ಪ್ರಸಕ್ತ ತಿಂಗಳಲ್ಲೇ ಮಾರುತಿ ಸ್ವಿಫ್ಟ್ ಆಟೋಮ್ಯಾಟಿಕ್ ಬಿಡುಗಡೆ?
ಎರಡು ದಿನಗಳ ಹಿಂದೆಯಷ್ಟೇ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿಯ ಅತ್ಯಂತ ಜನಪ್ರಿಯ ಸ್ವಿಫ್ಟ್ ಆಟೋಮ್ಯಾಟಿಕ್ ಕಾರು ಬಿಡುಗಡೆಯ ಮಾಡುವ ಬಗ್ಗೆ ವರದಿ ಮಾಡಿದ್ದೆವು.
ಇದೀಗ ಬಂದಿರುವ ವರದಿಯಂತೆ ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಆಟೋಮ್ಯಾಟಿಕ್ ಜೊತೆಗೆ ಪರಿಷ್ಕೃತಗೊಳ್ಳಲಿರುವ ಸ್ವಿಫ್ಟ್, ಪ್ರಸಕ್ತ ತಿಂಗಳಲ್ಲೇ ಬಿಡುಗಡೆಯಾಗುವ ಸಾಧ್ಯತೆಯಿದೆ.

ಈ ಮೂಲಕ ದೀಪಾವಳಿ ಹಬ್ಬದ ಆವೃತ್ತಿಗೆ ದೊಡ್ಡ ಕೊಡುಗೆಯನ್ನು ನೀಡಲು ಮಾರುತಿ ಮುಂದಾಗುತ್ತಿದೆ. ವರದಿಗಳ ಪ್ರಕಾರ ಸ್ವಿಫ್ಟ್ ಆಟೋಮ್ಯಾಟಿಕ್ ವೆರಿಯಂಟ್ ಸೆಪ್ಟೆಂಬರ್ 16ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ.
ಮಾರುತಿ ಸ್ವಿಫ್ಟ್ ಆಟೋಮ್ಯಾಟಿಕ್ ಪ್ರವೇಶವಾದ್ದಲ್ಲಿ ಇದು ಹ್ಯುಂಡೈ ಎಲೈಟ್ ಐ20 ಆವೃತ್ತಿಗೆ ಪ್ರತಿಸ್ಪರ್ಧಿಯಾಗಲಿದೆ. ಅಲ್ಲದೆ ಪರಿಷ್ಕೃತ ಬಂಪರ್, ಏರ್ ಡ್ಯಾಮ್, ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ ಮತ್ತು ಫ್ರಂಟ್ ಫಾಗ್ ಲ್ಯಾಂಪ್ ಹೆಚ್ಚು ಆಕರ್ಷಕವೆನಿಸಲಿದೆ.
ಇನ್ನೊಂದೆಡೆ 2014 ಸ್ವಿಫ್ಟ್ ಫೇಸ್‌ಲಿಫ್ಟ್, ತನ್ನ ಯುರೋಪಿಯನ್ ಮಾದರಿಯಲ್ಲಿರುವ ವೈಶಿಷ್ಟ್ಯಗಳನ್ನು ಪಡೆಯಲಿದೆ. ಇದು ಆಟೋಮ್ಯಾಟಿಕ್ ಹೆಡ್ ಲ್ಯಾಂಪ್, ಪಾರ್ಕಿಂಗ್ ಲ್ಯಾಂಪ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಹೊರಗಿನ ರಿಯರ್ ವ್ಯೂ ಮಿರರ್, ಡ್ಯುಯಲ್ ಟೋನ್ ಬೀಜ್ ಮತ್ತು ಬ್ಲ್ಯಾಕ್ ಇಂಟಿರಿಯರ್ ಸ್ಕೀಮ್, ಆರು ಏರ್ ಬ್ಯಾಗ್, ಮ್ಯೂಸಿಕ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿ, ಪರಿಷ್ಕೃತ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ಪುಶ್ ಸ್ಟಾರ್ಟ್/ಸ್ಟಾಪ್ ಬಟನ್ ಇರಲಿದೆ.


Click it and Unblock the Notifications