ಮೋದಿ ನೆಚ್ಚಿನ ಕಾರು ಸ್ಕಾರ್ಪಿಯೊ ಬದಲಾದಿತೇ?

By Nagaraja

ಅಖಂಡ ಭಾರತದ ಮುಂದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮುಂಚೂಣಿಯ ಎಸ್‌ಯುವಿ ಕಾರು ಮಹೀಂದ್ರ ಸ್ಕಾರ್ಪಿಯೊಗೆ ಎಲ್ಲಿಲ್ಲದ ನಂಟು. ಇತರ ರಾಜಕಾರಣಿಗಳಿಗಿಂತ ಭಿನ್ನವಾಗಿರುವ ಮೋದಿ ಸ್ವದೇಶಿ ಕಾರುಗಳಲ್ಲೇ ಸಂಚರಿಸುವುದನ್ನು ಹೆಚ್ಚು ಇಷ್ಟಪಡುತ್ತಾರೆ.

ಮೋದಿ ಸರಳ ವ್ಯಕ್ತಿತ್ವ ಸಾರುತ್ತಿರುವ ಸ್ಕಾರ್ಪಿಯೊ ಪಯಣ

ಆದರೆ ಇದೀಗ ದೇಶದ ಅತ್ಯುನ್ನತ ಪ್ರಧಾನಿ ಹುದ್ದೆಗೆ ಆಯ್ಕೆಯಾಗಿರುವ ಮೋದಿ ನಿಲುವು ಬದಲಾದಿತೇ ಎಂಬುದು ಪ್ರಮುಖ ಚರ್ಚಾ ವಿಷಯ. ಯಾಕೆಂದರೆ ಸಾಮಾನ್ಯವಾಗಿ ದೇಶದ ಪ್ರಧಾನಿಯೊಬ್ಬರಿಗೆ ಗರಿಷ್ಠ ಭದ್ರತೆಯನ್ನು ಒದಗಿಸುವುದು ಸರಕಾರದ ಕರ್ತವ್ಯವಾಗಿರುತ್ತದೆ. ಅಲ್ಲದೆ ಉಗ್ರರಿಂದಲೂ ಭೀತಿ ಹೆಚ್ಚುತ್ತಿರುವುದರಿಂದ ಇದಕ್ಕೆ ಪೂರಕವಾದ ನಿಲುವು ಕಂಡುಬರುವ ಸಾಧ್ಯತೆಯಿದೆ.

ಮೋದಿ ನೆಚ್ಚಿನ ಕಾರು ಸ್ಕಾರ್ಪಿಯೊ ಬದಲಾದಿತೇ?

ನೀವು ಇತಿಹಾಸ ಪುಟಗಳನ್ನು ತೆರೆದು ನೋಡಿದರೆ ದೇಶದ ಹಿಂದಿನ ಪ್ರಧಾನಿಗಳು ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಗಳಾದ ಬಿಎಂಡಬ್ಲ್ಯು, ಆಡಿ ಹಾಗೂ ಮರ್ಸಿಡಿಸ್ ಬೆಂಝ್‌ನಂತಹ ದುಬಾರಿ ಕಾರುಗಳನ್ನು ಬಳಸಿಕೊಳ್ಳುತ್ತಿದ್ದರು.

ಮೋದಿ ನೆಚ್ಚಿನ ಕಾರು ಸ್ಕಾರ್ಪಿಯೊ ಬದಲಾದಿತೇ?

ಆದರೆ ಓರ್ವ ಚಾಯ್‌ವಾಲಾದಿಂದ ಪ್ರಧಾನಿ ಗದ್ದುಗೇರಿರುವ ನರೇಂದ್ರ ಮೋದಿ ಇದುವರೆಗೆ ಸ್ವದೇಶಿ ನಿಲುವನ್ನು ಅನುಸರಿಸಿಕೊಂಡು ಬಂದಿದ್ದಾರೆ. ತಮ್ಮ ನೆಚ್ಚಿನ ಸ್ಕಾರ್ಪಿಯೊವನ್ನೇ ಅಧಿಕೃತ ಕಾರನ್ನಾಗಿ ಬಳಸಿಕೊಳ್ಳುತ್ತಿದ್ದ ಮೋದಿ ವಿದೇಶಿ ಐಷಾರಾಮಿ ಕಾರುಗಳಿಗೆ ಗುಡ್ ಬೈ ಹೇಳಿದ್ದರು.

ಮೋದಿ ನೆಚ್ಚಿನ ಕಾರು ಸ್ಕಾರ್ಪಿಯೊ ಬದಲಾದಿತೇ?

ಈ ನಡುವೆ ಗಮನಾರ್ಹ ಹೇಳಿಕೆ ಕೊಟ್ಟಿರುವ ಮಹೀಂದ್ರ ಸಂಸ್ಥೆಯ ಮುಖ್ಯಸ್ಥ ಆನಂದ್ ಮಹೀಂದ್ರ ಹೇಳಿಕೆಯು ಹೆಚ್ಚು ಕುತೂಹಲ ಕೆರಳಿಸಿದೆ. "ಇದು ನಮ್ಮ ಹಾಗೂ ಇಡೀ ದೇಶದವರ ಪಾಲಿಗೆ ಅಭಿಮಾನದ ಪ್ರಶ್ನೆಯಾಗಿದ್ದು, ನೂತನ ಪ್ರಧಾನಿ ಭಾರತ ನಿರ್ಮಿತ ಸ್ಕಾರ್ಪಿಯೊ ವಾಹನವನ್ನು ಬಳಕೆ ಮಾಡಬೇಕಾಗಿದೆ" ಎಂದಿದ್ದಾರೆ.

