ಪ್ಯಾರಿಸ್‌ನತ್ತ ಹೆಜ್ಜೆಯನ್ನಿಟ್ಟ ಮಿಟ್ಸುಬಿಸಿ ಔಟ್ಲೆಂಡರ್ ಕಾನ್ಸೆಪ್ಟ್
ಪ್ರತಿಯೊಂದು ವಾಹನ ಪ್ರದರ್ಶನ ಮೇಳದಲ್ಲೂ ತನ್ನ ಅತ್ಯಾಧುನಿಕ ಪರಿಕಲ್ಪನೆಗಳೊಂದಿಗೆ ಮುಂದೆ ಬರುತ್ತಿರುವ ಜಪಾನ್ ಮೂಲದ ಮಿಟ್ಸುಬಿಸಿ ಸಂಸ್ಥೆಯು ಜಾಗತಿಕವಾಗಿ ಉತ್ತಮ ಹೆಸರು ಗಿಟ್ಟಿಸಿಕೊಂಡಿದೆ.
ಇದೇ ರೀತಿ 2012 ಮೋಟಾರು ಶೋದಲ್ಲೂ ಮಿಟ್ಸುಬಿಸಿ ಹೊಸತಾದ ಔಟ್ಲೆಂಡರ್ ಪ್ಲನ್ ಇನ್ ಹೈಬ್ರಿಡ್ ಎಲೆಕ್ಟ್ರಿಕ್ ವಾಹನ ಕಾನ್ಸೆಪ್ಟ್ ಎಸ್ ಪ್ರದರ್ಶಿಸಲಿದೆ. ನಿಮ್ಮ ಮಾಹಿತಿಗಾಗಿ 2012 ಪ್ಯಾರಿಸ್ ಮೋಟಾರು ಶೋದಲ್ಲಿ ಮಿಟ್ಸುಬಿಸಿ ಪ್ಲನ್ ಇನ್ ಹೈಬ್ರಿಡ್ ಎಲೆಕ್ಟ್ರಿಕ್ ಔಟ್ಲೆಂಡರ್ ಪ್ರದರ್ಶಿಸಿತ್ತು.

ಇದೀಗ ಇದರ ಮಗದೊಂದು ಸುಧಾರಿತ ವೆರಿಯಂಟ್ ಎಸ್ ಮಾದರಿಯನ್ನು ಪ್ರದರ್ಶಿಸಲು ಸಜ್ಜಾಗುತ್ತಿದೆ. ಮಿಟ್ಸುಬಿಸಿಯ ಎಂಎಂಸಿ ತಂಡ ಇದನ್ನು ವಿನ್ಯಾಸಗೊಳಿಸಿದೆ.
ಮಿಟ್ಸುಬಿಸಿ ಸಂಸ್ಥೆಯೇ ತಿಳಿಸುವಂತೆಯೇ ಹೊಸ ಆವೃತ್ತಿಯು ಒಳಗೂ ಹೊರಗಿನಿಂದಲೂ ಹೆಚ್ಚು ಬದಲಾವಣೆಗಳನ್ನು ಪಡೆದುಕೊಳ್ಳಲಿದೆ. ಇದು ಈಗಿನ ಮಾದರಿಗಿಂತಲೂ ಮತ್ತಷ್ಟು ಕ್ರೀಡಾತ್ಮಕ ವಿನ್ಯಾಸ ಪಡೆದುಕೊಳ್ಳಲಿದೆ.
ಇದರಲ್ಲಿ ನೀವು ಪೋರ್ ವೀಲ್ ಡ್ರೈವ್ ಅನುಭವ ಪಡೆದುಕೊಳ್ಳಬಹುದು. ನೈಜ ರಸ್ತೆ ಪರಿಸ್ಥಿತಿಯಲ್ಲದೆ ಒರಟಾದ ಮಾರ್ಗಗಳಲ್ಲೂ ಅದ್ಭುತ ಚಾಲನಾ ಅನುಭವ ನೀಡಲಿದೆ.
ಅಂದ ಹಾಗೆ ಮಿಟ್ಸುಬಿಸಿ ಔಟ್ಲೆಂಡರ್ ಪ್ಲನ್ ಇನ್ ಹೈಬ್ರಿಡ್ ಇಲೆಕ್ಟ್ರಿಕ್ ವೆಹಿಕಲ್ ಕಾನ್ಸೆಪ್ಟ್ ಎಸ್, 2.0 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು ಎರಡು ಎಲೆಕ್ಟ್ರಿಕ್ ಮೋಟಾರುಗಳನ್ನು ಪಡೆದುಕೊಳ್ಳಲಿದೆ.
ಹಾಗೆಯೇ ಗರಿಷ್ಠ 200 ಅಶ್ವಶಕ್ತಿ ಉತ್ಪಾದಿಸಲು ಸಕ್ಷಮವೆನಿಸಲಿದೆ. ಪ್ರಸ್ತುತ ಕಾರು ಕೇವಲ 11 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರಲಿದೆ.


Click it and Unblock the Notifications








