ಹಬ್ಬದ ಆವೃತ್ತಿಯಲ್ಲಿ ರೆನೊ ಡಸ್ಟರ್ 4 ವೀಲ್ ಡ್ರೈವ್ ಲಾಂಚ್

By Nagaraja

ರೆನೊದಿಂದ ಆಗಮನವಾಗಲಿರುವ ಅತ್ಯಂತ ಶಕ್ತಿಶಾಲಿ ಡಸ್ಟರ್ ಫೋರ್ ವೀಲ್ ಡ್ರೈವ್ ವೆರಿಯಂಟ್ ಬಿಡುಗಡೆಗೆ ಕಾಲ ನಿಗದಿಯಾಗಿದೆ. ಈ ಬಹುನಿರೀಕ್ಷಿತ ಕಾರು ಮುಂಬರುವ ಹಬ್ಬದ ಆವೃತ್ತಿಯಲ್ಲಿ ಅಂದರೆ ಅಕ್ಟೋಬರ್ ತಿಂಗಳಲ್ಲಿ ಲಾಂಚ್ ಆಗಲಿದೆ.

ಆಲ್ ವೀಲ್ ಡ್ರೈವ್ ವೆರಿಯಂಟ್‌ಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದನ್ನು ಗಮನ ಹರಿಸಿರುವ ರೆನೊ, ಭಾರತೀಯ ಮಾರುಕಟ್ಟೆಗೂ ಫೋರ್ ವೀಲ್ ಡ್ರೈವ್ ಕಾರನ್ನು ಪರಿಚಯಿಸಲು ನಿರ್ಧರಿಸಿದೆ.

Renault Duster

ನಿಮ್ಮ ಮಾಹಿತಿಗಾಗಿ, ರೆನೊ ತನ್ನ ಚೆನ್ನೈ ಘಟಕದಲ್ಲಿ ಈಗಾಗಲೇ ಬಲಬದಿಯ ಡ್ರೈವಿಂಗ್ ವ್ಯವಸ್ಥೆ ಹೊಂದಿರುವ ರೆನೊ ಫೋರ್ ವೀಲ್ ಡ್ರೈವ್ ಕಾರನ್ನು ನಿರ್ಮಿಸುತ್ತಿದ್ದು, ಆದರೆ ಇದು ಡ್ಯಾಸಿಯಾ ಬ್ಯಾಡ್ಜ್‌ನಲ್ಲಿ ಬ್ರಿಟನ್‌ನಲ್ಲಿ ಮಾರಾಟವಾಗುತ್ತಿದೆ.

ರೆನೊ ಡಸ್ಟರ್ 4 ವೀಲ್ ಡ್ರೈವ್ 110 ಅಶ್ವಶಕ್ತಿ ಉತ್ಪಾದಿಸುವ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದ್ದು, 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಇರಲಿದೆ. ಆದರೆ ಸದ್ಯಕ್ಕೆ ಆಟೋಮ್ಯಾಟಿಕ್ ವೆರಿಯಂಟ್ ಬರುವ ಸಾಧ್ಯತೆ ಕಡಿಮೆಯಾಗಿದೆ.

ನಿಸ್ಸಾನ್ ಎಕ್ಸ್-ಟ್ರೈಲ್ ಎಸ್‌ಯುವಿನಂತೆಯೇ ಡಸ್ಟರ್ ಫೋರ್ ವೀಲ್ ಡ್ರೈವ್ ವ್ಯವಸ್ಥೆಯಿರಲಿದೆ. ಇಲ್ಲಿ ಗಮನಾರ್ಹ ಸಂಗತಿಯೆಂದರೆ ಡಸ್ಟರ್ ಫೋರ್ ವೀಲ್ ಡ್ರೈವ್ ವೆರಿಯಂಟ್ ಬಂದ ಬೆನ್ನಲ್ಲೇ ಈ ತಂತ್ರಾಂಶವು ನಿಸ್ಸಾನ್ ಟೆರನೊಗೂ ಆಳವಡಿಸುವ ಸಾಧ್ಯತೆಯಿದೆ.

