ಕೆಎಸ್‌ಆರ್‌ಟಿಸಿಯಲ್ಲಿ ನೊಂದಣಿ ಮಾಡದೇ ಆನ್‌ಲೈನ್ ಬುಕ್ಕಿಂಗ್ ಸೇವೆ

ಇನ್ನು ಮುಂದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಆಸ್‌ಆರ್‌ಟಿಸಿ) ವೆಬ್‌ಸೈಟ್‌ನಲ್ಲಿ ನೊಂದಣಿ ಮಾಡಿಕೊಳ್ಳದೇ ಪ್ರಯಾಣಿಕರು ಆನ್‌ಲೈನ್ ಬುಕ್ಕಿಂಗ್ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.

ಕರಾರಸಾನಿ ಸುದ್ದಿಗಳಿಗಾಗಿ ಭೇಟಿ ಕೊಡಿರಿ

ಮುಂಗಡ ಆಸನ ಕಾಯ್ದಿರಿಸುವ ಸೌಲಭ್ಯವನ್ನು ಹೆಚ್ಚಿನ ಸಂಖ್ಯೆ ಪ್ರಯಾಣಿಕರಿಗೆ ವಿಸ್ತರಿಸುವ ಸಲುವಾಗಿ ಕೆಎಸ್‌ಆರ್‌ಟಿಸಿ ಆತಿಥಿ ಬಳಕೆದಾರರರಿಗೆ (ನೊಂದಣಿ ಮಾಡಿಕೊಳ್ಳದಿರುವ ಬಳಕೆದಾರರು) ಆನ್‌ಲೈನ್ ಬುಕ್ಕಿಂಗ್ ಮಾಡುವ ಸೌಲಭ್ಯವನ್ನು ಪರಿಚಯಿಸಿದೆ.

ಬುಕ್ಕಿಂಗ್ ವಿಧಾನ ಇಂತಿದೆ:

ಬುಕ್ಕಿಂಗ್ ವಿಧಾನ ಇಂತಿದೆ:

  • ಆತಿಥಿ ಬಳಕೆದಾರರು ಲಾಗ್ ಇನ್ ಮಾಡಿಕೊಳ್ಳದೆ ಎರಡು ಸ್ಥಳಗಳ ನಡುವಣ ಸಾರಿಗೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ಸೌಲಭ್ಯ ಲಭ್ಯವಿರುತ್ತದೆ.
  • ಆತಿಥಿ ಬಳಕೆದಾರರು ತಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ದೂರವಾಣಿ ಸಂಖ್ಯೆಯನ್ನು ನೀಡಬೇಕಾಗುತ್ತದೆ. ಟಿಕೆಟ್ ಬುಕ್ ಮಾಡಿದ ನಂತರ ಇ-ಟಿಕೆಟ್ (ಇ-ಮೇಲ್) ಮತ್ತು ಎಂ-ಟಿಕೆಟನ್ನು (ಎಸ್‌ಎಂಎಸ್) ಅವರು ಟಿಕೆಟ್ ಕಾಯ್ದಿರಿಸುವಾಗ ನೀಡಿದ ಇ-ಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವುದು.
  • ಬುಕ್ಕಿಂಗ್ ವಿಧಾನ ಇಂತಿದೆ:

    ಬುಕ್ಕಿಂಗ್ ವಿಧಾನ ಇಂತಿದೆ:

    • ಈ ಎಸ್‌ಎಂಎಸ್ ಜೊತೆಗೆ ಸದರಿ ಬಳಕೆದಾರರು ಟಿಕೆಟುಗಳನ್ನು ಮುದ್ರಿಸಿಕೊಳ್ಳಲು ಮತ್ತು ರದ್ಧತಿಗೊಳಿಸಲು ಅವಶ್ಯವಿರುವ 'ವಹಿವಾಟು ಗುಪ್ತಪದ' (Transcation Password) ವನ್ನು ಕಳುಹಿಸಿಕೊಡಲಾಗುವುದು.
    • ಟಿಕೆಟ್ ಪ್ರಯಾಣ ದರವನ್ನು ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್/ನೆಟ್ ಬ್ಯಾಂಕಿಂಗ್ ಮೂಲಕ ಸ್ವೀಕರಿಸಲಾಗುವುದು.
    • ಟಿಕೇಟುಗಳನ್ನು ಮುದ್ರಿಸಲು/ರದ್ಧತಿಪಡಿಸಲು ಹಾಗೂ ಹತ್ತುವ ಸ್ಥಳಗಳನ್ನು ಮಾರ್ಪಡಿಸುವ ಬಗ್ಗೆ

      ಟಿಕೇಟುಗಳನ್ನು ಮುದ್ರಿಸಲು/ರದ್ಧತಿಪಡಿಸಲು ಹಾಗೂ ಹತ್ತುವ ಸ್ಥಳಗಳನ್ನು ಮಾರ್ಪಡಿಸುವ ಬಗ್ಗೆ

      • ಆತಿಥಿ ಬಳಕೆದಾರರ ಲಾನ್ ಇನ್ ಸೌಲಭ್ಯವನ್ನು http://www.ksrtc.in ವೆಬ್‌ಸೈಟ್‌ನ ಮೇಲ್ಭಾಗದಲ್ಲಿ ಬಲಭಾಗದಲ್ಲಿ ಒದಗಿಸಲಾಗಿದೆ.
      • ಇಲ್ಲಿ ಟೆಕೆಟ್ ಮುದ್ರಣ/ರದ್ಧತಿ/ಹತ್ತುವ ಸ್ಥಳಗಳನ್ನು ಮಾರ್ಪಡಿಸುವ ಆಯ್ಕೆಗಳನ್ನು ಒದಗಿಸಲಾಗಿದೆ.
      • ಕೆಎಸ್‌ಆರ್‌ಟಿಸಿಯಲ್ಲಿ ನೊಂದಣಿ ಮಾಡದೇ ಆನ್‌ಲೈನ್ ಬುಕ್ಕಿಂಗ್ ಸೇವೆ

