ಭೂತಾನ್ ಪ್ರವೇಶಿಸಿದ ಮಹೀಂದ್ರ ರೇವಾ ಇ2ಒ
ಹಿಮಾಲಯ ಪರ್ವತ ತಪ್ಪಲಿನ ರಾಷ್ಟ್ರ ಭೂತಾನ್ ಸರಕಾರದೊಂದಿಗೆ ಮೆಮೊರಾಂಡಮ್ ಆಫ್ ಅಂಡರ್‌ಸ್ಟ್ಯಾಂಡಿಂಗ್ (MoU) ಒಪ್ಪಂದಕ್ಕೆ ಸಹಿ ಮಾಡಿರುವ ಮಹೀಂದ್ರ ಸಂಸ್ಥೆಯು ನೂತನ ಇ2ಒ ವಿದ್ಯುತ್ ಚಾಲಿತ ವಾಹನವನ್ನು ಈ ನಿರ್ದಿಷ್ಟ ದೇಶಕ್ಕೆ ಪರಿಚಯಿಸಿದೆ.
ಕೆಲವು ದಿನಗಳ ಹಿಂದೆಯಷ್ಟೇ ಮಹೀಂದ್ರಗೆ ಸಮಾನವಾದ ಒಪ್ಪಂದಕ್ಕೆ ಸಹಿ ಮಾಡಿದ್ದ ನಿಸ್ಸಾನ್, ಲೀಫ್ ಎಲೆಕ್ಟ್ರಿಕ್ ವಾಹನವನ್ನು ಭೂತಾನ್ ರಾಜಧಾನಿ ಥಿಂಫುವಿಗೆ ಪರಿಚಯಿಸಿತ್ತು.

ಮಹೀಂದ್ರ ರೇವಾ ವಿದ್ಯುತ್ ಚಾಲಿತ ಅಧಿಕೃತ ಪ್ರವೇಶವನ್ನು ಭೂತಾನ್ ಪ್ರಧಾನ ಮಂತ್ರಿ ಬರಮಾಡಿಕೊಂಡರು. ಈ ಮೂಲಕ ಜಾಗತಿಕ ರಂಗದಲ್ಲೂ ಮಹೀಂದ್ರ ರೇವಾ ಇ2ಒ ಸದ್ದು ಮಾಡಲು ಆರಂಭಿಸಿದೆ.
ಮುಂದಿನ ದಿನಗಳಲ್ಲಿ ವೆರಿಟೊ, ಮ್ಯಾಕ್ಸಿಮೊ ಎಲೆಕ್ಟ್ರಿಕ್ ಕಾರು ಅಷ್ಟೇ ಯಾಕೆ ವಿದ್ಯುತ್ ಚಾಲಿತ ಬಸ್ಸುಗಳನ್ನು ಪರಿಚಯಿಸುವ ಯೋಜನೆಯನ್ನು ಮಹೀಂದ್ರ ಹೊಂದಿದೆ. ಈ ನಿಟ್ಟಿನಲ್ಲಿ ಭೂತಾನ್ ರಾಜಧಾನಿ ಥಿಂಫುನಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಆಳವಡಿಸಾಗುವುದು.


Click it and Unblock the Notifications








