ಸಂಪೂರ್ಣ ಎಲೆಕ್ಟ್ರಿಕ್‌ಮಯವಾಗಲಿದೆ ಭೂತಾನ್

By Nagaraja

ಇತ್ತೀಚೆಗಷ್ಟೇ ಭಾರತ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ತಮ್ಮ ಚೊಚ್ಚಲ ವಿದೇಶ ಪ್ರಯಾಣವನ್ನು ನೆರೆಯ ಭೂತಾನ್ ರಾಷ್ಟ್ರಕ್ಕೆ ಭೇಟಿ ಕೊಡುವ ಮೂಲಕ ಆರಂಭಿಸಿದ್ದರು. ಈಗ ಈ ಪರ್ವತ ರಾಷ್ಟ್ರದಿಂದ ಮಗದೊಂದು ಸಿಹಿ ಸುದ್ದಿ ಬಂದಿದ್ದು, ಭೂತಾನ್ ಸದ್ಯದಲ್ಲೇ ಸಂಪೂರ್ಣ ಮಾಲಿನ್ಯ ರಹಿತ ರಾಷ್ಟ್ರ ಎನಿಸಿಕೊಳ್ಳಲಿದೆ. ಅದು ಹೇಗೆ ಅಂತೀರಾ?

ಹೌದು, ಭೂತಾನ್ ಪ್ರಧಾನ ಮಂತ್ರಿ ಲಯೊಂಚೆನ್ ಶೆರಿಂಗ್ ತೊಬ್ಗೆ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಹೆಚ್ಚು ಪ್ರೋತ್ಸಾಹ ತುಂಬಲಿದ್ದಾರೆ. ಸುಸ್ಥಿರ ಸಾರಿಗೆ ಸಂಪರ್ಕ ರಚಿಸುವ ಮೂಲಕ ದೇಶದ ಜನತೆಯು ಸಂತೃಪ್ತಿಯ ಜೀವನ ನಡೆಸುವುದನ್ನು ಭೂತಾನ್ ಪ್ರಧಾನಿ ಬಯಸುತ್ತಿದ್ದಾರೆ.

 Bhutan

ಇದರಂಗವಾಗಿ ಪ್ರಾರಂಭದಲ್ಲಿ 2,000ದಷ್ಟು ವಿದ್ಯುತ್ ಚಾಲಿತ ಕಾರುಗಳನ್ನು ಭೂತಾನ್‌ನಲ್ಲಿ ಪರಿಚಯಿಸಲಾಗುವುದು ಎಂದು ರೆನೊ-ನಿಸ್ಸಾನ್ ಸಿಇಒ ಆಗಿರುವ ಕಾರ್ಲೋಸ್ ಘೋಸ್ನ್ ತಿಳಿಸಿದ್ದಾರೆ.

ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಹೊಗೆಯಿಂದ ಸಂಪೂರ್ಣ ಮುಕ್ತಿ ಪಡೆಯುವುದು ಪ್ರಮುಖ ಉದ್ದೇಶವಾಗಿದೆ. ಈ ಸಂಬಂಧ ಇತ್ತೀಚೆಗಿನ ತಮ್ಮ ಜಪಾನ್ ಭೇಟಿ ವೇಳೆ ನಿಸ್ಸಾನ್ ಹಾಗೂ ಮಿಟ್ಸುಬಿಸಿ ಸಂಸ್ಥೆಗಳ ಜೊತೆ ಭೂತಾನ್ ಪ್ರಧಾನಿ ಚರ್ಚೆ ನಡೆಸಿದ್ದರು. ಎಲ್ಲ ಇಂಧನ ನಿಯಂತ್ರಿತ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಬದಲಾಯಿಸುವುದು ಸಹ ಯೋಜನೆಯ ಗುರಿಯಾಗಿದೆ.

More from DriveSpark

Article Published On: Wednesday, July 9, 2014, 14:06 [IST]
English summary
Bhutan is looking to be a pollution free country very soon. The Prime Minister wants all the gasoline powered cars to be made electric powered within an as-yet-unknown time period. Bhutan is looking for sustainable transportation that will keep citizens happy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+