10,000 ಬುಕ್ಕಿಂಗ್ ಸಂಖ್ಯೆ ದಾಟಿದ ಮಾರುತಿ ಸಿಯಾಝ್
ಕಳೆದ ದಿನವಷ್ಟೇ ಜಾಗತಿಕ ಎಂಟ್ರಿ ಪಡೆದಿರುವ ಹೊಚ್ಚ ಹೊಸತಾದ ಮಾರುತಿ ಸಿಯಾಝ್ ಸೆಡಾನ್ ಕಾರು, ಬಿಡುಗಡೆ ವೇಳೆಯಲ್ಲೇ 10,000ಕ್ಕೂ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಂಡಿದೆ.
ನಿಮ್ಮ ಮಾಹಿತಿಗಾಗಿ 2014 ಸೆಪ್ಟೆಂಬರ್ 3ರಿಂದ ಮಾರುತಿ ವಿತರಕರು ಸಿಯಾಝ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿತ್ತು. ಅಂತೆಯೇ ಪ್ರತಿ ತಿಂಗಳಲ್ಲಿ ಸರಾಸರಿ 5,000ರಿಂದ 6,666 ಯುನಿಟ್‌ಗಳ ಮಾರಾಟ ನಿರೀಕ್ಷೆ ಮಾಡಿರುವ ಮಾರುತಿ ಪ್ರಸಕ್ತ ಸಾಲಿನಲ್ಲೇ 60ರಿಂದ 80,000ಗಳಷ್ಟು ಯುನಿಟ್‌ಗಳ ಮಾರಾಟ ಗುರಿಯಿರಿಸಿಕೊಂಡಿದೆ.

ಅಂದ ಹಾಗೆ ಸಿಯಾಝ್ ಹರಿಯಾಣದ ಮನೇಸರ್ ಘಟಕದಲ್ಲಿ ನಿರ್ಮಾಣವಾಗಲಿದೆ. ಇದು ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ. ಅಂತೆ ಪೆಟ್ರೋಲ್ ಮ್ಯಾನುವಲ್ ಜೊತೆಗೆ ಆಟೋಮ್ಯಾಟಿಕ್ ವೆರಿಯಂಟ್ ಲಭ್ಯವಿರಲಿದೆ.
ಹೋಂಡಾ ಸಿಟಿ ಪ್ರತಿಸ್ಪರ್ಧಿಯಾಗಿರುವ ಸಿಯಾಝ್‌ನಲ್ಲಿ ಎರ್ಟಿಗಾ ಎಂಪಿವಿಗೆ ಸಮಾನವಾದ 1.4 ಲೀಟರ್ ಕೆ ಸಿರೀಸ್ ಪೆಟ್ರೋಲ್ (92 ಅಶ್ವಶಕ್ತಿ) ಮತ್ತು 1.3 ಲೀಟರ್ ಫಿಯೆಟ್ ಮಲ್ಟಿಜೆಟ್ ಎಂಜಿನ್ (90 ಅಶ್ವಶಕ್ತಿ) ಆಳವಡಿಸಲಾಗಿದೆ.


Click it and Unblock the Notifications