ಪೆಟ್ರೋಲ್ ಬೆಲೆ 60, ಡೀಸೆಲ್ ಬೆಲೆ 50 ಪೈಸೆಯಷ್ಟು ಹೆಚ್ಚಳ
ಮಗದೊಮ್ಮೆ ಜನ ವಿರೋಧಿ ನೀತಿ ಅನುಸರಿಸಿರುವ ಕೇಂದ್ರ ಸರಕಾರ, ಇಂಧನ ಬೆಲೆಗಳನ್ನು ಹೆಚ್ಚಗೊಳಿಸಿದೆ. ಪರಿಷ್ಕೃತ ದರದಂತೆ ಪೆಟ್ರೋಲ್ ಬೆಲೆಯಲ್ಲಿ 60 ಹಾಗೂ ಡೀಸೆಲ್ ಬೆಲೆ 50 ಪೈಸೆಗಳಷ್ಟು ಹೆಚ್ಚಳಗೊಂಡಿದೆ.
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಇಂಧನ ಬೆಲೆ ಏರಿಕೆಗೊಳಿಸಿರುವುದು ಅಚ್ಚರಿ ಮೂಡಿಸಿದೆ. ಪರಿಷ್ಕೃತ ದರ ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಈ ಮೂಲಕ ಪ್ರಸಕ್ತ ಸಾಲಿನಲ್ಲಿ ಎರಡನೇ ಬಾರಿಗೆ ಪೆಟ್ರೋಲ್ ದರಗಳಲ್ಲಿ ಏರಿಕೆ ಕಂಡುಬರುತ್ತಿದೆ. ಈ ಹಿಂದೆ ಜನವರಿ 14ರಂದು ದರ ಏರಿಕೆಗೊಳಿಸಲಾಗಿತ್ತು. ಅದೇ ರೀತಿ ಕಳೆದ ವರ್ಷದಲ್ಲಿ ಡೀಸೆಲ್ ದರಗಳಲ್ಲಿ ಎಂಟು ರುಪಾಯಿಗಳಷ್ಟು ಹೆಚ್ಚಳ ಕಂಡುಬಂದಿತ್ತು.

ಪೆಟ್ರೋಲ್(ರುಪಾಯಿಗಳಲ್ಲಿ)
ಬೆಂಗಳೂರು:
ಪರಿಷ್ಕೃತ ದರ - 80.18
ಹಿಂದಿನ ದರ- 79.38
ದೆಹಲಿ
ಪರಿಷ್ಕೃತ ದರ - 73.16
ಹಿಂದಿನ ದರ- 72.43
ಮುಂಬೈ
ಪರಿಷ್ಕೃತ ದರ - 82.07
ಹಿಂದಿನ ದರ- 81.31
ಕೋಲ್ಕತ್ತಾ
ಪರಿಷ್ಕೃತ ದರ - 80.96
ಹಿಂದಿನ ದರ- 80.20
ಚೆನ್ನೈ
ಪರಿಷ್ಕೃತ ದರ - 75.71
ಹಿಂದಿನ ದರ- 76.48
ಡೀಸೆಲ್(ರುಪಾಯಿಗಳಲ್ಲಿ)
ಬೆಂಗಳೂರು:
ಪರಿಷ್ಕೃತ ದರ - 60
ಹಿಂದಿನ ದರ- 59.38
ದೆಹಲಿ
ಪರಿಷ್ಕೃತ ದರ - 55.48
ಹಿಂದಿನ ದರ- 54.91
ಮುಂಬೈ
ಪರಿಷ್ಕೃತ ದರ - 63.86
ಹಿಂದಿನ ದರ- 63.23
ಕೋಲ್ಕತ್ತಾ
ಪರಿಷ್ಕೃತ ದರ - 60.09
ಹಿಂದಿನ ದರ- 59.50
ಚೆನ್ನೈ
ಪರಿಷ್ಕೃತ ದರ - 59.17
ಹಿಂದಿನ ದರ- 58.56


Click it and Unblock the Notifications