ಮೋದಿ ನೆಚ್ಚಿನ ಕಾರು ಸ್ಕಾರ್ಪಿಯೊ ಬದಲಾದಿತೇ?

ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿಯೊಬ್ಬರಿಗೆ ಬೇಕಾಗಿರುವ ಸಕಲ ರೀತಿಯ ಭದ್ರತಾ ನವೀಕರಣಗಳನ್ನು ಸ್ಕಾರ್ಪಿಯೊಗೆ ಮಾಡಿಕೊಡಲಾಗುವುದು ಎಂಬ ಭರವಸೆಯನ್ನು ಆನಂದ್ ಮಹೀಂದ್ರ ನೀಡಿದ್ದಾರೆ.

ಮೋದಿ ನೆಚ್ಚಿನ ಕಾರು ಸ್ಕಾರ್ಪಿಯೊ ಬದಲಾದಿತೇ?

ಇನ್ನು ಇತಿಹಾಸವನ್ನು ಗಮನಿಸಿದರೆ ದೇಶದ ಪ್ರಧಾನಿಗಳ ಪಾಲಿಗೆ ಅಂಬಾಸಿಡರ್ ಅಧಿಕೃತ ಕಾರೆನಿಸಿಕೊಂಡಿತ್ತು. ಆದರೆ 2003ನೇ ಇಸವಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಮೊದಲ ಬಾರಿಗೆ ಬಿಎಂಡಬ್ಲ್ಯು ಕಾರನ್ನು ಬಳಕೆ ಮಾಡಿದ್ದರು. ಉಗ್ರ ಸಂಘಟನೆಗಳಿಂದ ಬೆದರಿಕಾ ಪ್ರಕರಣಗಳು ಹೆಚ್ಚಿದ್ದರಿಂದ ಕೋಟಿ ಕೋಟಿ ರುಪಾಯಿಗಳನ್ನು ತೆತ್ತು ಗರಿಷ್ಠ ತಂತ್ರಜ್ಞಾನಗಳಗೊಂಡ ಜರ್ಮನಿಯ ಆರ್ಮರ್ಡ್ ವಾಹನಗಳನ್ನು ಆಮದು ಮಾಡುವುದು ಅನಿವಾರ್ಯವೆನಿಸಿತ್ತು.

ಮೋದಿ ನೆಚ್ಚಿನ ಕಾರು ಸ್ಕಾರ್ಪಿಯೊ ಬದಲಾದಿತೇ?

ಇಂತಹ ಆರ್ಮರ್ಡ್ ಬುಲೆಟ್ ಫ್ರೂಫ್ ವಾಹನಗಳು ಗುಂಡಿನ ದಾಳಿ, ಬಾಂಬ್ ದಾಳಿ ಹಾಗೂ ರಾಸಾಯನಿಕ ದಾಳಿಯಿಂದ ಹಿಡಿದು ಬೃಹತ್ ಸ್ಫೋಟಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿರುತ್ತದೆ. ಈ ಎಲ್ಲ ವೈಶಿಷ್ಟ್ಯಗಳನ್ನು ಒದಗಿಸಲು ನಮ್ಮಿಂದಲೂ ಸಾಧ್ಯ ಎಂದು ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯ ಆಟೋಮೋಟಿವ್ ವಿಭಾಗದ ಅಧ್ಯಕ್ಷರಾಗಿರುವ ಪವನ್ ಗೋನ್ಖಾ ತೊಡೆ ತಟ್ಟಿ ಹೇಳಿಕೆ ಕೊಟ್ಟಿರುವುದು ಇನ್ನಷ್ಟು ಕುತೂಹಲ ಕೆರಳಿಸಿದೆ.

ಮೋದಿ ನೆಚ್ಚಿನ ಕಾರು ಸ್ಕಾರ್ಪಿಯೊ ಬದಲಾದಿತೇ?

ಒಟ್ಟಿನಲ್ಲಿ ದೇಶದ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ, ತಮ್ಮ ಸ್ವದೇಶಿ ನಿಲುವಿನಂತೆ ಮಹೀಂದ್ರ ಸ್ಕಾರ್ಪಿಯೊವನ್ನು ಅಪ್‌ಗ್ರೇಡ್ ಮಾಡಲಿದ್ದಾರೆಯೇ ಅಥವಾ ಜರ್ಮನಿಯ ಐಷಾರಾಮಿ ಕಾರುಗಳತ್ತ ಆಕರ್ಷಿತರಾಗಲಿದ್ದಾರೆಯೇ ಎಂಬುದಕ್ಕೆ ಮುಂದಿನ ಕೆಲವೇ ದಿನಗಳಲ್ಲಿ ಉತ್ತರ ಲಭ್ಯವಾಗಲಿದೆ.

More from DriveSpark

Article Published On: Friday, May 23, 2014, 6:00 [IST]
English summary
You might already be aware that Narendra Modi has shared a very strong relationship with the trusty Mahindra Scorpio throughout his days as Gujarat Chief Minister.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+