ರಸ್ತೆ ಸಾರಿಗೆ, ಸುರಕ್ಷತಾ ಮಸೂದೆ ಪರಿಷ್ಕರಣೆ
ಪ್ರಸ್ತಾವಿತ ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆಯಲ್ಲಿ ಕೆಲವೊಂದು ಗಮನಾರ್ಹ ಬದಲಾವಣೆಗೆ ಭಾರತ ರಸ್ತೆ ಸಾರಿಗೆ ಸಚಿವಾಲಯವು ಸೂಚನೆ ನೀಡಿದೆ. ಇದು ದೇಶದ ಕಾರು ತಯಾರಕರ ಪಾಲಿಗೆ ತುಂಬಾನೇ ನಿರಾಳತೆ ತರುವಂತಾಗಿದೆ.
ಇದಕ್ಕೂ ಮೊದಲು 100ರಷ್ಟು ದೂರು ದಾಖಲಾದ್ದಲ್ಲಿ ಅಂತಹ ನಿರ್ದಿಷ್ಟ ಮಾದರಿಯನ್ನು ಹಿಂಪಡೆಯುವಂತೆ ಸೂಚಿಸಲಾಗಿತ್ತು. ಆದರೆ ಪರಿಷ್ಕೃತ ಬಿಲ್‌ನಲ್ಲಿ ಇದರ ಬಗ್ಗೆ ಯಾವುದೇ ಉಲ್ಲೇಖಗಳಿಲ್ಲ.

ಈ ಪ್ರಸ್ತಾಪಿತ ಮಸೂದೆಯಲ್ಲಿ ವಾಹನಗಳ ಸುರಕ್ಷತೆ ಮೇಲೆ ನಿಗಾವಹಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಪ್ರಾಧಿಕಾರವನ್ನು ರಚಿಸುವಂತೆಯೂ ಮನವಾಗಿ ಮಾಡಲಾಗಿದೆ. ಇದು ವಾಹನಗಳಲ್ಲಿ ತೊಂದರೆ ಕಾಣಿಸಿಕೊಂದರೆ ಹಿಂದಕ್ಕೆ ಕರೆಯಿಸಿಕೊಳ್ಳುವ ಸಾಮರ್ಥ್ಯ ಹೊಂದಿರಲಿದೆ.
ಇವೆಲ್ಲವೂ ವಾಹನ ತಯಾರಕರ ಪಾಲಿಗೆ ನಿರಾಳತೆಯನ್ನುಂಟು ಮಾಡಿದೆ.


Click it and Unblock the Notifications