ಮಾರುತಿ ಮಾರ್ಕೆಟಿಂಗ್ ಮುಖ್ಯಸ್ಥ ಪರೀಕ್ ರಾಜೀನಾಮೆ

Written By:

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಮಾರ್ಕೆಟಿಂಗ್ ಮುಖ್ಯಸ್ಥರಾಗಿರುವ ಮಯಾಂಕ್ ಪರೀಕ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇದರೊಂದಿಗೆ ಮಾರುತಿ ಸಂಸ್ಥೆಯು ತನ್ನ ಮೇರು ವ್ಯಕ್ತಿಗಳಲ್ಲಿ ಒಬ್ಬರನ್ನು ಕಳೆದುಕೊಂಡಂತಾಗಿದೆ. ಕಳೆದ ಎರಡು ದಶಕಗಳಷ್ಟು ಕಾಲ ಮಾರುತಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿರುವ ಮಯಾಂಕ್ ಸಂಸ್ಥೆಳ ಏಳಿಗೆ ಬಹು ಮುಖ್ಯ ಪಾತ್ರ ವಹಿಸಿದ್ದರು.

Mayank Pareek

ಕಳೆದ ಐದು ವರ್ಷಗಳಲ್ಲಿ ಮಾರುತಿ ಮಾರಾಟ ವೃದ್ಧಿಯಲ್ಲಿ ಮಯಾಂಕ್ ಮಾರಾಟ ತಂತ್ರಗಾರಿಕೆ ಪ್ರಮುಖವಾಗಿತ್ತು. ಹಾಗಿದ್ದರೂ ಮಯಾಂಕ್ ರಾಜೀನಾಮೆ ಹಿಂದಿರುವ ಕಾರಣಗಳು ಇನ್ನು ಅಸ್ಪಷ್ಟವಾಗಿದೆ.

ವರದಿಯೊಂದರ ಪ್ರಕಾರ ಮಾರುತಿಗೆ ಗುಡ್ ಬೈ ಹೇಳಲಿರುವ ಪರೀಕ್, ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಸೇರಿಕೊಳ್ಳಲಿದ್ದಾರೆ.

ಮಾರುತಿ ಜನಪ್ರಿಯ ಆವೃತ್ತಿಗಳಾಗದ ಸ್ವಿಫ್ಟ್, ಡಿಜೈರ್ ಹಾಗೆಯೇ ಎಸ್ಟಿಲೊ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಪರೀಕ್, ಗ್ರಾಮೀಣ ಪ್ರದೇಶದಲ್ಲೂ ಮಾರಾಟ ವೃದ್ಧಿಗೆ ಗಮನ ಕೇಂದ್ರಿಕರಿಸಿದ್ದರು.

Read in English: Maruti Lose Marketing Head
English summary
India's largest car manufacturer, Maruti, has just lost a very valuable asset, their Marketing Chief, Mayank Pareek.
Story first published: Wednesday, September 17, 2014, 12:21 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark