ಎಲ್ಲೆಡೆ ಸೆಲೆರಿಯೊ ಅಬ್ಬರ; ಬುಕ್ಕಿಂಗ್ ಬಲು ಜೋರು
ಇತ್ತೀಚೆಗಷ್ಟೇ ಲಾಂಚ್ ಆಗಿರುವ ಮಾರುತಿ ಸುಜುಕಿ ಸೆಲೆರಿಯೊ ಹ್ಯಾಚ್‌ಬ್ಯಾಕ್ ಕಾರಿಗೆ ಎಲ್ಲೆಡೆಗಳಿಂದಲೂ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಈ ಮೂಲಕ ಮಾರುತಿ ಸೆಲೆರಿಯೊ ಅಬ್ಬರ ಬಲು ಜೋರಾಗುತ್ತಿದೆ.
ವರದಿಯೊಂದರ ಪ್ರಕಾರ ಮಾರುತಿ ಸೆಲೆರಿಯೊ ಪ್ರತಿ ದಿನ ಸರಾಸರಿ 1,000ದಷ್ಟು ಬುಕ್ಕಿಂಗ್ ಗಿಟ್ಟಿಸಿಕೊಳ್ಳುತ್ತಿದೆ. 2014 ಆಟೋ ಎಕ್ಸ್ ಪೋದಲ್ಲಿ ಲಾಂಚ್ ಆಗಿದ್ದ ಸೆಲೆರಿಯೊದಲ್ಲಿರುವ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪ್ರಮುಖ ವೈಶಿಷ್ಟ್ಯವಾಗಿದೆ.

ಗರಿಷ್ಠ ಇಂಧನ ಕ್ಷಮತೆಯು ಸೆಲೆರಿಯೊವನ್ನು ಭಾರತದಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿರೀಕ್ಷೆಯಿದೆ. ಕಂಪನಿಯ ಪ್ರಕಾರ ಸೆಗ್ಮೆಂಟ್ ಬೆಸ್ಟ್ ಕಾರೆನಿಸಿಕೊಂಡಿರುವ ಮಾರುತಿ ಸೆಲೆರಿಯೊ ಪ್ರತಿ ಲೀಟರ್‌ಗೆ 23.1 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.
ಅಂದ ಹಾಗೆ ಮಾರುತಿ ಸೆಲೆರಿಯೊ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ತಕಾರಿನ ದೆಹಲಿ ಎಕ್ಸ್ ಶೋ ರೂಂ ದರ 4.29 ಲಕ್ಷ ರು.ಗಳಾಗಿವೆ. ಇದು ಮ್ಯಾನುವಲ್ ಆವೃತ್ತಿಗಿಂತಲೂ 40,000 ರು.ಗಳಷ್ಟು ದುಬಾರಿಯೆನಿಸಲಿದೆ.
ಇನ್ನು ಆಟೋ ವಿಶ್ಲೇಷಕರ ಪ್ರಕಾರ ನೂತನ ಸೆಲೆರಿಯೊ, ಪ್ರತಿ ತಿಂಗಳು 25,000ಗಿಂತಲೂ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ. ಇದು ಖಂಡಿತವಾಗಿಯೂ ಮಾರುತಿ ಮಾರಾಟಕ್ಕೆ ಉತ್ತೇಜನ ನೀಡಲಿದೆ. ಈ ನಡುವೆ ಸಣ್ಣ ಕಾರಿನ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸುವುದು ಸಹ ಸೆಲೆರಿಯೊಗೆ ನೆರವಾಗಲಿದ್ದು, ಇನ್ನಷ್ಟು ಬುಕ್ಕಿಂಗ್‌ಗೆ ಪ್ರೋತ್ಸಾಹ ತುಂಬಲಿದೆ.


Click it and Unblock the Notifications








