ನಿಮಗೆ ಮಹೀಂದ್ರ ಎಕ್ಸ್‌ಯುವಿ500 ಬಣ್ಣ ಇಷ್ಟವಲ್ಲವೇ?
ನಿಮಗೆ ಮಹೀಂದ್ರ ಎಕ್ಸ್‌ಯುವಿ500 ಬಣ್ಣ ಇಷ್ಟವಲ್ಲವೇ? ಚಿಂತೆ ಬೇಡ, ದೇಶದ ಎಸ್‌ಯುವಿ ದೈತ್ಯ ಸಂಸ್ಥೆಯಾಗಿರುವ ತನ್ನ ಈ ಜನಪ್ರಿಯ ಆವೃತ್ತಿಯು ನೂತನ ಬಣ್ಣಗಳಲ್ಲಿ ಆಗಮನವಾಗಲಿದೆ.
11 ಲಕ್ಷ ರು.ಗಳ ಅಸುಪಾಸಿನ ಆನ್ ರೋಡ್ ದರಗಳಲ್ಲಿ ಲಭ್ಯವಿರುವ ಮಹೀಂದ್ರ ಎಕ್ಸ್‌ಯುವಿ500 ಆವೃತ್ತಿಗೆ ವೆರಿಯಂಟ್ ಆಧಾರದಲ್ಲಿ ನಾಲ್ಕು ಹೊಸ ಬಣ್ಣಗಳು ಸೇರ್ಪಡೆಯಾಗಿದೆ. ಅವುಗಳೆಂದರೆ,

- ಬೇಸ್ ಡಬ್ಲ್ಯು 4 ವೆರಿಯಂಟ್ ಡಾಲ್ಫಿನ್ ಗ್ರೇ ಬಣ್ಣದಲ್ಲಿ ಲಭ್ಯ,
- ಮಿಡ್ ವೆರಿಯಂಟ್ ಡಬ್ಲ್ಯು6 ಸ್ಯಾಟೈನ್ ವೈಟ್ ಮತ್ತು ಡಾಲ್ಫಿನ್ ಗ್ರೇ ಬಣ್ಣಗಳಲ್ಲಿ ಲಭ್ಯ,
- ಇನ್ನು ಟಾಪ್ ಎಂಡ್ ಡಬ್ಲ್ಯು6 ವೆರಿಯಂಟ್ ಆರ್ಟಿಕ್ ಬ್ಲ್ಯೂ ಮತ್ತು ಒಪ್ಯುಲೆಂಟ್ ಪರ್ಪಲ್ ಬಣ್ಣಗಳಲ್ಲಿ ಲಭ್ಯ.
ಅಂದ ಹಾಗೇ ಮಹೀಂದ್ರ ಎಕ್ಸ್‌ಯುವಿ500, 2.2 ಲೀಟರ್ 16 ವಿ ಎಂಹಾಕ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 140 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಸಿಕ್ಸ್ ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆದುಕೊಂಡಿದೆ.
ಇನ್ನು ವರದಿಗಳ ಪ್ರಕಾರ, ಮುಂದಿನ ವರ್ಷ ಮಹೀಂದ್ರ ಎಕ್ಸ್‌ಯುವಿ500 ಆಟೋಮ್ಯಾಟಿಕ್ ವರ್ಷನ್ ಆಗಮನವಾಗುವ ಸಾಧ್ಯತೆಯಿದೆ. ಇದು ಸ್ಯಾಂಗ್ಯೊಂಗ್ ಎಸ್‌ಯುವಿ ಜತೆ ಹಂಚಿಕೊಳ್ಳಲಿದೆ. ಇದು ಮಹೀಂದ್ರವನ್ನು ಇನ್ನಷ್ಟು ಶಕ್ತಿಶಾಲಿ ಮಾಡಲಿದೆ. ಸದ್ಯ ಲಭ್ಯವಿರುವ ಟಾಪ್ ಎಂಡ್ ವೆರಿಯಂಟ್ ದರ 14.55 ಲಕ್ಷ ರು.ಗಳಿಷ್ಟಿದೆ.


Click it and Unblock the Notifications