        ಆತಿಥಿ ಬಳಕೆದಾರರು ಅಗತ್ಯವಿರುವ ಆಯ್ಕೆಯನ್ನು ಆಯ್ದುಕೊಂಡು ಕೆಳಕಂಡ ಮಾಹಿತಿಯನ್ನು ಒದಗಿಸಬೇಕು.

        • ಪಿಎನ್‌ಆರ್ ಸಂಖ್ಯೆ
        • ಇ-ಮೇಲ್ ಐಡಿ (ಬುಕ್ಕಿಂಗ್ ಮಾಡಿದ ವೇಳೆಯಲ್ಲಿ ನೀಡಿದ ಐಡಿ)
        • ಮೊಬೈಲ್ ಸಂಖ್ಯೆ (ಬುಕ್ಕಿಂಗ್ ಮಾಡಿದ ವೇಳೆಯಲ್ಲಿ ನೀಡಿದ ಸಂಖ್ಯೆ)
        • ಟಿಕೆಟ್ ಕಾಯ್ದಿರಿಸಿದ ಸಮಯದಲ್ಲಿ ಎಂ-ಟಿಕೆಟ್ (ಎಸ್‌ಎಂಎಸ್) ಮುಖಾಂತರ ಕಳುಹಿಸಿದ ವಹಿವಾಟು ಗುಪ್ತ ಪದ
        • ಕೆಎಸ್‌ಆರ್‌ಟಿಸಿಯಲ್ಲಿ ನೊಂದಣಿ ಮಾಡದೇ ಆನ್‌ಲೈನ್ ಬುಕ್ಕಿಂಗ್ ಸೇವೆ

          ಟಿಕೇಟುಗಳ ರದ್ಧತಿ/ಹತ್ತುವ ಸ್ಥಳಗಳ ಮಾರ್ಪಡಿಸುವಿಕೆಯನ್ನು ಸದರಿ ಸಾರಿಗೆಯ ಟ್ರಿಪ್‌ಶೀಟ್ ತೆಗೆಯುವ ತನಕ ಮಾತ್ರ ಲಭ್ಯವಿದ್ದು, ಮುಂಗಡ ಆಸನ ಕಾಯ್ದಿರಿಸುವ ಸೌಲಭ್ಯ ನಿಲುಗಡೆಯಾದ ನಂತರ ಇದಕ್ಕೆ ಅವಕಾಶವಿರುವುದಿಲ್ಲ.

          ಕೆಎಸ್‌ಆರ್‌ಟಿಸಿಯಲ್ಲಿ ನೊಂದಣಿ ಮಾಡದೇ ಆನ್‌ಲೈನ್ ಬುಕ್ಕಿಂಗ್ ಸೇವೆ

          ಆತಿಥಿ ಬಳಕೆದಾರರು ಟಿಕೇಟುಗಳನ್ನು ಕಾಯ್ದಿರಿಸುವ ಸಂಬಂಧ ವಿವರವಾದ ಮಾಹಿತಿಯನ್ನು ಕೆಎಸ್‌ಆರ್‌ಟಿಸಿ ವೆಬ್‌ಸೈಟ್‌ನಲ್ಲಿ ಒದಗಿಸಲಾಗಿದೆ. ಪ್ರಯಾಣಿಕರು ಸಯಾಕ್ಕಾಗಿ/ಮಾಹಿತಿಗಾಗಿ ಕರಾರಸಾನಿ ನಿಗಮದ ಕಾಲ್ ಸೆಂಟರ್ ಸಂಖ್ಯೆ 080-44554422 ಅಥವಾ ಅವತಾರ್ ಸಹಾಯವಾಣಿ ಸಂಖ್ಯೆ 7760990034/35 ಗೆ ಸಂಪರ್ಕಿಸಬಹುದಾಗಿದೆ.

          ಒನ್‌ಇಂಡಿಯಾ ಬಸ್ ಬುಕ್ಕಿಂಗ್ ಸೇವೆ

          ಒನ್‌ಇಂಡಿಯಾ ಬಸ್ ಬುಕ್ಕಿಂಗ್ ಸೇವೆ

          ನಿಮ್ಮ ನೆಚ್ಚಿನ ಒನ್‌ಇಂಡಿಯಾ ಬಸ್ ಬುಕ್ಕಿಂಗ್‌ಗಾಗಿ ಇಲ್ಲಿ ಕ್ಲಿಕ್ಕಿಸಿರಿ (http://bus.oneindia.in/)

Most Read Articles

Kannada
English summary
Now online booking is made easier on KSRTC website.visit www. ksrtc.in to experience the ease of booking even without logging in/registering.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X