ಒಂದು ಲಕ್ಷ ಮೈಲುಗಲ್ಲು ತಲುಪಿದ ಮಹೀಂದ್ರ ಎಕ್ಸ್‌ಯುವಿ 500
ಭಾರತದ ಎಸ್‌ಯುವಿ ದೈತ್ಯ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು, ಒಂದು ಲಕ್ಷ ಕ್ರೀಡಾ ಬಳಕೆಯ ವಾಹನಗಳನ್ನು (ಎಸ್‌ಯುವಿ) ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ದೇಶಿಯ ಮಾರುಕಟ್ಟೆಗೆ ಪ್ರವೇಶಿಸಿದ 33 ತಿಂಗಳಲ್ಲಿ ಮಹೀಂದ್ರ ಈ ಸಾಧನೆ ಮಾಡಿದೆ.
ಈ ಬಗ್ಗೆ ಹ್ಮೆಮ್ಮೆ ವ್ಯಕ್ತಪಡಿಸಿರುವ ಮಹೀಂದ್ರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಪ್ರವೀಣ್ ಶಾ, 10ರಿಂದ 20 ಲಕ್ಷ ರು.ಗಳ ಎಸ್‌ಯುವಿ ವಿಭಾಗದಲ್ಲಿ ಮಹೀಂದ್ರ ಎಕ್ಸ್‌ಯುವಿ 500 ಕ್ಷಿಪ್ರ ಗತಿಯ ಬೆಳವಣಿಗೆ ಸಾಧಿಸಿದೆ ಎಂದಿದ್ದಾರೆ.

10.80 ಲಕ್ಷ ರು.ಗಳ ಪ್ರಾರಂಭಿಕ ದರಗಳಲ್ಲಿ ಮಹೀಂದ್ರ ಎಸ್‌ಯುವಿ 500 ಬಿಡುಗಡೆಗೊಳಿಸಿದ್ದ ಸಂಸ್ಥೆಯು 2013 ಜನವರಿ ತಿಂಗಳಲ್ಲಿ 50,000 ಯುನಿಟ್‌ಗಳ ಮಾರಾಟ ಸಾಧಿಸಿತ್ತು. ಅಲ್ಲದೆ ಇತ್ತೀಚೆಗಷ್ಟೇ ನಾಲ್ಕು ವೆರಿಯಂಟ್ ಬಿಡುಗಡೆಗೊಳಿಸಿತ್ತು.
2014 ಜೂನ್ 30ಕ್ಕೆ ಅಂತ್ಯಗೊಂಡು ಮೊದಲ ತ್ರೈಮಾಸಿಕ ಅವಧಿಯಲ್ಲಿ ಮಹೀಂದ್ರ ಸಂಸ್ಥೆಯು 3,000 ಎಕ್ಸ್‌ಯುವಿ 500 ಯುನಿಟ್‌ಗಳನ್ನು ಮಾರಾಟ ಮಾಡಿವೆ. ಅಲ್ಲದೆ ದೇಶಿಯ ಹೈ ಎಂಡ್ ಎಸ್‌ಯುವಿ ವಿಭಾಗದಲ್ಲಿ ಶೇಕಡಾ 51ರಷ್ಟು ಅಂತೆಯೇ ಎಸ್‌ಯುವಿ ವಿಭಾಗದಲ್ಲಿ ಶೇಕಡಾ 40ರಷ್ಟು ಮಾರುಕಟ್ಟೆ ಶೇರನ್ನು ಹೊಂದಿರುವುದಾಗಿ ಸಂಸ್ಥೆ ತಿಳಿಸಿದೆ.
ಬಿಡುಗಡೆಯಾದ ಬಳಿಕ 'ವರ್ಷದ ಎಸ್‌ಯುವಿ', 'ರೀಡರ್ಸ್ ಚಾಯ್ಸ್' ಮತ್ತು 'ಬೆಸ್ಟ್ ವ್ಯಾಲ್ಯೂ ಫಾರ್ ಮನಿ ಕಾರ್' ಸೇರಿದಂತೆ 25 ವಿಭಿನ್ನ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಮಹೀಂದ್ರ ಎಸ್‌ಯುವಿ 500, ಕಾಂಪಾಕ್ಟ್ ಎಸ್‌ಯುವಿ ಕಾರುಗಳ ಪ್ರಭಾವದ ನಡುವೆಯೂ ತನ್ನ ಮೌಲ್ಯವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.


Click it and Unblock the Notifications








