ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.



Click it and Unblock the Notifications