ಪ್ರೊ ಕಬಡ್ಡಿ ಪಟು ಅನೂಪ್ ಕುಮಾರ್‌ಗೆ ಮಹೀಂದ್ರ ಥಾರ್ ಗಿಫ್ಟ್
ದೇಶದ ಅತಿ ದೊಡ್ಡ ಉಪಯುಕ್ತ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಇತ್ತೀಚೆಗಷ್ಟೇ ಮುಂದಿನ ಪೀಳಿಗೆಯ ಜನಪ್ರಿಯ ಸ್ಕಾರ್ಪಿಯೊ ಮಾದರಿಯನ್ನು ಬಿಡುಗಡೆಗೊಳಿಸಿತ್ತು.
ಪ್ರಸ್ತುತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವುದರಲ್ಲಿಯೂ ಒಂದು ಹೆಜ್ಜೆ ಮುಂದಿಟ್ಟಿರುವ ಮಹೀಂದ್ರ ಸಂಸ್ಥೆಯು, ಇತ್ತೀಚೆಗಷ್ಟೇ ಅಂತ್ಯಗೊಂಡಿರುವ ಪ್ರೊ ಕಬಡ್ಡಿ ಲೀಗ್‌ನಲ್ಲಿ ಅತಿ ಬೆಲೆಬಾಳುವ ಕ್ರೀಡಾಪಟು ಎಂದು ಗುರುತಿಸಿಕೊಂಡಿರುವ ಅನೂಪ್ ಕುಮಾರ್ ಅವರಿಗೆ ಮಹೀಂದ್ರ ಥಾರ್ ಆಫ್ ರೋಡರ್ ಕಾರು ನೀಡಿ ಸನ್ಮಾನಿಸಿದೆ.

ಪ್ರೊ ಕಬಡ್ಡಿ ಲೀಗ್ ಭಾರತದಲ್ಲಿ ಅತಿ ಹೆಚ್ಚು ಯಶಸ್ಸನ್ನು ಕಂಡಿತ್ತು. ಇದಕ್ಕೆ ದೇಶದೆಲ್ಲೆಡೆಯಿಂದ ಉತ್ತಮ ಬೆಂಬಲ ವ್ಯಕ್ತವಾಗಿತ್ತು.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಮಹೀಂದ್ರ ಆಂಡ್ ಮಹೀಂದ್ರ ಲಿಮಿಟೆಡ್ ಆಟೋಮೋಟಿವ್ ವಿಭಾಗ ಮತ್ತು ಅಂತರಾಷ್ಟ್ರೀಯ ಕಾರ್ಯಾಚರಣೆಯ (ಎಎಫ್‌ಎಸ್) ಮುಖ್ಯ ಕಾರ್ಯ ನಿರ್ವಾಹಕರಾಗಿರುವ ಪ್ರವೀಣ್ ಷಾ, "ಅನೂಪ್ ಅವರಿಗೆ ಮಹೀಂದ್ರ ಥಾರ್ ನೀಡಿ ಗೌರವಿಸಿರುವುದಕ್ಕೆ ಅತ್ಯಂತ ಸಂತೋಷಾಗುತ್ತಿದ್ದು, ಈ ಮೂಲಕ ಸಂಸ್ಥೆಯು ಕ್ರೀಡೆಯ ಜೊತೆಗೆ ಹೊಂದಿಕೊಂಡಿರುವುದರಲ್ಲಿ ಸಂತಸವಿದೆ" ಎಂದಿದ್ದಾರೆ.
ಸಾಹಸ ಚಾಲನೆಯನ್ನು ಇಷ್ಟಪಡುವವರಿಗಾಗಿ ಥಾರ್ ಅತ್ಯುತ್ತಮ ಆಯ್ಕೆಯಾಗಿದೆ. ಇದು ಟು ವೀಲ್ ಹಾಗೂ ಫೋರ್ ವೀಲ್ ಡ್ರೈವ್‌ನಲ್ಲಿ ಲಭ್ಯವಿರುತ್ತದೆ. ಈ ಆಫ್ ರೋಡ್ ಗಾಡಿ 4.82 ಲಕ್ಷ ರು.ಗಳಿಂದ 7.49 ಲಕ್ಷ ರು.ಗಳ ವರೆಗೆ (ದೆಹಲಿ ಎಕ್ಸ್ ಶೋ ರೂಂ) ದುಬಾರಿಯೆನಿಸಿದೆ.
ಅಂದ ಹಾಗೆ ಮಹೀಂದ್ರ ಥಾರ್ 2523 ಸಿಸಿ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಯಲ್ಪಡುತ್ತಿದ್ದು, 63 ಅಶ್ವಶಕ್ತಿ (182.5 ಎನ್‌ಎಂ ಟಾರ್ಕ್) ಉತ್ಪಾದಿಸುತ್ತದೆ. ಇದು 5 ಸ್ಪೀಡ್ ಗೇರ್ ಬಾಕ್ಸ್ ಕೂಡಾ ಇರಲಿದೆ. ಇದು ಪ್ರತಿ ಲೀಟರ್‌ಗೆ 13 ಕೀ.ಮೀ. ಮೈಲೇಜ್ ನೀಡಲಿದೆ.
ಆಟೋಮೊಬೈಲ್ ಆಕ್ಸೆಸರಿ - ಶೇ. 75ರಷ್ಟು ರಿಯಾಯಿತಿ - ಸೀಮಿತ ಆಫರ್ ತ್ವರೆ ಮಾಡಿ


Click it and Unblock the Notifications








