ರೆಡ್ ಬುಲ್ ಎಫ್1 ಘಟಕದಿಂದ 60 ಟ್ರೋಫಿ ಕಳವು
ಇಂಗ್ಲೆಂಡ್‌ನ ಬಕ್ಕಿಂಮ್‌ಹ್ಯಾಮ್‌ಶೈರ್‌ನ ಮಿಲ್ಟನ್ ಕೇನೆಸ್‌ನಲ್ಲಿ ಸ್ಥಿತಗೊಂಡಿರುವ ರೆಡ್ ಬುಲ್ ಎಫ್1 ಘಟಕಕ್ಕೆ ದಾಳಿ ನಡೆಸಿರುವ ಅಜ್ಞಾತರು 60ರಷ್ಟು ಬೆಲೆಬಾಳುವ ಟ್ರೋಫಿಗಳನ್ನು ಕಳವು ಮಾಡಿರುವುದಾಗಿ ತಿಳಿದು ಬಂದಿದೆ.
ವಿದೇಶಿ ನಂಬರ್ ಪ್ಲೇಟ್ ದಾಖಲಾತಿಯನ್ನು ಹೊಂದಿರುವ ಎರಡು ಕಾರಿನಲ್ಲಿ ದಾಳಿ ನಡೆಸಿರುವ ಅಜ್ಞಾತರು, ಬೆಲೆ ಬಾಳುವ ಟ್ರೋಫಿಗಳನ್ನು ಅಪಹರಿಸಿದ್ದಾರೆ.

ಕಳೆದ ಅನೇಕ ವರ್ಷಗಳಿಂದ ರೆಡ್ ಬುಲ್ ರೇಸಿಂಗ್ ತಂಡವು ಗೆದ್ದು ಬಂದಿದ್ದ ಟ್ರೋಫಿಗಳು ಇದರಲ್ಲಿದ್ದು, ತಂಡದ ಪಾಲಿಗೆ ಮಹತ್ವದೆನಿಸಿದೆ ಎಂದು ಮೂಲಗಳು ತಿಳಿಸಿವೆ.
ರೆಡ್ ಬುಲ್ ಘಟಕಕ್ಕೆ ಕಾರಿನಲ್ಲಿ ನೇರ ದಾಳಿ ನಡೆಸಿದ್ದ ಕಳ್ಳರ ತಂಡವು ಹೆಚ್ಚಿನ ಹಾನಿಯನ್ನುಂಟು ಮಾಡಿದೆ. ಆರು ಮಂದಿಯ ತಂಡ 4x4 ಮರ್ಸಿಡಿಸ್ ಬೆಂಝ್ ಕಾರಿನಲ್ಲಿ ದಾಳಿ ನಡೆಸಿರುವ ಬಗ್ಗೆ ತಿಳಿದು ಬಂದಿದೆ.
ಆದರೆ ದಾಳಿಯ ಹಿಂದಿನ ಉದ್ದೇಶವಾದರೂ ಏನಾಗಿತ್ತು? ಎಂಬುದು ಇನ್ನೂ ತಿಳಿದು ಬಂದಿಲ್ಲ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.


Click it and Unblock the Notifications








