ಪೆಟ್ರೋಲ್ ಬೆಲೆ ಮತ್ತೆ 2.50 ರು. ಇಳಿಕೆ ಸಾಧ್ಯತೆ
ಸ್ವಾತಂತ್ರೋತ್ಸವ ಸಂಭ್ರಮದಲ್ಲಿರುವ ದೇಶದ ಜನತೆಗೆ ಮಗದೊಂದು ಸಿಹಿ ಸುದ್ದಿ ಆಗಮನವಾಗಿದ್ದು, ಪೆಟ್ರೋಲ್ ಬೆಲೆಗಳಲ್ಲಿ ಇಳಿಕೆ ಕಂಡುಬರುವ ಸಾಧ್ಯತೆಯಿದೆ.
ಮುಂಬರುವ ಸ್ವಾತಂತ್ರ್ಯೋತ್ಸವ ದಿನದಂದು ಪೆಟ್ರೋಲ್ ದರಗಳಲ್ಲಿ 2.50 ರು.ಗಳಷ್ಟು ಇಳಿಕೆ ಕಂಡುವ ಸಾಧ್ಯತೆಯಿದೆ ಎಂದು ಇಂಡಿಯನ್ ಒಯಿಲ್ ಕಾರ್ಪ್ ಸೂಚನೆ ನೀಡಿದೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಲ್ ದರ ಇಳಿಕೆಯ ಪರಿಣಾಮ ದೇಶಿಯ ಮಾರುಕಟ್ಟೆಯಲ್ಲಿ ಇದರ ಪ್ರಭಾವ ಕಂಡುಬರಲಿದೆ. ಇನ್ನೊಂದೆಡೆ ಡಾಲರ್ ಎದುರುಗಡೆ ರುಪಾಯಿ ತನ್ನ ಮೌಲ್ಯ ವೃರ್ಧಿಸಿಕೊಳ್ಳುತ್ತಿದೆ.
ಅನಿಯಂತ್ರಿತ ಉತ್ಪನ್ನವಾಗಿರುವ ಪೆಟ್ರೋಲ್ ದರವನ್ನು ಪ್ರತಿ 15 ದಿನಗಳಿಗೊಮ್ಮೆ ಪರಿಷ್ಕೃತಗೊಳಿಸಲಾಗುತ್ತದೆ. ರಾಷ್ಟ್ರ ರಾಜಧಾನಿಯಲ್ಲಿ ಆಗಸ್ಟ್ ಆರಂಭದಲ್ಲಿ ಪೆಟ್ರೋಲ್ ದರಗಳಲ್ಲಿ ರು. 1.09 ಇಳಿಕೆ ಕಂಡುಬಂದಿತ್ತು. ಸದ್ಯ ಲೀಟರ್‌ಗೆ 72.51 ರು.ಗಳಿಷ್ಟಿದೆ.


Click it and Unblock the Notifications








