ಮಹೀಂದ್ರ ಥಾರ್ ಅಡ್ವೆಂಚರ್ ಎಡಿಷನ್ ಬಿಡುಗಡೆ
ಭಾರತದ ಅತಿ ದೊಡ್ಡ ಉಪಯುಕ್ತ ಹಾಗೂ ಎಸ್‌ಯುವಿ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು, ಇತ್ತೀಚೆಗಷ್ಟೇ ನೆಕ್ಸ್ಟ್ ಜನರೇಷನ್ ಸ್ಕಾರ್ಪಿಯೊ ಮಾದರಿಯನ್ನು ಪರಿಚಯಿಸಿತ್ತು.
ಅದೇ ರೀತಿ ಹಬ್ಬದ ವೇಳೆಯಲ್ಲಿ 'ಗಸ್ಟೊ' ಸ್ಕೂಟರ್ ಸಹ ಬಿಡುಗಡೆಗೊಳಿಸಿತ್ತು. ಇದೀಗ ದೇಶದ ಈ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯು ಆಫ್ ರೋಡ್ ವಾಹನ ಪ್ರೇಮಿಗಳಿಗಾಗಿ ಹೊಸತಾದ ಥಾರ್ ಅಡ್ವೆಂಚರ್ ಎಡಿಷನ್ ಪರಿಚಯಿಸಿದೆ.

ಸಾಮಾನ್ಯ ಮಾದರಿಗಿಂತಲೂ ಹೊಸ ಥಾರ್ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ವಿಶೇಷವೆಂದರೆ ಕೇವಲ ಸೀಮಿತ 30 ಮಾಡೆಲ್‌ಗಳಷ್ಟೇ ಇದು ಉತ್ಪನ್ನವಾಗಲಿದೆ.
ಒಳಮೈ ಹಾಗೂ ಹೊರಮೈ ಪರಿಷ್ಕರಣೆ ಪಡೆದಿರುವ ಹೊಸ ಥಾರ್ ಭಾರತದಲ್ಲಿ ಮಾತ್ರ ಮಾರಾಟಕ್ಕೆ ಲಭ್ಯವಾಗಲಿದೆ. ನಿಮ್ಮ ಮಾಹಿತಿಗಾಗಿ ಅಡ್ವೆಂಚರ್ ಎಡಿಷನ್ ಥಾರ್, ಎಲ್ಲ ಹೊಸತನದ ಕಂದು ಬಣ್ಣವನ್ನು ಪಡೆಯಲಿದೆ. ಹಾಗೆಯೇ ಅಡ್ವೆಂಚರ್ ದೇಹ ಶೈಲಿಯನ್ನು ಅನುಭವಿಸಬಹುದಾಗಿದೆ. ಇದನ್ನು ದಿಕ್ಸೂಚಿ ರೀತಿಯಲ್ಲಿ ಬಿಂಬಿಸಲಾಗಿದೆ.
ಹೊಸ ಹೆಡ್‌ಲ್ಯಾಂಪ್, ಟೈಲ್ ಲ್ಯಾಂಪ್ ಮತ್ತು ಇನ್ನಿತರ ವೈಶಿಷ್ಟ್ಯಗಳು ಆಫ್ ರೋಡ್ ಸ್ನೇಹಿಗಳನ್ನು ಇನ್ನಷ್ಟು ಆಕರ್ಷಿಸಲಿದೆ. ಅಂದ ಹಾಗೆ ಸಾಮಾನ್ಯ ಮಾದರಿಗಿಂತಲೂ 10,000 ರು.ಗಳಿಂದ 30,000 ರು.ಗಳ ವರೆಗೆ ದುಬಾರಿಯೆನಿಸಲಿದೆ.
ಇದು 2.5 ಲೀಟರ್ ಸಿಆರ್‌ಡಿಇ ಟರ್ಬೊ ಡೀಸೆಲ್ 4 ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 103 ಅಶ್ವಶಕ್ತಿ (247 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ ಫೋರ್ ವೀಲ್ ಡ್ರೈವ್‌ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದೆ.


Click it and Unblock the Notifications








