ಡಿಜೈರ್ ಬಳಿಕ ಸ್ವಿಫ್ಟ್, ಎರ್ಟಿಗಾ ವಾಪಾಸ್ ವಾಪಸ್
ದೇಶದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಮಾರುತಿ ಡಿಜೈರ್ ಬೆನ್ನಲ್ಲೇ ನಿರ್ದಿಷ್ಟ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಹಾಗೂ ಎರ್ಟಿಗಾ ಎಂಪಿವಿ ಆವೃತ್ತಿಗಳನ್ನು ವಾಪಾಸ್ ಕರೆಯಿಸಿಕೊಳ್ಳುತ್ತಿದೆ.
ಇಂಧನ ಟ್ಯಾಂಕ್ ಮೇಲ್ಗಡೆಯಾಗಿ ಲಗತ್ತಿಸಲಾಗಿರುವ ಫ್ಯೂಯಲ್ ಕ್ಯಾಪ್‌ನಲ್ಲಿ ತೊಂದರೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಡಿಜೈರ್ ಆವೃತ್ತಿಗಳನ್ನು ಹಿಂಪಡೆಯಲಾಗಿತ್ತು. ಇದೀಗ ಅದೇ ಸಮಸ್ಯೆ ಸ್ವಿಫ್ಟ್ ಹಾಗೂ ಎರ್ಟಿಗಾದಲ್ಲೂ ಕಾಣಿಸಿಕೊಂಡಿದೆ.

42,481 ಡಿಜೈರ್, 47237 ಸ್ವಿಫ್ಟ್ ಹಾಗೂ 13,593 ಯುನಿಟ್ ಎರ್ಟಿಗಾ ಆವೃತ್ತಿಯಲ್ಲೂ ಇದೇ ಸಮಸ್ಯೆ ಕಾಣಿಸಿಕೊಂಡಿದೆ. ಈ ಮೂಲಕ ಒಟ್ಟು 1,03,311 ಯುನಿಟ್ ರಿಕಾಲ್ ಮಾಡಲು ಸಂಸ್ಥೆ ನಿರ್ಧರಿಸಿದೆ.
2013 ನವೆಂಬರ್ 12ರಿಂದ 2014 ಫೆಬ್ರವರಿ 4ರ ವರೆಗಿನ ಅವಧಿಯಲ್ಲಿ ನಿರ್ಮಾಣವಾದ ವಾಹನಗಳನ್ನು ಹಿಂಪಡೆಯಲಾಗುತ್ತದೆ. ಹಾಗೊಂದು ವೇಳೆ ಮೇಲೆ ಸೂಚಿಸಲಾದ ದಿನಾಂಕದಲ್ಲಿ ನಿಮ್ಮ ಕಾರು ಸೇರಿಕೊಂಡಿದ್ದಲ್ಲಿ ಈ ಕೂಡಲೇ ಮಾರುತಿ ಡೀಲರುಗಳನ್ನು ಸಮೀಪಿಸಿ.
ಇಂದಿನ ಫೇಸ್‌ಬುಕ್ ವೀಡಿಯೋ


Click it and Unblock the Notifications








