ಹೋಂಡಾ ಕಾರನ್ನು ಇನ್ನಷ್ಟು ರಂಜಿಸಲಿರುವ ಎನ್‌ವಿಡಿಯಾ ಸಿಸ್ಟಂ

Written By:

ನಿಮಗೆ ಕಾರು ಚಾಲನೆ ಇಷ್ಟವೇ? ಹಾಗಿದ್ದರೆ ನಿಮಗೊಂದು ಖುಷಿ ಸುದ್ದಿ ಇಲ್ಲಿದೆ. ಕಾರಿನಲ್ಲಿ ಚಾಲನೆ ವೇಳೆ ಗರಿಷ್ಠ ಅನುಭವ ನಿಮ್ಮದಾಗಿಸಲು ಅದರಲ್ಲಿ ಜೋಡಿಸಲಾಗಿರುವ ಮಾಹಿತಿ ಮನರಂಜನಾ ವ್ಯವಸ್ಥೆ ಕೂಡಾ ಅಷ್ಟೇ ಶ್ರೇಷ್ಠ ಗುಣಮಟ್ಟವನ್ನು ಹೊಂದಿರಬೇಕಾಗುತ್ತದೆ.

ಇವೆಲ್ಲವನ್ನು ಗಮನಿಸಿರುವ ಜಪಾನ್ ಮೂಲದ ಹೋಂಡಾ ಸಂಸ್ಥೆಯು, ತನ್ನ ಮಾದರಿಗಳಲ್ಲಿ ಪ್ರಖ್ಯಾತ ಎನ್‌ವಿಡಿಯಾ ಮಾಹಿತಿ ಮನರಂಜನಾ ಸಿಸ್ಟಂ ಜೋಡಣೆ ಮಾಡಲಿದೆ.

Honda Infotainment System

ವರದಿಗಳ ಪ್ರಕಾರ 2015 ಹೋಂಡಾ ಸಿವಿಕ್, ಸಿವಿಕ್ ಟೂರರ್ ಮತ್ತು ಸಿಆರ್‌-ವಿ ಮಾದರಿಗಳಲ್ಲಿ ಎನ್‌ವಿಡಿಯಾ ಟೆಗ್ರಾ ಮೊಬೈಲ್ ಪ್ರೊಸಸರ್ ಆಳವಡಿಕೆಯಾಗಲಿದೆ. ಇದು ಮುಂದಿನ ವರ್ಷ ಯುರೋಪ್ ತಲುಪಲಿದೆ.

ಇದರೊಂದಿಗೆ ಹೋಂಡಾ ಜಾಗತಿಕವಾಗಿ ಎನ್‌ವಿಡಿಯಾ ಮಾಹಿತಿ ಮರರಂಜನಾ ವ್ಯವಸ್ಥೆ ಆಳವಡಿಸುತ್ತಿರುವ 19ನೇ ಸಂಸ್ಥೆ ಎಂದೆನಿಸಿಕೊಳ್ಳಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಎನ್‌ವಿಡಿಯಾ ಉಪಾಧ್ಯಕ್ಷ ಹಾಗೂ ಜನರಲ್ ಮ್ಯಾನೇಜರ್ ರೊಬ್ ಸೊನ್‌ಗರ್, ಎನ್‌ವಿಡಿಯಾದ ಮುಂದುವರಿದ ಮೊಬೈಲ್ ತಂತ್ರಜ್ಞಾನಗಳನ್ನು ಹೋಂಡಾ ಹೊಸ ಸೆಗ್ಮೆಂಟ್ ವಾಹನಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಅಲ್ಲದೆ ನಿಮ್ಮ ಚಾಲನೆಯನ್ನು ಇನ್ನಷ್ಟು ಸುರಕ್ಷಿತವಾಗಿಸಲಿದೆ ಎಂದಿದ್ದಾರೆ.

Read in English: NVIDIA To Power Honda
English summary
NVIDIA has announced its NVIDIA Tegra mobile processor will power the new Honda Connect in-car audio and information system in the 2015 Honda Civic, Civic Tourer and CR-V, which is scheduled to launched next year in Europe.
Story first published: Saturday, October 11, 2014, 12:22 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark