ಆಂಡ್ರಾಯ್ಡ್‌ಮಯವಾಗಲಿದೆ ನಿಮ್ಮ ಕಾರು - ಇನ್ನು ಬಳಕೆ ಸುಲಭ

By Nagaraja

ಆಧುನಿಕ ಜಗತ್ತಿನ ತಂತ್ರಜ್ಞಾನದಲ್ಲಿ ಆಂಡ್ರಾಯ್ಡ್ ಅತಿ ಹೆಚ್ಚು ಮನ್ನಣೆಗೆ ಪಾತ್ರವಾದ ಆಪರೇಟಿಂಗ್ ಸಿಸ್ಟಂ ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಇದನ್ನೇ ಗುರುತಿಸಿಕೊಂಡಿರುವ ಜಗತ್ತಿನ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಗಳೆಲ್ಲ ಒಟ್ಟು ಸೇರಿ ಭವಿಷ್ಯದಲ್ಲಿ ಇಂತಹದೊಂದು ತಂತ್ರಜ್ಞಾನವನ್ನು ಕಾರುಗಳ ಮಾಹಿತಿ ಮನರಂಜಾನ ವ್ಯವಸ್ಥೆಯಲ್ಲೂ (infotainment system) ಆಳವಡಿಸುವ ನಿರ್ಧಾರಕ್ಕೆ ಬಂದಿದೆ.

ಈ ನಿಟ್ಟಿನಲ್ಲಿ ಮುಂದೆ ಬಂದಿರುವ ಆಡಿ, ವೋಲ್ವೋ, ಜನರಲ್ ಮೋಟಾರ್ಸ್, ಹೋಂಡಾ ಹಾಗೂ ಹ್ಯುಂಡೈಗಳಂತಹ ಸಂಸ್ಥೆಗಳು ಓಪನ್ ಆಟೋಮೋಟಿವ್ ಅಲಯನ್ಸ್ (Open Automotive Alliance) ರೂಪಿಸಿದ್ದು, ಇದರಂತೆ ಭವಿಷ್ಯದ ಮಾದರಿಯ ಕಾರುಗಳಲ್ಲಿ 'ಆಂಡ್ರಾಯ್ಡ್ ಆಟೋ' ತಂತ್ರಜ್ಞಾನ ಆಳವಡಿಕೆಯಾಗಲಿದೆ.

Android Auto

ಆಪಲ್‌ನ ಮಹತ್ತರ ಕಾರ್ ಪ್ಲೇ ಬೆನ್ನಲ್ಲೇ ಇಂತಹದೊಂದು ಘೋಷಣೆ ಹೊರಬಂದಿರುವುದು ಮಹತ್ವಪೂರ್ಣವೆನಿಸಿದೆ. ಸದ್ಯ ಹೊಸ ಆಂಡ್ರಾಯ್ಡ್ ಆಟೋ ತಂತ್ರಜ್ಞಾನದ ಮುಖಾಂತರ ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಸುಲಭವಾಗಿ ನಿಯಂತ್ರಿಸಬಹುದಾಗಿದೆ.

ಕಾರಿನ ಮಾಹಿತಿ ಮನರಂಜನಾ ಸಿಸ್ಟಂನಲ್ಲಿ ಇದನ್ನು ಸಂಪರ್ಕಿಸುವ ಮೂಲಕ ಬಳಕೆ ತುಂಬಾನೇ ಸುಲಭವಾಗಲಿದ್ದು, ಗ್ರಾಹಕರಿಗೆ ಸ್ಮಾರ್ಟ್ ಫೋನ್ ಬಳಕೆಯ ಕಿರಿಕಿರಿಯನ್ನು ತಪ್ಪಿಸಬಹುದಾಗಿದೆ.

ಸಾಮಾನ್ಯ ಮಾಹಿತಿ ಮನರಂಜನಾ ವ್ಯವಸ್ಥೆಯಲ್ಲಿ ಇದನ್ನು ನಿಯಂತ್ರಿಸಬಹುದಾಗಿದ್ದರಿಂದ ಚಾಲನೆ ಮಾಡುತ್ತಿರುವ ಚಾಲಕರಿಗೂ ಹೆಚ್ಚು ಸುರಕ್ಷಿತ ಬಳಕೆಗೆ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಧ್ವನಿ ಆದೇಶ (ವಾಯ್ಸ್ ಕಮಾಂಡ್) ಸೇವೆ ಕೂಡಾ ಆಳವಡಿಸಲಾಗುವುದು.

ಸುರಕ್ಷತೆಯ ಹಿನ್ನಲೆಯಲ್ಲಿ ಆಂಡ್ರಾಯ್ಡ್ ಆಟೋದಲ್ಲಿ ಚಾಲನೆಯ ವೇಳೆ ಹೆವಿ ಟೆಕ್ಸ್ಟ್ ಮತ್ತು ಮಲ್ಟಿಮೀಡಿಯಾ ಕನ್ಟೆಂಟ್‌ಗೆ ಕಡಿವಾಣ ಬೀಳಲಿದೆ. ಹಾಗೆಯೇ ಗ್ರಾಹಕರು ಬಯಸಿದಾಗ ಕಾರಿನ ಸ್ಟಾಂಡರ್ಡ್ ಮಾಹಿತಿ ಮನರಂಜನಾ ವ್ಯವಸ್ಥೆಗೆ ಮರಳಬಹುದಾಗಿದೆ.

ಆಂಡ್ರಾಯ್ಡ್ ಆಟೋ ಮೂಲಕ ಗ್ರಾಹಕರಿಗೆ ಗೂಲ್ ಸರ್ಚ್, ಗೂಗಲ್ ಮ್ಯಾಪ್, ಗೂಗಲ್ ಪ್ಲೇ ಮ್ಯೂಸಿಕ್ ಮತ್ತು ಇನ್ನಿತರ ಅಪ್ಲಿಕೇಷನ್‌ಗಳನ್ನು ಸುಲಭವಾಗಿ ಬಳಕೆ ಮಾಡಬಹುದು. ಇದಕ್ಕಾಗಿ ಸ್ಟೀರಿಂಗ್ ವೀಲ್ ಕಂಟ್ರೋಲ್ ಸೇವೆ ಸಹ ಒದಗಿಸಲಾಗುವುದು. ಈ ಸೇವೆ ನಿಕಟ ಭವಿಷ್ಯದಲ್ಲೇ ಭಾರತವನ್ನು ತಲುಪುವ ನಿರೀಕ್ಷೆಯಿದೆ. ಇದಕ್ಕಾಗಿ ಕಾದಿರಿ!

More from DriveSpark

Article Published On: Saturday, June 28, 2014, 14:52 [IST]
English summary
Audi, GM, Honda, Hyundai and Volvo have announced that they will be incorporating Android Auto into their future models. These carmakers are all members of the OAA (Open Automotive Alliance), a group founded recently to bring Android to cars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+