ಡಸ್ಟರ್ ಫೋರ್ ವೀಲ್ ಡ್ರೈವ್ ಸಿಸ್ಟಂ
ಮೂರು ಡ್ರೈವಿಂಗ್ ಮೋಡ್‌ಗಳನ್ನು ಡಸ್ಟರ್ ಫೋರ್ ವೀಲ್ ಡ್ರೈವ್ ಸಿಸ್ಟಂ ಹೊಂದಿರಲಿದೆ. ಇದರಲ್ಲಿ ಟು ವೀಲ್ ಡ್ರೈವ್, ಆಟೋ ಹಾಗೂ ಲಾಕ್ ಪ್ರಮುಖವಾಗಿರಲಿದೆ. ಈ ಪೈಕಿ 2 ವೀಲ್ ಡ್ರೈವ್ ಮುಂಭಾಗದ ಚಕ್ರಗಳಿಗೂ, ಆಟೋದಲ್ಲಿ ಆನ್ ಬೋರ್ಡ್ ಕಂಪ್ಯೂಟರ್ ನಿರ್ದಿಷ್ಟ ಪ್ರಮಾಣದ ಟಾರ್ಕ್ ಎಲ್ಲ ಚಕ್ರಗಳಿಗೂ ವಿತರಿಸಲಿದೆ. ಇನ್ನು ಲಾಕ್ ಎಂಬುದು ಖಾಯಂ ಫೋರ್ ವೀಲ್ ಡ್ರೈವ್ ಆಗಿರಲಿದ್ದು, ಎಲ್ಲ ನಾಲ್ಕು ಚಕ್ರಗಳಿಗೂ ಸಮಾನ ಪ್ರಮಾಣದ ಶಕ್ತಿ ವಿತರಿಸಲಿದೆ.

ಎಂಜಿನ್
ಅಂದ ಹಾಗೆ ಡಸ್ಟರ್ ಫೋರ್ ವೀಲ್ ಡ್ರೈವ್, 1.5 ಲೀಟರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 110 ಅಶ್ವಶಕ್ತಿ (248 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಈ ಫೋರ್ ವೀಲ್ ಡ್ರೈವ್ ವ್ಯವಸ್ಥೆಯು ಡಸ್ಟರ್ ಆರ್‌ಎಕ್ಸ್‌ಎಲ್ ವೆರಿಯಂಟ್‌ನಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.

ವಿನ್ಯಾಸ
ಅಂತಿಮವಾಗಿ ಡಸ್ಟರ್ ಫೋರ್ ವೀಲ್ ಡ್ರೈವ್ ವಿನ್ಯಾಸದ ಬಗ್ಗೆ ಮಾತನಾಡುವುದಾದ್ದಲ್ಲಿ ಇತ್ತೀಚೆಗಷ್ಟೇ ಬಿಡುಗಡೆಯಾದ ಡಸ್ಟರ್ ಅಡ್ವೆಂಚರ್ ಎಡಿಷನ್‌ಗೆ ಸಾಮತ್ಯೆಯನ್ನು ಪಡೆಯಲಿದೆ. ಇದರಲ್ಲಿ ಫ್ರಂಟ್ ಬಂಪರ್ ಪ್ರೊಜೆಕ್ಟರ್ ಜತೆ ಇಂಟೇಗ್ರೇಟಡ್ ಲ್ಯಾಂಪ್ ಹಾಗೂ ಬಾಹ್ಯ ದೇಹದಲ್ಲಿ ಪ್ಲಾಸ್ಟಿಕ್ ಹೋದಿಕೆ ಇರಲಿದೆ.

More from DriveSpark

Article Published On: Thursday, June 12, 2014, 11:34 [IST]
English summary
Renault Duster 4WD will be launched in India during October, right during the festive season. Demand for an all-wheel drive variant of the Duster has been high and realising this, Renault has decided to introduce it into the Indian market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+