3 ಕಾಂಪಾಕ್ಟ್ ಎಸ್‌ಯುವಿ ಅಭಿವೃದ್ಧಿಪಡಿಸಲಿರುವ ಮಹೀಂದ್ರ

By Nagaraja

ದೇಶದ ಕ್ರೀಡಾ ಬಳಕೆ ವಾಹನದ (ಎಸ್‌ಯುವಿ) ದೈತ್ಯ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಮುಂಬರುವ ವರ್ಷಗಳಲ್ಲಿ ಮೂರು ಕಾಂಪಾಕ್ಟ್ ಎಸ್‌ಯುವಿಗಳನ್ನು ಅಭಿವೃದ್ಧಿಪಡಿಸಲಿದೆ.

ಈ ಮೂಲಕ ದೇಶದ ಅತಿ ದೊಡ್ಡ ಉಪಯುಕ್ತ ವಾಹನ ತಯಾರಕ ಸಂಸ್ಥೆಯಾಗಿರುವ ಮಹೀಂದ್ರ, ದೇಶೀಯ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಇನ್ನಷ್ಟು ಭದ್ರಪಡಿಸುವ ಯೋಜನೆ ಹೊಂದಿದೆ.

mahindra quanto

ಸದ್ಯ ಎಸ್‌ಯುವಿ ವಿಭಾಗದಲ್ಲಿ ವಾಹನಗಳನ್ನು ಹೊಂದಿರುವ ಮಹೀಂದ್ರ, ಇದಕ್ಕಿಂತಲೂ ಸಣ್ಣ ವಿಭಾಗದಲ್ಲಿ ಕೊರತೆಯನ್ನು ಅನುಭವಿಸುತ್ತಿದೆ. ಇದು ಕಾಂಪಾಕ್ಟ್ ಸೆಗ್ಮೆಂಟ್ ವಿಭಾಗದಲ್ಲಿ ರೆನೊ ಡಸ್ಟರ್ ಮತ್ತು ಫೋರ್ಡ್ ಇಕೊಸ್ಪೋರ್ಟ್ ಅಧಿಪತ್ಯಕ್ಕೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಮಹೀಂದ್ರ ತನ್ನ ಯೋಜನೆಯನ್ನು ಪುನರ್ ವಿಮರ್ಶಿಸಲಿದೆ.

ಕ್ವಾಂಟೊ ಹಾಗೂ ಬೊಲೆರೊ ಸಾಲಿನಲ್ಲಿ ಹೆಚ್ಚು ಆಧುನಿಕ ಮಾದರಿಗಳನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಅಲ್ಲದೆ ಸಾಂಪ್ರಾದಾಯ ಮಾದರಿಗಳ ಹೊರತಾಗಿ ಎಲ್ಲ ಹೊಸತನದಿಂದ ಕೂಡಿರುವ ಕಾರುಗಳನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಹೊಸ ಕಾಂಪಾಕ್ಟ್ ಎಸ್‌ಯುವಿ ಬಿಡುಗಡೆ ಮಾಡುವುದು ಮಹೀಂದ್ರ ಗುರಿಯಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಈ ಮಾದರಿಗಳು ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ.

ಇನ್ನು ವಿಶೇಷವಾದ ಸಂಗತಿಯೆಂದರೆ ಮಹೀಂದ್ರ ಕಾಂಪಾಕ್ಟ್ ಎಸ್‌ಯುವಿ ಎಸ್-101 ಕೋಡ್ ಹೆಸರು ಪಡೆದುಕೊಂಡಿದ್ದು, ಇದು ಫೋರ್ಡ್, ರೆನೊ ಹಾಗೂ ನಿಸ್ಸಾನ್ ಸವಾಲನ್ನು ಎದುರಿಸಲಿದೆ.

Article Published On: Saturday, September 13, 2014, 10:21 [IST]
English summary
Mahindra is the largest manufacturer and seller of utility vehicles in India. They have a wide range of products on offer for its domestic market. They currently sell SUVs and do not offer vehicles in their smaller segments.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+