ಕೂಲ್ ಕ್ಯಾಟ್ಸ್ ಇನ್ ಟೌನ್; ಸಿಯಾಝ್ ಬಿಡುಗಡೆಗೆ ಕ್ಷಣಗಣನೆ
'ಕೂಲ್ ಕ್ಯಾಟ್ಸ್ ಇನ್ ಟೌನ್' ವೀಡಿಯೋ ಮೂಲಕ ವಾಹನ ಪ್ರೇಮಿಗಳ ಹೃದಯ ಗೆದ್ದಿರುವ ಮಾರುತಿ ಸುಜುಕಿ, ಸದ್ಯದಲ್ಲೇ ಅತ್ಯಾಕರ್ಷಕ ಸಿಯಾಝ್ ಸೆಡಾನ್ ಕಾರನ್ನು ಬಿಡುಗಡೆ ಮಾಡಲಿದೆ.
ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದ ಸಿಯಾಝ್ ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ ಹಲವು ಬಾರಿ ಟೆಸ್ಟಿಂಗ್ ವೇಳೆ ಕ್ಯಾಮೆರಾ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕಿದ್ದವು.

ಇದಕ್ಕೂ ಮೊದಲು 'ಕೂಲ್ ಕ್ಯಾಟ್ಸ್ ಇನ್ ಟೌನ್' ವೀಡಿಯೋ ಬಿಡುಗಡೆಗೊಳಿಸಿದ್ದ ಸಂಸ್ಥೆಯು ಸಿಯಾಝ್‌ಗೆ ಅದ್ದೂರಿ ಪ್ರಚಾರ ಹಮ್ಮಿಕೊಳ್ಳುವಲ್ಲಿ ಯಶ ಕಂಡಿತ್ತು. ಅಲ್ಲದೆ ಸಿಯಾಝ್‌ಗಾಗಿ ಪ್ರತ್ಯೇಕ ಮೈಕ್ರೋ ಸೈಟ್ ಕೂಡ ರೂಪಿಸಿತ್ತು.
ಅಂದ ಹಾಗೆ ನೀವು ಕೂಡಾ ಸಿಯಾಝ್ ಕೂಲ್ ಕ್ಯಾಟ್ಸ್ ಇನ್ ಟೌನ್ ರಿಂಗ್ ಟೋನ್ ಡೌನ್‌ಲೋಡ್ ಮಾಡಲು ಬಯಸುವುದಾದ್ದಲ್ಲಿ ಇಲ್ಲಿ ಭೇಟಿ ಕೊಡಿರಿ.

ಒಟ್ಟಿನಲ್ಲಿ ಎಸ್‌ಎಕ್ಸ್4 ಸ್ಥಾನ ತುಂಬಿಕೊಳ್ಳಲಿರುವ ಸಿಯಾಝ್, ಭಾರತದಲ್ಲಿ ಜನಪ್ರಿಯ ಹೋಂಡಾ ಸಿಟಿ, ಫೋಕ್ಸ್‌ವ್ಯಾಗನ್ ವೆಂಟೊ, ಫೋರ್ಡ್ ಫಿಯೆಸ್ಟಾ ಮತ್ತು ಹ್ಯುಂಡೈ ವರ್ನಾ ಮಾದರಿಗಳಿಗೆ ಸ್ಪರ್ಧೆ ಒಡ್ಡಲಿದೆ. ಇದು 7ರಿಂದ 9.50 ಲಕ್ಷ ರು.ಗಳ ಬೆಲೆಗಳಲ್ಲಿ ಮಾರುಕಟ್ಟೆ ತಲುಪುವ ನಿರೀಕ್ಷೆಯಿದೆ.


Click it and Unblock the Notifications








